ಯೋಗದಿಂದ ವಿಶ್ವದಲ್ಲಿ ಶಾಂತಿ ಸೌಹಾರ್ದತೆ -ಮೋದಿ
ಉತ್ತರಾಖಂಡಃ ಯೋಗದಿಂದ ವಿಶ್ವದಲ್ಲಿ ಸದ್ಭಾವನೆ ಹೆಚ್ಚಾಗಲಿದೆ. ಯೋಗ ಇಂದು ವಿಶ್ವದ ಪ್ರತಿಯೊಬ್ಬರಲ್ಲಿ ತನ್ನದೆಂಬ ಭಾವ ಮೂಡಿದೆ. ಇಲ್ ನೆಸ್ ದಿಂದ ವೆಲ್ ನೆಸ್ ಕಡೆ ಸಾಗುವುದು ಯೋಗ. ಹೀಗಾಗಿ ಯೋಗದ ಮೂಲಕ ಇಡಿ ವಿಶ್ವವನ್ನೇ ಜೋಡಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಅಂತರಾಷ್ಟ್ರೀಯ ನಾಲ್ಕನೇ ವರ್ಷದ ಯೋಗ ದಿನಾಚರಣೆ ಅಂಗವಾಗಿ ಡೆಹ್ರಾಡೂನ್ ಫಾರೆಸ್ಟ್ ಇನ್ಸ್ಟಿಟ್ಯೂಟ್ ಪ್ರದೇಶದಲ್ಲಿ ಆಯೋಜಿಸಿದ್ದ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದ ಮೂಲೆ ಮೂಲೆಯಲ್ಲಿ ಇಂದು ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಯೋಗದಿಂದ ರೋಗ ಮುಕ್ತ ಜೀವನ ನಡೆಸಲು ಸಾಧ್ಯವಿದೆ. ಯೋಗದ ಮೂಲ ಭಾರತ. 4 ಸಾವಿರ ವರ್ಷಗಳಿಂದ ನಮ್ಮ ದೇಶದಲ್ಲಿ ಋಷಿ ಮುನಿಗಳು ಯೋಗ ಅಭ್ಯಾಸ ಮಾಡುತ್ತಿದ್ದರು.
ಈ ಮೂಲಕ ಅವರು ಆರೋಗ್ಯಯುತ ಜೀವನ ನಡೆಸುತ್ತಿದ್ದರು. ಭಗವದ್ಗೀತೆಯಲ್ಲಿ ಯೋಗದ ನಾಲ್ಕು ಆಯಾಮಗಳನ್ನು ತಿಳಿಸಲಾಗಿದೆ
ಮಹರ್ಷಿ ಪತಂಜಲಿ ಯೋಗದ ಪರಿಯನ್ನು ಪ್ರಚುರ ಪಡಿಸಿದ್ದಾರೆ. ಅವರು.ನಿರ್ದೇಶಿಸಿದ ಗ್ರಂಥದ ಮೂಲಕವೇ ಇಂದು ಯೋಗವನ್ನು ಜನರಿಗೆ ತಿಳಿಸುವ ಕೆಲಸವನ್ನು ಮಾಡಲಾಗುತ್ತಿದೆ.
ಯೋಗದಿಂದ ನಮ್ಮೊಳಗಿನ ಅಂತಃಶಕ್ತಿ ಜಾಗೃತಿಯಾಗುತ್ತದೆ. ಯೋಗ ಋಷಿಮುನಿಗಳ ಜೀವನಶೈಲಿಯಾಗಿದ್ದು, ಯೋಗ ಸೂತ್ರಗಳು ಎಂಬ ಪತಂಜಲಿ ಋಷಿಗಳು ಹಾಕಿಕೊಟ್ಟ ಮಾರ್ಗದಲ್ಲಿ ಯೋಗ ನಡೆಯುತ್ತಿದೆ. ಅಲ್ಲದೆ ಸ್ವಾಮಿ ವಿವೇಕಾನಂದರ ಸಹ ಯೋಗ ಕುರಿತು ತಿಳಿಸಿದ್ದಾರೆ