ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ವಿರುದ್ಧ ಟೀಕೆಗಳ ಸುರಿಮಳೆ!
-ವಿನಯ ಮುದನೂರ್
ಸಾಮಾಜಿಕ ಜೀವನದಲ್ಲಿರುವ ರಾಜಕೀಯ ನಾಯಕರು, ಸಿನೆಮಾ ನಟರಂಥ ಸೆಲೆಬ್ರಟಿಗಳನ್ನು ಅನೇಕರು ಐಕಾನ್ ಆಗಿ ಕಾಣುತ್ತಾರೆ. ತಮ್ಮ ಐಕಾನ್ ಗಳನ್ನೇ ಫಾಲೋ ಮಾಡುತ್ತಾರೆ. ಹೀಗಾಗಿ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಕ್ಷಣ ಕಾಲವೂ ಮೈಮರೆಯದೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ನಿಟ್ಟಿನಲ್ಲಿ ಸಾಗಬೇಕಿದೆ. ಆದರೆ, ಕೆಲವರು ಮಾತ್ರ ಮನಸೋಇಚ್ಛೆ ನಡೆದುಕೊಳ್ಳುವ ಮೂಲಕ ಸಮಾಜದ ದಿಕ್ಕು ತಪ್ಪಿಸುತ್ತಾರೆ. ಆ ಸಾಲಿಗೆ ಈಗ ನಿವೇದಿತಾ ಗೌಡ ಸೇರ್ಪಡೆ ಆಗಿದ್ದಾರೆ.
ವಿಶ್ವದೆಲ್ಲೆಡೆ ವಿವಾದಕ್ಕೀಡಾಗಿರುವ ಕಿಕಿ ಚಾಲೆಂಜನ್ನು ನಟಿ, ಬಿಗ್ ಬಾಸ್ ಸ್ಪರ್ದಿಯಾಗಿದ್ದ ನಿವೇದಿತಾ ಗೌಡ ಸ್ವೀಕರಿಸಿದ್ದಾರೆ. ಕಾರಿನ ಡೋರನ್ನು ತೆರೆದು ಕಿಕಿ ಹಾಡಿಗೆ ಡಾನ್ಸ್ ಮಾಡಿದ್ದು ವಿಡಿಯೋ ಅನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ. ಹೀಗಾಗಿ, ಸಮಾಜಕ್ಕೆ ಮಾರಕ ಸಂದೇಶ ನೀಡುವ ಕಿಕಿ ಡಾನ್ಸ್ ಗೆ ಮೆಚ್ಚುಗೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಾರೀ ಟೀಕೆಗಳು ವ್ಯಕ್ತವಾಗಿವೆ.
ವಿದೇಶದಲ್ಲಿ ಮಾರಕವಾಗಿ ಪರಿಣಮಿಸಿದ್ದ ಕಿಕಿ ಚಾಲೆಂಜ್ ಇತ್ತೀಚೆಗೆ ಭಾರತಕ್ಕೂ ಕಾಲಿಟ್ಟಿದೆ. ಚಲಿಸುವ ಕಾರಿನಿಂದ ಕೆಳಗಿಳಿದು ಓಡುವ ಕಾರಿಗೆ ಸಮನಾಗಿ ಡಾನ್ಸ್ ಮಾಡುತ್ತ ಮುಂದೆ ಸಾಗುವ ಈ ಚಾಲೆಂಜೆ ಅನೇಕರಿ ಬಾಳಿಗೆ ಕೊಳ್ಳಿ ಇಟ್ಟಿದೆ. ಕಾರಿನಿಂದ ಇಳಿಯುವಾಗಲೇ ಬಿದ್ದು ಅನೇಕರು ಪ್ರಾಣಾಪಾಯ ತಂದುಕೊಂಡಿದ್ದಾರೆ. ಹೀಗಾಗಿ, ಪೊಲೀಸರು ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಕೆಲವು ಕಡೆ ಕಿಕಿ ಚಾಲೆಂಜ್ ಗೆ ನಿರ್ಭಂಧವನ್ನು ಹೇರಲಾಗಿದೆ. ಇಂಥ ಸಂದರ್ಭದಲ್ಲಿ ನಿವೇದಿತಾಗೌಡ ಕಿಕಿ ಚಾಲೆಂಜ್ ಸ್ವೀಕರಿಸಿದ್ದು ಟೀಕೆಗೆ ಗುರಿಯಾಗಿದೆ.
ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ನಿವೇದಿತಾ ಗೌಡ ಸಾಮಾಜಿಕ ಹೊಣೆಗಾರಿಕೆ ಅರಿತು ನಡೆದುಕೊಳ್ಳಬೇಕಿತ್ತು. ಅದನ್ನು ಬಿಟ್ಟು ತಾವೇ ಇಂಥ ಅಪಾಯಕಾರಿ ಕೆಲಸಕ್ಕೆ ಮುಂದಾದರೆ ಅವರನ್ನು ಅನುಕರಿಸುವವರ ಗತಿಯೇನು ಎಂಬುದು ಟೀಕಾಕಾರರ ಪ್ರಶ್ನೆಯಾಗಿದೆ. ಹೀಗಾಗಿ, ಈ ಬಗ್ಗೆ ನಟಿ ನಿವೇದಿತಾ ಗೌಡ ಏನು ಹೇಳುತ್ತಾರೆ. ತಮ್ಮದು ತಪ್ಪು ಎಂದು ತಿದ್ದಿಕೊಳ್ಳುತ್ತಾರೋ ಅಥವಾ ಸಮರ್ಥನೆ ಮಾಡಿಕೊಳ್ಳುತ್ತಾರೋ ಕಾದು ನೋಡಬೇಕಿದೆ.