ಖಾಸಗಿ ಶಾಲೆಗಳಿಂದ ಫೀಸ್ ವಸೂಲಿಃ ಇಂದು ಪೋಷಕರಿಂದ ಪ್ರೋಟೆಸ್ಟ್
PARENT – PROTEST
ಖಾಸಗಿ ಶಾಲೆಗಳಿಂದ ಹೆಚ್ಚಿನ ಫೀಸ್ ವಸೂಲಿ ಪೋಷಕರ ಆಕ್ರೋಶ
ಫೀಸ್ ವಸೂಲಿ ಇಂದು ಬೀದಿಗಿಳಿಯಲಿರುವ ಪೋಷಕರು
ಬೆಂಗಳೂರಃ ಕೋವಿಡ್ ಮಹಾಮಾರಿಯಿಂದಾಗಿ ಕಳೆದ 10 ತಿಂಗಳಿಂದ ಶಾಲಾ ಕಾಲೇಜು ಬಂದ್ ಆಗಿವೆ. ಶೈಕ್ಷಣಿಕವಾಗಿ ಸಾಕಷ್ಟು ತೊಂದರೆ ಅನುಭವಿಸಿದ್ದಾಗಿದೆ. ಕೋವಿಡ್ ಹಿನ್ನೆಲೆ ಎಲ್ಲಾ ಕ್ಷೇತ್ರದಲ್ಲೂ ಸಂಕಷ್ಟ ಎದುರಾಗಿದೆ.
ಈ ನಡುವೆ ಖಾಸಗಿ ಶಾಲೆಗಳು ಆನ್ ಲೈನ್ ಕ್ಲಾಸ್ ತೆಗೆದುಕೊಂಡು ಬರೋಬರ್ರಿ ಫೀಸ್ ವಸೂಲಿಗೆ ಮುಂದಾಗಿರುವದನ್ನು ಫೋಷಕರು ಖಂಡಿಸಿ ರಸ್ತೆಗಿಳಿದು ಪ್ರತಿಭಟನೆಗೆ ಮುಂದಾಗಿದ್ದಾರೆ.
ರಾಜ್ಯ ಸರ್ಕಾರ ಶಾಲಾ ಕಾಲೇಜು ಆರಂಭಿಸಲು ಮುಂದಾಗಿದ್ದು, ಆದರೆ ಖಾಸಗಿ ಶಾಲೆಗೆ ಫೀಸ್ ಕಟ್ಟುವ ಕುರಿತು ಯಾವುದೇ ಸ್ಪಷ್ಟನೆ ನೀಡುತ್ತಿಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿನ್ನೆಲೆ ಇಂದು ಬೆಂಗಳೂರಿನ ಮೈಸೂರ ಬ್ಯಾಂಕ್ ಸರ್ಕಲ್ ನಲ್ಲಿ ಪೋಷಕರಿಂದ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಪೋಷಕರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಖಾಸಗಿ ಶಾಲಾ ಶಿಕ್ಷಕರು ಫೀಸ್ ತೆಗೆದುಕೊಳ್ಳಲಿ ಆದರೆ ಲಾಭ ತೆಗೆದುಕೊಳ್ಳೋದು ಬೇಡ ಎಂದು ಪೋಷಕರು ವಾದಿಸುತ್ತಿದ್ದಾರೆ.
ಖಾಸಗಿ ಶಾಲಾ ಶಿಕ್ಷಕರಿಗೆ ನೀಡಲು ಬೇಕಾಗುವ ಸಂಬಳದಷ್ಟು ಮಾತ್ರ ಫೀಸ್ ತೆಗೆದುಕೊಳ್ಳಬೇಕು. ಆಯಾ ಶಾಲಾ ಶಿಕ್ಷಕರ ಸಂಖ್ಯೆ ಆದರಿಸಿ ಸರ್ಕಾರವೇ ಈ ವರ್ಷದ ಫೀಸ್ ನಿಗದಿ ಮಾಡಲಿ ಎಂದು ಪೋಷಕರು ಒತ್ತಾಯಿಸಿದ್ದಾರೆ.
ಎಲ್ಲಾ ವರ್ಗ,ಕ್ಷೇತ್ರದಲ್ಲಿ ಕೋವಿಡ್ ಪರಿಣಾಮ ಸಂಕಷ್ಟಕ್ಕೀಡಾಗಿದ್ದು ಬದುಕು ದರ್ಬಲವಾಗಿದೆ. ಇದನ್ನು ಮನಗಂಡು ಸರ್ಕಾರ ಎಲ್ಲರಿಗೂ ನ್ಯಾಯ ಒದಗಿಸಲಿ ಎಂದು ಪೋಷಕರ ಸಂಘದ ರಮೇಶ ಆಗ್ರಹಿಸಿದ್ದಾರೆ.
ಇಂದು ಬೆಳಗ್ಗೆ 10 ಗಂಟೆಯಿಂದ ಮದ್ಯಾಹ್ನ 1 ಗಂಟೆವರೆಗೂ ಮೈಸೂರ ಸರ್ಕಲ್ ಹತ್ತಿರ ಪೋಷಕರಿಂದ ಪ್ರತಿಭಟನೆ ನಡೆಯಲಿದೆ. ಎಲ್ಲರೂ ಪಾಲ್ಗೊಳ್ಳಲು ಪೋಷಕರ ತಂಡ ಕರೆ ನೀಡಿದೆ. ಕೋವಿಡ್ ಪರಿಣಾಮ ಎಲ್ಲರೂ ಸಂಕಷ್ಟದಲ್ಲಿದ್ದಾರೆ. ಎಲ್ಲರಿಗೂ ಸಮನಾಗಿ ನ್ಯಾಯ ಒದಗಿಸಿ ಕೊಡುವಂತೆ ಸರ್ಕಾರಕ್ಕೆ ಧ್ವನಿ ಮುಟ್ಟಿಸುವ ಎಚ್ಚರಿಸುವ ಕೆಲಸಕ್ಕೆ ಸರ್ವರೂ ಭಾಗವಹಿಸಿ ಎಂದು ಪೋಷಕರ ತಂಡ ಮಾಧ್ಯಮಗಳಿಗೆ ಮನವಿ ಮಾಡಿದೆ.