ಪ್ರಮುಖ ಸುದ್ದಿ
ಕೇಂದ್ರದಿಂದ ರಾಜ್ಯಕ್ಕೆ 800 ಕೋಟಿ ನೆರವು-ಬೊಮ್ಮಾಯಿ
ಕೇಂದ್ರದಿಂದ ರಾಜ್ಯಕ್ಕೆ 800 ಕೋಟಿ ನೆರವು-ಬೊಮ್ಮಾಯಿ
ಬೆಂಗಳೂರು: ಕೋವಿಡ್ ಮೂರನೇ ಅಲೆ ಹಿನ್ನೆಲೆಯಲ್ಲಿ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಗಾಗಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ 800 ಕೋಟಿ ನೆರವು ನೀಡುವುದಾಗಿ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಭರವಸೆ ನೀಡಿದ್ದಾರೆ
ಈ ಕುರಿತು ಮುಖ್ಯಮಂತ್ರಿಗಳ ಕಚೇರಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ದೆಹಲಿಗೆ ಹಾರಿದ ಸಿಎಂ ಪ್ರಧಾನಿ ಸೇರಿದಂತೆ ಪಕ್ಷದ ವರಿಷ್ಠರನ್ನು ಭೇಟಿ ಮಾಡಿದ್ದಾರೆ.
ಇದೇ ಸಂದಭದಲ್ಲಿ ಕೇಂದ್ರದ ಆರೋಗ್ಯ ಸಚಿವರನ್ನು ಭೇಟಿಯಾಗಿದ್ದಾರೆ. ಈ ಸಂದಭದಲ್ಲಿ ಆರೋಗ್ಯ ಸಚಿವರು ರಾಜ್ಯಕ್ಕೆ ಆರೋಗ್ಯ ಸೌಕಯ ಕಲ್ಪಿಸಲು 800 ಕೋಟಿ ನೆರವು ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.