ಗ್ರಾಹಕರ ಮನಗೆದ್ದ ಟೆಂಟ್ ಹೌಸ್ ಕಾರ್ಯ – ದರ್ಶನಾಪುರ
ಟೆಂಟ್, ಧ್ವನಿ ಬೆಳಕು, ಡೆಕೋರೇಟರ್ಸ್ ಸಂಘದ ದಶಮಾನೋತ್ಸವ
ಗ್ರಾಹಕರ ಮನಗೆದ್ದ ಟೆಂಟ್ ಹೌಸ್ ಕಾರ್ಯ – ದರ್ಶನಾಪುರ
ಟೆಂಟ್, ಧ್ವನಿ ಬೆಳಕು, ಡೆಕೋರೇಟರ್ಸ್ ಸಂಘದ ದಶಮಾನೋತ್ಸವ
ವಿನಯವಾಣಿ
ಯಾದಗಿರಿ, ಶಹಾಪುರ: ಜಿಲ್ಲೆಯಲ್ಲಿಯೇ ಗ್ರಾಹಕರ ಅಭಿರುಚಿಗೆ ತಕ್ಕಂತೆ ಸೇವೆ ನೀಡುವ ಟೆಂಟ್ ಹೌಸ್, ಡೆಕೋರೇಟರ್ಸ್, ಧ್ಚನಿ ಬೆಳಕು ಕಾರ್ಯ ಶಹಾಪುರದಲ್ಲಿರುವದು ಹೆಮ್ಮೆಯ ವಿಷಯವೆಂದು ಮಾಜಿ ಸಚಿವ, ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ನಗರದ ರಾಯಲ್ ಪ್ಯಾಲೇಸ್ ನಲ್ಲಿ ಟೆಂಟ್ ಮತ್ತು ಧ್ವನಿ ಬೆಳಕು ಹಾಗೂ ಡೆಕೋರೇಟರ್ಸ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ದಶಮಾನೋತ್ಸವ
ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಹಕರ ಬೇಡಿಕೆಗೆ ತಕ್ಕಂತ ಎಲ್ಲಾ ಸಾಮಾಗ್ರಿಗಳು ಶಹಾಪುರದಲ್ಲಿವೆ. ಮಹಾರಾಷ್ಟ್ರದ ಸೋಲಾಪುರ, ಹೈದ್ರಾಬಾದ್ ನಲ್ಲಿ ದೊರೆಯುವ ಗುಣಮಟ್ಟದ ಸೌಲಭ್ಯಗಳನ್ನು ಇಲ್ಲಿ ದೊರಕಿಸುತ್ತಿರುವದು ಗ್ರಾಹಕರಿಗೆ ಅನುಕೂಲವಾಗಿದೆ.
ಸರ್ಕಾರಿ ಅಥವಾ ಖಾಸಗಿ ಕಂಪನಿಗಳ ಹಗಲು ರಾತ್ರಿ ದುಡಿಯುವದಕ್ಕಿಂತ ಇಂತಹ ವ್ಯಾಪಾರ ಮಾಡುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡಲ್ಲಿ ದುಡಿಮೆ ತಕ್ಕ ಲಾಭವು ದೊರೆಯಲಿದೆ ಎಂದು ಯುವಕರಿಗೆ ಕಿವಿ ಮಾತು ಹೇಳಿದರು.
