ಕಾವ್ಯ

ಕನ್ನಡಮ್ಮನ ಅಪ್ಪು ಬಾ..ಆಲ್ದಾಳ ರಚಿತ ಕಾವ್ಯ

ಕನ್ನಡಮ್ಮನ ಅಪ್ಪು ಬಾ

ಇಳಿದು ಬಾ ನುಲಿದು ಬಾ ಕುಣಿಕುಣಿದು ಬಾ
ಗಂಧದ ಬೀಡಿಗೆ ಚೆಂದದ ನಾಡಿಗೆ !
ಹುಟ್ಟಿ ಬಾ ಮೆಟ್ಟಿ ಬಾ ನಿತ್ಯೋತ್ಸವದ ತವರಿಗೆ
ಅರಸನಾಗಿ ಮೆರೆದ ಕರುನಾಡಿಗೆ !

ಮನೆತನದ ಉಸಿರು ಕೊನೆತನಕ ಕೊಂಡೊಯ್ಯಲು
ತಾಯಿ ಮೊಗಕೆ ಆರತಿ ಬೆಳಗಲು !
ಬಣ್ಣದ ಲೋಕದಿ ಮುಂಗೋಳಿ ಕೂಗಿ ಬೆಳಗಾಗಲು
ನಗೆಯ ಬೆಳದಿಂಗಳು ಹರಡು ಬಾ !

ಕಲೆಯ ಉಂಡು ಕಲೆಯ ಕುಡಿದ ಅಪ್ಪನ ಒಡಲಿಗೆ
ಅಮ್ಮನ ಮಡಿಲಿಂದ ಎದ್ದು ಬಾ !
ಎದ್ದು ಬಾ ಗೆದ್ದು ಬಾ ಕನ್ನಡದ ಕಹಳೆ ಮೊಳಗು ಬಾ
ಕರುನಾಡಿಗೆ ಒಬ್ಬನೇ ರಾಜಕುಮಾರ !

ಮನೆ ತುಂಬ ಮನ ತುಂಬ ಕನ್ನಡದೆ ಜ್ಞಾನ ಧ್ಯಾನ
ಮೂರು ಮುತ್ತುಗಳ ಕಲೆ ಸುರಿಮಳೆ !
ಕುಣಿದು ತಣಿಸಲು ಕನ್ನಡದ ಹೆಜ್ಜೆ ಹಾಕು ಬಾ
ಮತ್ತೆ ಮರಳಿ ಅಮ್ಮನ ಅಪ್ಪು ಬಾ !

ಭಾಷೆ ಉಳಿಸಿ ಬೆಳೆಸಲು ದೊಡ್ಡ್ಮನೆ ಬೆಳಗಲು
ಕನ್ನಡದ ಕಹಳೆ ಊದಲು ಮತ್ತೆ ಬಾ !
ಹುಟ್ಟಿ ಬಾ ಕನ್ನಡಮ್ಮನ ಅಪ್ಪಲು ಅಪ್ಪು ಬಾ
ಹೋಗಿ ಬಾ ಬೆಳಗು ಬಾ ಸಾವಿರದ ಶರಣು !

ಡಾ. ಗೋವಿಂದರಾಜ ಆಲ್ದಾಳ

Related Articles

Leave a Reply

Your email address will not be published. Required fields are marked *

Back to top button