ಪ್ರಮುಖ ಸುದ್ದಿ
ಮಕ್ಕಳಿಗೆ ಚಿಪ್ಸ್ ಕೊಡಿಸುವ ಮುನ್ನ ಎಚ್ಚರ..!

ಪೋಷಕರೇ ಮಕ್ಕಳು ಆಸೆಪಟ್ಟು ತಿನ್ನುವ ಚಿಪ್ಸ್‌ನಲ್ಲಿದೆ ಅಪಾಯಕಾರಿ ಅಂಶ. ಟೋಕಿಯೋದಲ್ಲಿ ಭೂತ್ ಜೋಲೋಕಿಯಾ ಚಿಪ್ಸ್ ತಿಂದು 14 ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶಾಲೆಯಲ್ಲಿ ಮನೋರಂಜನೆಗಾಗಿ ಸೇವಿಸಿದ ಚಿಪ್ಸ್ ಅತ್ಯಂತ ಖಾರವಾದ ಚಿಪ್ಸ್ ಎಂದು ಹೆಸರು ವಾಸಿಯಾಗಿದೆ. ಚಿಪ್ಸ್ ಬಾಯಿಗೆ ಇಡುತ್ತಿದ್ದಂತೆ
ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡಿದ್ದಾರೆ. 18 ವರ್ಷದ ಮೇಲ್ಪಟ್ಟವರಿಗೆ ಮಾತ್ರ ಎಂಬ ಕಂಪನಿಯ ಸಂದೇಶವನ್ನು ಕಡೆಗಣಿಸಿದ್ದು ಈ ಘಟನೆಗೆ ಕಾರಣವಾಗಿದೆ.
ನಿಮ್ಮ ಮಕ್ಕಳಿಗೆ ಕಂಡ ಕಂಡಲ್ಲಿ ಚಿಪ್ಸ್ ಕೊಡಿಸುವ ಮುನ್ನ ಎಚ್ಚರವಿರಲಿ.