ಪ್ರಮುಖ ಸುದ್ದಿ

ಅಧಿಕಾರಿಗಳ ದಾಳಿ : 2 ಲಕ್ಷ ರೂಪಾಯಿ ಮೌಲ್ಯದ ಪ್ಲಾಸ್ಟಿಕ್ ಧ್ವಜ, ಟೋಪಿಗಳು ವಶ!

ಮೈಸೂರು : ನಗರದ ರಾಮಾನುಜ ರಸ್ತೆಯಲ್ಲಿರುವ ಮಂಜುನಾಥ ಟ್ರಾನ್ಸ್‌ಪೋರ್ಟ್ ಕಚೇರಿ ಮೇಲೆ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಾರುಕಟ್ಟೆಗೆ ಸಾಗಿಸಲು ಸಿದ್ದವಾಗಿದ್ದ 4ಟನ್ ಪ್ಲಾಸ್ಟಿಕನ್ನು ವಶಪಡಿಸಿಕೊಂಡಿದ್ದಾರೆ.
ಸ್ವತಂತ್ರ ದಿನಾಚರಣೆಗಾಗಿ ಪ್ಲಾಸ್ಟಿಕ್ ನಿಂದ ತಯಾರಿಸಿದ ರಾಷ್ಟ್ರ ಧ್ವಜಗಳು , ಟೋಪಿಗಳು ಸೇರಿದಂತೆ ವಿವಿಧ ನಮೂನೆಯ ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

2 ಲಕ್ಷಕ್ಕೂ ಹೆಚ್ಚು ಮೌಲ್ಯದ ಪ್ಲಾಸ್ಟಿಕ್‌ ವಸ್ತುಗಳನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು ಈ ಬಗ್ಗೆ
ಟ್ರಾನ್ಸ್ ಪೋರ್ಟ್ ಕಚೇರಿ ಮಾಲೀಕ ಮಹದೇವ್‌ಗೆ ನೋಟಿಸ್ ನೀಡಿದ್ದಾರೆ. ಹಿರಿಯ ಪರಿಸರ ಅಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button