ನಗರದಲ್ಲಿ ಪ್ರತಿಷ್ಟಿತ ಶಾಲೆಗಳಿಗೆ ಬಾಂಬ್ ಬೆದರಿಕೆ; ಪೊಲೀಸರಿಂದ ಪರಿಶೀಲನೆ
ಬೆಂಗಳೂರು: ದೇಶಾದ್ಯಂತ ಶಾಲೆಗಳಿಗೆ ಬಾಂಬ್ ಇಡಲಾಗಿದೆ ಎಂಬ ಹುಸಿ ಕರೆಗಳು ಬರುತ್ತಿದ್ದು, ಆತಂಕದ ವಾತಾವರಣ ಸೃಷ್ಟಿಯಾಗುತ್ತಿರುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ನಕಲಿ ಬೆದರಿಕೆ ಕರೆ ಎಂದು ತಿಳಿದಿದ್ದರೂ ಉದಾಸೀನ ಮಾಡುವಂತಿಲ್ಲ. ನಗರದಲ್ಲಿ ಮಂಗಳವಾರ ಕನಿಷ್ಟ 8 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಗಳು ಬಂದು, ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಶಾಲೆಗಳು ಬೆದರಿಕೆ ಇ-ಮೇಲ್ ಬಗ್ಗೆ ಮಾಹಿತಿ ನೀಡುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳಗಳು ತೀವ್ರ ಪರಿಶೀಲನೆ ನಡೆಸಿತು. ಆದರೆ, ಯಾವುದೇ ಸ್ಫೋಟಕ ವಸ್ತುಗಳು ಪತ್ತಯಾಗಿರಲಿಲ್ಲ. ನಂತರ ಇದು ಹುಸಿ ಬಾಂಬ ಬೆದರಿಕ ಎಂಬುದು ತಿಳಿದುಬಂದಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಂಗಳೂರು ಸ್ಕಾಟಿಷ್ ಶಾಲೆ, ಭವನ್ ಬೆಂಗಳೂರು ಪ್ರೆಸ್ ಸ್ಕೂಲ್, ಚಿತ್ರಕೂಟ ಶಾಲೆ, ದೀಕ್ಷಾ ಹೈಸ್ಕೂಲ್, ಎಡಿಫೈ ಸ್ಕೂಲ್, ಗಂಗೋತ್ರಿ ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲ್, ಗಿರಿಧನ್ವ ಶಾಲೆ ಮತ್ತು ಜೈನ್ ಹೆರಿಟೇಜ್ ಶಾಲೆಗಳಿಗೆ ಬೆದರಿಕೆ ಇ-ಮೇಲ್ ಗಳು ಬಂದಿದ್ದವು ಎನ್ನಲಾಗಿದೆ.