ಉತ್ತರ ಕರ್ನಾಟಕ ಅಧ್ಯಕ್ಷ ಜಿ.ಶ್ರೀನಿವಾಸ ಮಾತನಾಡಿ, ಸಂಘದ ಸಮಸ್ಯೆಗಳಿಗೆ ಬೇಡಿಕೆಗಳಿಗೆ ಜಿಲ್ಲಾಡಳಿತ, ತಾಲೂಕು ಆಡಳಿತ ಸ್ಪಂಧಿಸಬೇಕು. ನಮ್ಮ ಸಂಘದ ಜವಬ್ದಾರಿ ಅತ್ಯಂತ ಕಠಿಣವಾದದು, ಅದನ್ನು ನಿಭಾಯಿಸಬೇಕಾದರೆ ಜವಬ್ದಾರಿ ನಿರ್ವಹಿಸುತ್ತಿರುವ ನಮಗೆ ಗೊತ್ತು. ಹೀಗಾಗಿ ಸಚಿವರು, ಶಾಸಕರು, ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತದ ಸ್ಪಂಧನೆ ಅಗತ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣ ದಿಗ್ಗಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಂಬಾರಗೇರಿ ಹಿರೇಮಠದ ಸೂಗೂರೇಶ್ವರ ಶಿವಾಚಾರ್ಯರು, ಗೋಗಿ ಚಂದಾಹುಸೇನಿ ದರ್ಗಾದ ಹಜರತ್ ಸಯ್ಯದ್ ಶಾ ಇಸ್ಮಾಯಿಲ್ ಹುಸೇನಿ ಆಸೀಫ್ ಸಾಹೇಬ ಸಜ್ಜಾದೆ ನಸೀನ್ ದರ್ಗಾದ ಹಜರತ್ ಸಯ್ಯದ್ ಶಾ ಮಹ್ಮದ್ ಹುಸೇನಿ ಕೋಹಸವಾರಾ ಮತ್ತು ಶ್ರೀ ಚರಬಸವೇಶ್ವರ ದೇವಸ್ಥಾನದ ಶರಣು ಗದ್ದುಗೆ ಸಾನ್ನಿಧ್ಯವಹಿಸಿದ್ದರು. ನಗರಯೋಜನಾ ಪ್ರಾಧಿಕಾರ ಅಧ್ಯಕ್ಷ ಸಿದ್ದು ಆರಬೋಳ,
ಸಂಘದ ಪದಾಧಿಕಾರಿಗಳು ಮತ್ತು ಪ್ರಮುಖರಾದ ಶಿವಶರಣಪ್ಪ ಕನ್ಯಾಕೋಳೂರ, ರಾಮಲಿಂಗ ಮಣಿಗಿರಿ, ಅರವಿಂದ ಉಪ್ಪಿನ್, ಮಹ್ಮದ್ ಇಸೂಬಸಾಬ ಕಾಲೆಮತ್ತು, ತೇಜವೀರ ಸಿಂಗ್, ದೇವು ಬಿ.ಗುಡಿ, ಬಸವರಾಜ ಕೋಳೂರ, ಬಸನಗೌಡ ನಗನೂರ, ಶೇಖಹ್ಮದ್ ನಾರಾಯಣಪುರ, ಸುರೇಶ ದೇಸಾಯಿ, ಸತ್ಯಾನಾರಾಯಣ, ಸಂತೋಷ ಭಾಸುತ್ಕರ್, ಜಾವೀದ ಖಾನಾಪುರ ಇತರರಿದ್ದರು.
ಸಂಘಕ್ಕೆ ಸಿಎ ಸೈಟ್ ಸೌಲಭ್ಯ ಕಲ್ಪಿಸುವೆ
ಸಂಘದ ಪಾಧಿಕಾರಿಗಳು ದಿನದ 24 ಗಂಟೆ ಸೇವೆ ಸಲ್ಲಿಸುತ್ತಿರುವಾಗ ಆಫೀಸ್ ಕಚೇರಿಯ ಅಗತ್ಯವಿಲ್ಲ ಎನಿಸುತ್ತದೆ ಎಂದು ನಸುನಗುತ್ತಲೇ ತಿಳಿಸಿದ ಅವರು, ಕಡಿಮೆ ದರದಲ್ಲಿ ಸಿಎ ಸೈಟ್ ಕಲ್ಪಿಸುವ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಕೆಂಭಾವಿ ಘಟನೆಗೆ ನ್ಯಾಯ ಒದಗಿಸುವ ಮತ್ತು ಡಿಜೆ ಸದುಪಯೋಗವಾಗಲು ಜಿಲ್ಲಾಡಳಿತದಿಂದ ಅನುಮತಿ ಕಲ್ಪಿಸುವ ಕುರಿತ ಬೇಡಿಕೆಗೆ ಸ್ಪಂಧಿಸಿದ ಅವರು, ಡಿಜೆಯಿಂದ ಅನಾರೋಗ್ಯ ವೇ ಜಾಸ್ತಿ ಹೀಗಾಗಿ ಆ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತಾಡಿ ಆದಷ್ಟು ಡಿಜೆ ಸೌಂಡ್ ಸಿಸ್ಟಮ್ ಪರಿಶೀಲಿಸಿ ಅನುಮತಿ ಕಲ್ಪಿಸುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಅಲ್ಲದೆ ನಿಮ್ಮಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನಿವೇಶನ ರಹಿತರಿಗೆ ಅರ್ಹತೆ ಆಧಾರದ ಮೇಲೆ ನಿವೇಶನ ಒದಗಿಸುವೆ ಎಂದರು.




