ಬಸವಣ್ಣ ನಾಡಿನ ಸಾಂಸ್ಕೃತಿಕ ನಾಯಕ – ಸರ್ಕಾರಕ್ಕೆ ಅಭಿನಂದನೆ
ಸರ್ಕಾರದ ಘೋಷಣೆ ಸಂತಸ ತಂದಿದೆ- ಸತ್ಯಂಪೇಟೆ
ಬಸವಣ್ಣ ನಾಡಿನ ಸಾಂಸ್ಕೃತಿಕ ನಾಯಕ – ಸರ್ಕಾರಕ್ಕೆ ಅಭಿನಂದನೆ
ಶಹಾಪುರಃ ಮಾನವತಾವಾದಿ ಬಸವಣ್ಣನವರನ್ನು ಕರ್ನಾಟಕ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಹೆಮ್ಮೆಯ ಸಂಗತಿ.
ಬಸವಣ್ಣನವರು ಸರ್ವ ಸಮುದಾಯದ ಮಾಹಾನ್ ಚೇತನರಾಗಿದ್ದಾರೆ, ಅವರ ಸಮಾನತೆಯ ಚಿಂತನೆಗಳು ಪ್ರಸ್ತುತ ಸಮಾಜಕ್ಕೆ ತುಂಬಾ ಅಗತ್ಯವಾಗಿವೆ. ಬಸವಣ್ಣನವರ ಮನುಷ್ಯಪರ, ಜೀವಪರ ಶ್ರೇಷ್ಠ ಚಿಂತನೆಗಳ ಆಶಯಗಳ ನೆಲೆಯಲ್ಲಿ ಸರ್ಕಾರ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ಸಾಹಿತಿ ವಿಶ್ವರಾಧ್ಯ ಸತ್ಯಂಪೇಟ, ಕ.ಸಾ.ಪ ಅಧ್ಯಕ್ಷ ಡಾ.ರವೀಂದ್ರನಾಥ ಹೊಸ್ಮನಿ, ಹಿರಿಯ ಸಾಹಿತಿ ಶಿವಣ್ಣ ಇಜೇರಿ, ಪ್ರಗತಿಪರ ಚಿಂತಕ ನೀಲಕಂಠ ಬಡಿಗೇರ, ಲಕ್ಷ್ಮಣ ಲಾಳಸೇರಿ ಮುಂತಾದವರು ಅಭಿಪ್ರಾಯಪಟ್ಟರು.
ನಗರದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡ ಸರ್ಕಾರಕ್ಕೆ ಅಭಿನಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಿರಿಯ ಸಾಹಿತಿ ಗುರುಬಸಯ್ಯ ಗದ್ದುಗೆ, ಸಿದ್ದಲಿಂಗಣ್ಣ ಆನೇಗುಂದಿ, ಸೈಯದ್ ಖಾಲಿದ್, ಹೊನ್ನಪ್ಪ ರಸ್ತಾಪುರ, ಬಸವರಾಜ ಆನೇಗುಂದಿ, ಅಮೃತರಾವ್ ಮುಲಗೆ, ಪ್ರಕಾಶ, ಮಾಪಣ್ಣ ಮದ್ರಿಕಿ, ನಾಗಣ್ಣ ಬಡಿಗೇರ, ಸಾಯಬಣ್ಣ ಪುರ್ಲೆ, ಹೊನ್ನಪ್ಪ ಗಂಗನಾಳ, ಸುರೇಶ ಅರುಣಿ, ಮರೆಪ್ಪ ಮುಂಡಾಸ್, ಶರಣಬಸವ ಪೋಲಿಸ್ ಬಿರಾದಾರ, ಮಡಿವಾಳಪ್ಪ ಪಾಟೀಲ್, ದೇವಿಂದ್ರಪ್ಪ ಮಡಿವಾಳಕರ್, ಭೀಮಣ್ಣಗೌಡ ಬಿರಾದಾರ, ನಿಂಗಣ್ಣ ನಾಟೇಕರ್ ತಿಪ್ಪನಳ್ಳಿ, ತಿಪ್ಪಣ್ಣ ಕ್ಯಾತನಾಳ, ಶರಣು ನಾಯ್ಕೋಡಿ, ಶರಣರಡ್ಡಿ ಹತ್ತಿಗೂಡೂರ, ಮರೆಪ್ಪ ಜಾಲಿಮಂಚಿ, ಗುರುಲಿಂಗಪ್ಪ ಸಾಗರ್ ಮುಂತಾದವರು ಬಸವಣ್ಣನವರು ಬದುಕು ಮತ್ತು ಚಿಂತನೆಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಂಚಿತವಾಗಿ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.