ಮೋದಿಜೀ ಸರ್ಕಾರ ಯಶಸ್ವಿ ಮುನ್ನಡೆ-ಡಾ.ಸುಬೇದಾರ
ಮೋದಿಜೀ ಸರ್ಕಾರ ಯಶಸ್ವಿ ಮುನ್ನಡೆ-ಡಾ.ಸುಬೇದಾರ
yadgiri, ಶಹಾಪುರಃ ದೇಶದ ಪ್ರಧಾನಿ ನರೇಂದ್ರ ಮೋದಿಜೀ ಅವರು ಎರಡನೇ ಅವಧಿಯ ಎರಡು ವರ್ಷ ಯಶಸ್ವಿಯಾಗಿ ಮುನ್ನಡೆಸುತ್ತಿದ್ದು, ಇಡಿ ಪ್ರಪಂಚ ಭಾರತದತ್ತ ತಿರುಗಿ ನೋಡುವಂತೆ ಕೆಲಸ ಮಾಡಿದ್ದಾರೆ. ಕೊರೊನಾ ಸಂಕಷ್ಟ ಅವಧಿಯಲ್ಲಿ ಎದೆಗುಂದದೆ ದೇಶದ ಆಡಳಿತವನ್ನು ಜನಪರವಾಗಿ ನಡೆಸುತ್ತಿದ್ದಾರೆ. ಅವರೊಬ್ಬ ಅದ್ಭುತ ಶಕ್ತಿ ಹೊಂದಿದ ಸಮರ್ಥ ನಾಯಕ ಎಂದು ಬಿಜೆಪಿ ಮುಖಂಡ ಚಂದ್ರಶೇಖರ ಸುಬೇದಾರ ತಿಳಿಸಿದರು.
ತಾಲೂಕಿನ ವಿಭೂತಿಹಳ್ಳಿ ಗ್ರಾಮದಲ್ಲಿ ಎರಡನೇ ಅವಧಿಯ ಸರ್ಕಾರ ಎರಡು ವರ್ಷ ಯಶಸ್ವಿಯಾಗಿ ಪೂರ್ಣಗೊಳಿಸಿರುವ ಸುಸಂದರ್ಭದಲ್ಲಿ ಕೊರೊನಾ ಸಂಕಷ್ಟದಲ್ಲಿ ಸಿಲುಕಿರುವ ಬಡವರಿಗೆ ಅಮೀನರಡ್ಡಿ ಪಾಟೀಲ್ ಯಾಳಗಿ ಸೇವಾ ಟ್ರಸ್ಟ್ ವತಿಯಿಂದ ಆಹಾರ ಧಾನ್ಯ ಕಿಟ್ ವಿತರಿಸಿ ಮಾತನಾಡಿದರು.
ಪ್ರಧಾನಿಗಳೇ ಕರೆ ನೀಡಿರುವಂತೆ ಸರ್ಕಾರ ಎರಡು ವರ್ಷ ಪೂರೈಕೆ ಹಿನ್ನೆಲೆ ಕೊರೊನಾ ಹಾವಳಿಯಲ್ಲಿ, ಬಡವರ ಸೇವೆಯಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ‘ಸೇವಾ ಸಂಘಟನ’ ಶೀರ್ಷಿಕೆಯಡಿ ಮಾಸ್ಕ್, ಆಹಾರ ಕಿಟ್ ವಿತರಣೆ ಸೇರಿದಂತೆ ಇತರೆ ಸಹಾಯ ಹಸ್ತ ನೀಡುವ ಜನಪರ ಕಾಳಜಿಯ ಕೆಲಸಗಳನ್ನು ಅಮೀನರಡ್ಡಿ ಪಾಟೀಲ್ ಯಾಳಗಿ ಬಳಗ ನಿರಂತರವಾಗಿ ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದೆ.
ಅಲ್ಲದೆ ಅಮೀನರಡ್ಡಿ ಪಾಟೀಲ್ ಅವರು ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಕೊರತೆಯಾಗದಂತೆ ತಾಲೂಕಿನ ಜನರಿಗಾಗಿ ಸುಮಾರು 9 ಲಕ್ಷ ವೆಚ್ಚದ 15 ಆಕ್ಸಿಜನ್ ಕಾನ್ಸಂಟ್ರೇಟರ್‍ಗಳನ್ನು ಸರ್ಕಾರಿ ಆಸ್ಪತ್ರೆಗೆ ಉಚಿತವಾಗಿ ನೀಡಿದರು. ಮತ್ತು ಕ್ಷೇತ್ರದಾದ್ಯಂತ ಕೊರೊನಾ ಸಂಕಷ್ಟಕ್ಕೆ ಸಿಲುಕಿದ ಬಡವರಿಗೆ ನಿರಂತರವಾಗಿ ಆಹಾರ ಧಾನ್ಯಗಳ ಕಿಟ್ ವಿತರಿಸುತ್ತಿದ್ದಾರೆ ಅವರ ಸೇವಾ ಕೈಂಕರ್ಯದಲ್ಲಿ ಅವರ ಅಭಿಮಾನಿ ಬಳಗದವರು ಕೆಲಸ ಮಾಡುತ್ತಿರುವದು ಶ್ಲಾಘನೀಯ ಎಂದರು.
ಅಲ್ಲದೆ ತಾಲೂಕಿನ ಚಂದಾಪುರ ಗ್ರಾಮದಲ್ಲಿ ಕೇಂದ್ರ ಸರ್ಕಾರ ಎರಡು ವರ್ಷ ಪೂರೈಸಿರುವ ಹಿನ್ನೆಲೆ ಸವಿ ನೆನಪಿಗಾಗಿ ಅವರ ಅಭಿಮಾನಿ ಬಳಗ ಗ್ರಾಮದಲ್ಲಿ ಸಸಿಗಳನ್ನು ನೆಡುವ ಕೆಲಸ ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುಖಂಡ ಬಸವರಾಜಪ್ಪಗೌಡ ವಿಭೂತಿಹಳ್ಳಿ, ಅಪ್ಪುಗೌಡ ಯಾಳಗಿ, ಅಡಿವೆಪ್ಪ ಜಾಕಾ, ಅಂಬರೀಶ ನಾಟೇಕಾರ, ಹಣಮಂತ್ರಾಯ ಪೂಜಾರಿ, ಗ್ರಾಪಂ ಸದಸ್ಯರಾದ ಮಲ್ಲಣ್ಣ ಸಾಹು, ಸಾಯಬಣ್ಣ ಸಿದ್ದಾಪುರ, ಭಾಗಪ್ಪ ಪೋ.ಪಾಟೀಲ್, ಪದ್ಮಾವತಿ ಸಾಲಿ, ಸಕ್ರೆಮ್ಮ ನಾಗಪ್ಪ, ಶರಬಣ್ಣಗೌಡ ಸೇರಿದಂತೆ ಇತರರಿದ್ದರು.