ಎರಡು ತಲೆ ಹೊಂದಿರುವ ಒಂದು ದೇಹದ ಮಗು ಜನನ!
ಸೀತಾಪುರ: ಹಿಂದೆಯೂ ವಿಚಿತ್ರ ಎನಿಸುವ ಆಕೃತಿಯ ಮಕ್ಕಳು ಜನಿಸುತ್ತಿದ್ದರು. ಆದರೆ ಇಂದು ತಂತ್ರಜ್ಞಾನ ಬಹಳ ಮುಂದುವರಿದ ಕಾರಣ ಇಂತಹ ಪ್ರಕರಣಗಳು ಬಹಳ ಕಡಿಮೆಯಾಗಿದೆ. ಆದರೆ ಇದೀಗ ಉತ್ತರ ಪ್ರದೇಶದ ಸೀತಾಪುರದ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ವಿಶಿಷ್ಟವಾದ ಮಗುವಿಗೆ ಜನ್ಮ ನೀಡಿದ್ದಾರೆ. ಆಕೆಯ ಮಗು ಹುಟ್ಟುವಾಗ ಎರಡು ಮುಖಗಳು, ನಾಲ್ಕು ತೋಳುಗಳು ಮತ್ತು ನಾಲ್ಕು ಕಾಲುಗಳೊಂದಿಗೆ ಜನಿಸಿದೆ. ಮಗುವಿನ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಅಸಾಧಾರಣ ಮಗುವನ್ನು ನೋಡಲು ಅನೇಕ ಜನರು ಆಸ್ಪತ್ರೆಗೆ ಬರುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಕ್ರಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಕಿರಾತಾಪುರ ಗ್ರಾಮದ ಕೊರಿಯನ್ ಪುರ್ವಾ ಮೂಲದ ರಮಾ ದೇವಿ (40) ಈ ವಿಶಿಷ್ಟವಾದ ಮಗುವಿಗೆ ಜನ್ಮ ನೀಡಿದ ತಾಯಿ. ಅವರಿಗೆ ತಡರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಪಿಎಚ್ಸಿ ರೇವಾನ್ಗೆ ಕರೆದೊಯ್ಯಲಾಯಿತು. ಮುಂಜಾನೆ 5 ಗಂಟೆ ಸುಮಾರಿಗೆ ಮಹಿಳೆ ಈ ಅಸಾಧಾರಣ ಮಗುವಿಗೆ ಜನ್ಮ ನೀಡಿದ್ದಾರೆ. ನಂತರ ಗ್ರಾಮಸ್ಥರು ಪವಾಡಸದೃಶ ಮಗುವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ಬಂದರು. ಆದರೆ, ಸೋಮವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಮಗು ಮೃತಪಟ್ಟಿದೆ.