ಪ್ರಮುಖ ಸುದ್ದಿ

ದುರಾಸೆಯೇ ಭ್ರಷ್ಟಾಚಾರಕ್ಕೆ ಮೂಲ – ನ್ಯಾ.ಬಿ.ಎಸ್.ರೇಖಾ

ಸಾಮಾಜಿಕ ಪಿಡುಗು ನಿರ್ಮೂಲನೆಗೆ ಪ್ರಾಮಾಣಿಕತೆ ಅಗತ್ಯ

ಭ್ರಷ್ಟಾಚಾರ ನಿರ್ಮೂಲನೆಗೆ ಪ್ರಾಮಾಣಿಕತೆ, ನಿಷ್ಠೆ ಅಗತ್ಯ
– ಜಿಲ್ಲಾ ನ್ಯಾಯಾಧೀಶೆ  ಬಿ.ಎಸ್.ರೇಖಾ ಅಭಿಮತ

ಯಾದಗಿರಿಃ ಭ್ರಷ್ಟಾಚಾರ ಸಾಮಾಜಿಕ ಪಿಡುಗಾಗಿದ್ದು,ಇದರ ನಿರ್ಮೂಲನೆಗೆ ಪ್ರಾಮಾಣಿಕತೆ ಹಾಗೂ ನಿಷ್ಠೆ ಬಹುಮುಖ್ಯವಾಗಿದೆ ಎಂದು ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ಬಿ.ಎಸ್.ರೇಖಾ ಅಭಿಮತ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಕರ್ನಾಟಕ ಲೋಕಾಯುಕ್ತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ಭ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹವನ್ನು ಉದ್ಘಾಟಿಸಿ, ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು.

ಆಸೆಯೇ ದುಃಖಕ್ಕೆ ಮೂಲ ಅದರಂತೆ ದುರಾಸೆಯೆ ಭ್ರಷ್ಟಾಚಾರಕ್ಕೆ ಮೂಲ ಎಂದ ಅವರು ಕೌಟುಂಬಿಕ ಆಸೆ,ಆಕಾಂಕ್ಷೆಗಳ ಪೂರೈಕೆ ಗೆ ಸೂಕ್ತ ಉದ್ಯೋಗ,ವೇತನ ಇದ್ದಲ್ಲಿ ಭ್ರμÁ್ಟಚಾರದ ನಿಯಂತ್ರಣಕ್ಕೆ ಅನುಕೂಲ ಎಂದು ಹೇಳಿದರು.

ದೇಶಭಕ್ತಿ ಇದ್ದಲ್ಲಿ ಭ್ರಷ್ಟಾಚಾರ ದೂರ ಉಳಿಯಲು ಸಾಧ್ಯ. ನೆರೆ ಹೊರೆಯವರ ಜೀವನ ಶೈಲಿಗೆ ಮಾರುಹೋಗದೆ ಕೌಟುಂಬಿಕ ಹಾಗೂ ಮಕ್ಕಳ ಭವಿಷ್ಯದ ಹಿತದೃಷ್ಠಿಯಿಂದ ಭ್ರμÁ್ಟಚಾರದಿಂದ ದೂರ ಉಳಿದು, ಜೀವನದಲ್ಲಿ ಎಲ್ಲರೂ ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಬೇಕು. ಈ ಭಾಗದಲ್ಲಿ ಶೈಕ್ಷಣಿಕವಾಗಿ ಮಕ್ಕಳು ಮುಂದೆ ಬರಲು ನುರಿತ ಶಿಕ್ಷಕರು ಇರುವ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಕು. ಸ್ಪರ್ಧಾತ್ಮಕವಾಗಿ ಅವರನ್ನು ಬೆಳೆಸಿ ಅವರ ಭವಿಷ್ಯ ರೂಪಿಸಬೇಕು.ಭ್ರಷ್ಟಾಚಾರ ನಿರ್ಮೂಲನೆಗೆ ಎಲ್ಲ ಇಲಾಖೆಗಳು ಕೈಜೋಡಿಸುವಂತೆ ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಶ್ರೀ ಮರಿಯಪ್ಪ ಅವರು ಮಾತನಾಡಿ, ನಮ್ಮನ್ನು ನಾವು ಪ್ರಾಮಾಣಿಕವಾಗಿ ಸರಿಪಡಿಸಿಕೊಂಡಾಗ ಮಾತ್ರ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ. ಅಧಿಕಾರಿಗಳು, ಆಡಳಿತ ವರ್ಗದವರು ಪ್ರಾಮಾಣಿಕ, ಪಾರದರ್ಶಕರಾದಲ್ಲಿ ಭ್ರಷ್ಟಾಚಾರ ತಡೆಯಲು ಸಾಧ್ಯ ಎಂದು ಹೇಳಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ ಅವರು ಅಧಿಕಾರಿ,ಸಿಬ್ಬಂದಿಗಳು ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆಗಳ ಬಗ್ಗೆ ಅರಿವು ಹೊಂದಬೇಕು.ಇಂತಹ ಕಾರ್ಯಾಗಾರಗಳು ಹೆಚ್ಚು ಉಪಯುಕ್ತವಾಗಿವೆ ಎಂದು ಹೇಳಿದರು.

