ಕಾಫಿನಾಡಿನಲ್ಲಿ ಹೆಮ್ಮಾರಿ ಓಟ, 37 ಮಕ್ಕಳಿಗೂ ಕೊರೊನಾ

ಕಾಫಿನಾಡಿನಲ್ಲಿ ಹೆಚ್ಚಿದ ಹೆಮ್ಮಾರಿ ಓಟ, ನಾಗರಿಕರಲ್ಲಿ ಆತಂಕ, 24 ಗಂಟೆಯಲ್ಲಿ 78 ಕೊರೊನಾ ಪ್ರಕರ ಪತ್ತೆ, 37 ಮಕ್ಕಳಿಗೂ ಕೊರೊನಾ
ಚಿಕ್ಕಮಗಳೂರುಃ ಕಾಫಿನಾಡಿಗೆ ಹೆಮ್ಮಾರಿ ಕಾಲಿಟ್ಟಿದ್ದು, ಕೇವಲ 24 ಗಂಟೆಯಲ್ಲಿಯೇ 78 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 37 ಜನ ಮಕ್ಕಳಿಗೂ ಕೊರೊನಾ ಪಾಸಿಟಿವ್ ದೃಢವಾಗಿದೆ.
ತಾಲೂಕಿನ ಬಾಳೂರಿನ ಹಾಸ್ಟೇಲ್ ನಲ್ಲಿ 3 ಮಕ್ಕಳಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆ ಎಲ್ಲಾ ಮಕ್ಕಳನ್ನು ರ್ಯಾಂಡಮ್ ಪರೀಕ್ಷಿಸಲಾಗಿ 37 ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. ಆದರೆ ಯಾರಿಗು ರೋಗದ ಲಕ್ಷಣಗಳು ಕಾಣುತ್ತಿಲ್ಲವೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮಕ್ಕಳಲ್ಲಿ ಸೋಂಕು ಹೆಚ್ಚಾಗುತ್ತಿದ್ದು ಜನರನ್ನು ಆತಂಕಕ್ಕೀಡು ಮಾಡಿದೆ.
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಿದ್ದು, ಮತ್ತು ಗ್ರಾಮೀಣ ಭಾಗದಲ್ಲಿ ಸೋಂಕಿನ ತೀವ್ರತೆ ಹೆಚ್ವಾಗುತ್ತಿರುವ ಹಿನ್ನೆಲೆ ಕಾಫಿನಾಡಿನಲ್ಲಿ ಆಂತಕ ಶುರುವಾಗಿದೆ. ಜಿಲ್ಲೆಗೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸದಂತೆ ನಿರ್ಬಂಧ ಹೇರಲು ಸ್ಥಳೀಯರು ಆಗ್ರಹಿಸಿದ್ದಾರೆ.