ಪ್ರಮುಖ ಸುದ್ದಿHome

ಆಧಾರ್‌ – ಪಾನ್‌ ಕಾರ್ಡ್‌ ಜೋಡಣೆಗೆ ಮೇ 31 ಕೊನೆ ದಿನ- ಇಲ್ಲಿದೆ ʼಲಿಂಕ್‌ʼ ಮಾಡುವ ಸುಲಭ ವಿಧಾನ

ಪಾನ್‌ ಕಾರ್ಡ್‌ – ಆಧಾರ್‌ ಲಿಂಕ್‌ ಮಾಡುವ ಅವಧಿಯನ್ನು ಹಲವು ಬಾರಿ ವಿಸ್ತರಿಸಲಾಗಿತ್ತು. ಇದೀಗ ಮೇ 31, 2024ಅಂತಿಮ ದಿನವಾಗಿದೆ. ಲಿಂಕ್‌ ಮಾಡದಿದ್ದರೆ ಫೈನ್‌ ಜೊತೆಗೆ ಪಾನ್‌ ಕಾರ್ಡ್‌ ಅಮಾನ್ಯವಾಗುವ ಸಾಧ್ಯತೆಯೂ ಇದೆ. ಹೀಗಾಗಿ ಪಾನ್‌ ಕಾರ್ಡ್‌ – ಆಧಾರ್‌ ಲಿಂಕ್‌ ಮಾಡುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ನೀವು ಪಾನ್​ನೊಂದಿಗೆ ಆಧಾರ್​ ಕಾರ್ಡ್ ಲಿಂಕ್​ ಮಾಡದೇ ಇದ್ದರೆ, ಈ ಪ್ರಕ್ರಿಯೆಯನ್ನ ನೀವು ಆನ್​ಲೈನ್​ನಲ್ಲೇ ಮಾಡಬಹುದಾಗಿದೆ.

ಪ್ಯಾನ್​ ಹಾಗೂ ಆಧಾರ್​ ಕಾರ್ಡ್​ಗಳನ್ನ ಲಿಂಕ್​ ಮಾಡುವ ಮೊದಲು ತೆರಿಗೆ ಪಾವತಿದಾರರು ತೆರಿಗೆ ಇ ಫೈಲಿಂಗ್​ ಪೋರ್ಟಲ್​​ನಲ್ಲಿ ನೋಂದಾಯಿಸಿಕೊಳ್ಳಬೇಕು. ಲಾಗ್​ ಇನ್​ ಐಡಿ, ಪಾಸ್​ವರ್ಡ್ ಹಾಗೂ ಹುಟ್ಟಿದ ದಿನಾಂಕವನ್ನ ನಮೂದಿಸುವ ಮೂಲಕ ಆದಾಯ ತೆರಿಗೆ ಇಲಾಖೆಯ ಇ ಫೈಲಿಂಗ್​​ ಪೋರ್ಟಲ್​​ಗೆ ಲಾಗ್​ ಇನ್​ ಮಾಡಿ.

ಈ ಎಲ್ಲ ವಿವರಗಳನ್ನ ನೀಡಿದ ಬಳಿಕ ನಿಮಗೆ ಕೋಡ್​​ ಒಂದು ಸಿಗಲಿದೆ. ಈ ಸೈಟ್​ಗೆ ಲಾಗಿನ್​ ಆಗುವ ವೇಳೆ ನಿಮಗೆ ಪಾಪ್​ಅಪ್​ ವಿಂಡೋ ಕಾಣಿಸುತ್ತೆ. ನಿಮ್ಮ ಪಾನ್​ ಕಾರ್ಡ್​ನ್ನು ಆಧಾರ್​ನೊಂದಿಗೆ ಲಿಂಕ್​ ಮಾಡಲು ಕೇಳುತ್ತದೆ. ಇಲ್ಲವಾದಲ್ಲಿ ನೀವು ಫ್ರೊಫೈಲ್​ ಸೆಟ್ಟಿಂಗ್​​ಗೆ ಹೋಗಿ ಲಿಂಕ್​ ಆಧಾರ್​ ಬಟನ್​ ಆಯ್ಕೆ ಮಾಡಬಹುದಾಗಿದೆ.

ಆಧಾರ್​ ಕಾರ್ಡ್​ನಲ್ಲಿ ನಮೂದಿಸಿರುವ ವಿವರಗಳೊಂದಿಗೆ ಪರದೆಯ ಮೇಲಿರುವ ವಿವರಗಳನ್ನ ಪರಿಶೀಲನೆ ಮಾಡಿ. ವಿವರಗಳು ಹೊಂದಿಕೆಯಾದ ಬಳಿಕ ಆಧಾರ್​ ಕಾರ್ಡ್​ ಸಂಖ್ಯೆ ನಮೂದಿಸಿ ಹಾಗೂ ಲಿಂಕ್​ ಬಟನ್​ ಕ್ಲಿಕ್​ ಮಾಡಿ.

ಇದಲ್ಲದೆ ಇಂಟರ್ನೆಟ್ ಸಂಪರ್ಕವಿಲ್ಲದೆ ಮೊಬೈಲ್ ಎಸ್‌ಎಂಎಸ್ ಬಳಸಿಕೊಂಡು ಕೂಡ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡನ್ನು ಜೋಡಣೆ ಮಾಡಬಹುದಾಗಿದೆ. ಇದಕ್ಕಾಗಿ 12 ವಿಶಿಷ್ಟ ಸಂಖ್ಯೆಗಳನ್ನು 567678, 56161 ಗೆ ಎಸ್‌ಎಂಎಸ್ ಮಾಡಬಹುದಾಗಿದೆ. UIDPAN12-digit Aadhaar>10-digit PAN ಹೀಗೆ ಸಂದೇಶ ಕಳುಹಿಸಿ ಲಿಂಕ್ ಮಾಡಬಹುದಾಗಿದೆ.

ನಿಮ್ಮ ಆಧಾರ್​ ಕಾರ್ಡ್​ನ್ನು ಪಾನ್​ ಕಾರ್ಡ್​ಗೆ ಯಶಸ್ವಿಯಾಗಿ ಲಿಂಕ್​ ಮಾಡಲಾಗಿದೆ ಎಂಬ ಸಂದೇಶವನ್ನ ನೀವು ಪಡೆಯುತ್ತೀರಿ.

Related Articles

Leave a Reply

Your email address will not be published. Required fields are marked *

Back to top button