ಬಾದಾಮಿಯಲ್ಲಿ ಚಿಮ್ಮನಕಟ್ಟಿ ಪುತ್ರನ ಗಟ್ಟಿ ಮಾತು

ಬಿಬಿ ಚಿಮ್ಮನಕಟ್ಟಿ ಪುತ್ರ ಭೀಮಸೇನ ಭಾವುಕ ನುಡಿ
yadgiri, ಬಾದಾಮಿಃ ನನ್ನ ಜನ್ಮ ದಿನಕ್ಕೆ ಇಷ್ಟೊಂದು ಜನ ಸೇರ್ತಿರಿ ಅಂತಾ ನಾನು ಅಂದ್ಕೊಂಡಿದ್ದಿಲ್ಲ. ಕ್ಷೇತ್ರದಲ್ಲಿ ನನ್ನ ಮೇಲೆ ಸಾಕಷ್ಟು ಸುಳ್ಳು ಆರೋಪ ಮಾಡಿ ಹೆಸರು ಕೆಡಿಸುತ್ತಿರುವದು ಗೊತ್ತಿದೆ. ಆ ಕಾರಣ ನಾನು ಇಂತಹ ಸಮಯವೇ ಕಾಯುತ್ತಿದೆ. ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಚಿರಋಣಿ ಎಂದು ಬಿ.ಬಿ.ಚಿಮ್ಮನಕಟ್ಟಿ ಪುತ್ರ ಭೀಮಸೇನೆ ಭಾವುಕರಾಗಿ ಮಾತನಾಡಿದರು.
ನಗರದ ಕಾಳಿದಾಸ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ಭೀಮಸೇನ ಚಿಮ್ಮನಕಟ್ಟಿ ಅವರ 39 ನೇ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರೀತಿ, ಗೌರವಾದಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನಾನು ಮಾತಾಡಬೇಕು ನಿಮಗೆಲ್ಲ ವಿಷಯ ತಿಳಿಸಬೇಕು ಅಂದ್ಕೊಳ್ತಿದ್ದೆ, ಇಂದು ನಾನೇನು ಕೆಟ್ಟದ್ದು ಮಾಡದೆಯೇ ನೋವು ಅನುಭವಿಸುವಂತಾಗಿದೆ. ಸಾಕಷ್ಟು ಬಾರಿ ಕೇಳಿಕೊಂಡರು ನನ್ನನ್ನು ದ್ವೇಷಿಸುವದು ಬಿಡುತ್ತಿಲ್ಲ. ಅನವಶ್ಯವಾಗಿ ನನ್ನ ಹೆಸರು ಹಾಳು ಮಾಡುತ್ತಿದ್ದಾರೆ ಎಂದು ಎಂದು ಮಾರ್ಮಿಕವಾಗಿ ನುಡಿದರು.
ಬಹಳ ಜನ ಹೇಳ್ತಾರೇ ಸಾಹುಕಾರರೇ ನೀವು ಗಟ್ಟಿಯಾಗಿ ಎಂದು ನಾನು ಕೇಳಿ ಸಾಕಾಗಿದೆ ಇಂದು ನಾನು ಗಟ್ಟಿಯಾಗಿ ನಿಂತಿದ್ದೇನೆ. ನಿಮ್ಮ ಉಡಿಯಲ್ಲಿ ಬಿದ್ದಿದೇನೆ ನನ್ನ ಎತ್ತಿಕೊಳ್ಳುವದು ಬಿಡುವದು ನಿಮಗೆ ಬಿಟ್ಟಿದ್ದು, ನಮ್ಮ ತಂದೆಯವರಿಗೆ ನೀಡಿದ ಶಕ್ತಿ ನನಗೂ ತುಂಬಿ. ನಿಮ್ಮ ಆಸರೆ ನನಗೆ ಖಂಡಿತ ಬೇಕು. ಅದನ್ನು ಉಳಿಸಿಕೊಳ್ಳುವದು ನನ್ನ ಜವಬ್ದಾರಿ ಎಂದರು.
ನೆರೆದ ಜನ ಅಭಿಮಾನಿಗಳು ಕೇಕೆ ಹಾಕಿ ನಾವು ನಿಮ್ಮ ಜೊತೆ ಇದ್ದೇವೆ ಸಾಹುಕಾರರೇ ಕಣ್ಣೀರು ಹಾಕಬೇಡಿ ಎಂದು ಕೂಗಿದರು. ನಾನು ನೀವು ಹೇಳಿದಂತೆ ಗಟ್ಟಿಯಾಗಿದ್ದೇನೆ. ಆಗಲೇಬೇಕು ಹೀಗಾಗಿ ಮುಂದಿನದು ನಿಮಗೆ ಬಿಟ್ಟಿದ್ದು ಎಂದರು.