ಪ್ರಮುಖ ಸುದ್ದಿ
ಬಿಗ್ ಶಾಕಿಂಗ್ಃ ಜಿಪಂ, ತಾಪಂ ಚುನಾವಣೆ ಮುಂದೂಡಿಕೆ
ಬಿಗ್ ಶಾಕಿಂಗ್ಃ ಜಿಪಂ, ತಾಪಂ ಚುನಾವಣೆ ಡಿಸೆಂಬರ್ ವರೆಗೆ ಮುಂದೂಡಿಕೆ
ಬೆಂಗಳೂರಃ ಈಗಾಗಲೇ ರಾಜ್ಯ ಸರ್ಕಾರ ಜಿಲ್ಲಾ ಪಂಚಾಯತ ಮತ್ತು ತಾಲೂಕಾ ಪಂಚಾಯತ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿರುವ ಹಿನ್ನೆಲೆ ಎಲ್ಲಡೆ ಚುನಾವಣೆ ವಾತಾವರಣ ಗರಿಗೆದರಿತ್ತು.
ಆದರೆ ಗುರುವಾರ ಏಕಾಏಕಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಡಿಸೆಂಬರ್ ವರೆಗೆ ಚುನಾವಣೆ ನಡೆಸದಿರಲು ತೀರ್ಮಾನಿಸಲಾಗಿದೆ.
ಈ ಕುರಿತು ಸಂಪುಟ ಸಭೆ ನಂತರ ಮಾಧ್ಯಮಕ್ಕೆ ಹೇಳಿಕೆ ನೀಡಿದ ಗೃಹಸಚಿವ ಬಸವರಾಜ ಬೊಮ್ಮಾಯಿ, ಕೊರೊನಾ ಮೂರನೇ ಅಲೆಯ ಭೀತಿ ಎದುರಾಗಿರುವ ಹಿನ್ನೆಲೆ 2021ರ ಡಿಸೆಂಬರ್ ವರೆಗೆ ಜಿಪಂ ಮತ್ತು ತಾಪಂ ಚುನಾವಣೆ ನಡೆಸದಿರಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹೀಗಾಗಿ ಗ್ರಾಮೀಣ ಭಾಗದಲ್ಲಿ ಗರಿಗೆದರಿದ್ದ ಚುನಾವಣೆ ವಾತಾವರಣ ಇದೀಗ ಮಂಕು ಕವಿದಂತಾಗಿದೆ ಎನ್ನಬಹುದು.