ಲೋಕಾಯುಕ್ತ ಎಸ್.ಪಿ.ಶ್ರೀ.ಉಮೇಶ್.ಬಿ.ಕೆ ಅವರು ಮಾತನಾಡಿ ಸರ್ಕಾರದಿಂದ ಏಳನೇ ವೇತನ ಆಯೋಗ ಜಾರಿಯಾದ ನಂತರ ಸರ್ಕಾರಿ ನೌಕರರಿಗೆ ತೃಪ್ತಿಕರವಾದ ವೇತನ ದೊರೆಯುತ್ತಿದೆ. ಉತ್ತಮವಾಗಿ ಸಾರ್ವಜನಿಕ ಸೇವೆ ಮಾಡುವ ಮೂಲಕ ಕುಟುಂಬ, ಸಮಾಜ, ರಾಜ್ಯದಲ್ಲಿ ತಮ್ಮ ಕೀರ್ತಿ ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿ ಲೋಕಾಯುಕ್ತ ಕಾಯ್ದೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಡಾ.ಸುಶೀಲಾ. ಬಿ ಅವರು ಅಧ್ಯಕ್ಷತೆವಹಿಸಿ ಮಾತನಾಡಿ, ಸಾರ್ವಜನಿಕ ಸೇವೆಯಲ್ಲಿ ಇರುವ ಅಧಿಕಾರಿಗಳು ಜನರಿಗೆ ಸರ್ಕಾರದ ಸೌಲಭ್ಯಗಳನ್ನು ವಿಳಂಬವಿಲ್ಲದೆ, ಸಕಾಲಕ್ಕೆ ದೊರಕಿಸಬೇಕು. ಜನರ ಸೇವೆಗೆ ಬದ್ದರಾಗಬೇಕು. ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು. ಕಾನೂನುಗಳನ್ವಯ ಕಾರ್ಯನಿರ್ವಹಿಸಿ,ಪ್ರಾಮಾಣಿಕ ಸೇವೆ ಸಲ್ಲಿಸುವಂತೆ ಕರೆ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ನ್ಯಾಯವಾದಿ ನರಸಿಂಗರಾವ್ ಕುಲಕರ್ಣಿ ಹಾಗೂ ಲೋಕಾಯುಕ್ತ ವಿಶೇಷ ಅಭಿಯೋಜಕ ಹಿರಿಯ ನ್ಯಾಯವಾದಿ ಪಿ.ಶಿವರಾಜ್ ಅವರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಗಳ ಬಗ್ಗೆ ವಿವರಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಧರಣೀಶ, ಬಾರ್ ಅಸೋಸಿಯೇಷನ್ ಅಧ್ಯಕ್ಷ. ಸಿ.ಎಸ್.ಮಾಲಿ ಪಾಟೀಲ್ ಉಪಸ್ಥಿತರಿದ್ದರು. ನ್ಯಾಯವಾದಿ ನಿರಂಜನ್ ಯರಗೋಳ ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button