ಪ್ರಮುಖ ಸುದ್ದಿ
BIG BOSS- ಅನಾರೋಗ್ಯಃ ಈ ವಾರವು ಕಿಚ್ಚ ಗೈರು.!
BIG BOSS- ಅನಾರೋಗ್ಯಃ ಈ ವಾರವು ಕಿಚ್ಚ ಗೈರು.!
ವಿವಿ ಡೆಸ್ಕ್ಃ ಬಿಗ್ ಬಾಸ್ ಕನ್ನಡ ಆವೃತ್ತಿ ಆರಂಭವಾದಾಗಿನಿಂದಲೂ ಕನ್ಮಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಡೆಸಿಕೊಡುತ್ತಾ ಬಂದಿದ್ದು, ಅವರ ಶ್ರಮದಿಂದ ಅವರ ಆ್ಯಂಕರ್ ಶೈಲಿಯಿಂದ ಬಿಗ್ ಬಾಸ್ ಫೇಮಸ್ ಆಗಿದೆ ಎಂದರೆ ತಪ್ಪಿಲ್ಲ.
ಇದೀಗ ಕಿಚ್ಚ ಸುದೀಪ್‌ಅವರಿಗೆ ಅನಾರೋಗ್ಯ ಹಿನ್ನೆಲೆ ಇದೇ ಸೀಸನ್ ಎರಡನೇ ಬಾರಿ ವಾರಾಂತ್ಯದ ಸಂಚಿಕೆ ಶೂಟಿಂಗ್ ನಲ್ಲಿ ಸುದೀಪ್ ಅವರಿಗೆ ಭಾಗವಹಿಸಲಾಗದ ಕಾರಣ ಈ ವಾರವು ವಾರದ ವೀಕೆಂಡ್ ಸಂಚಿಕೆ ಮಿಸ್ ಆಗುತ್ತಿದೆ.
ಈ ನಡುವೆ ಅವರು ಆರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದು, ಅಭಿಮಾನಿಗಳು, ಹಿತೈಷಿಗಳು ಪ್ರಾರ್ಥಿಸಿದ್ದಾರೆ ಎನ್ನಲಾಗಿದೆ. ಕೂಡಲೆ ಆರೋಗ್ಯ ಚೇತರಿಸಿಕೊಂಡು ಮತ್ತೆ ವೀಕೆಂಡ್ ಬಿಗ್ ಬಾಸ್ ಸಂಚಿಕೆಗೆ ಅವರು ಆಗಮಿಸುವಂತಾಗಲಿ ಎಂಬುದು ವಿವಿಯ ಹಾರೈಕೆಯು ಆಗಿದೆ.