ಬಾರದ ಕಾರ್ಮಿಕರು ಮೆಣಸಿನಕಾಯಿ ತಂದ ರೈತರ ಪರದಾಟ
ಕೋಲ್ಡ್ ಸ್ಟೋರೇಜ್ ಒಳಗಡೆ ತೆಗೆದುಕೊಳ್ಳದ ಮೆಣಸಿನಕಾಯಿ
yadgiri, ಶಹಾಪುರಃ ಈ ವರ್ಷ ಮೆಣಸಿನಕಾಯಿ ಫಲ ಚನ್ನಾಗಿ ಬಂದಿದ್ದು, ಸಮರ್ಪಕ ಬೆಲೆ ದೊರೆಯದ ಕಾರಣ ರೈತರು ಮೆಣಸಿನಕಾಯಿ ಚೀಲಗಳನ್ನು ಕೋಲ್ಡ್ ಸ್ಟೋರೇಜ್‍ನಲ್ಲಿ ಇಡಲು ಸಾಲು ಗಟ್ಟಿ ನಿಂತಿವೆ. ಆದರೆ ಚೀಲಗಳನ್ನು ಸ್ಟೋರೇಜ್ನಲ್ಲಿಡಲು ಕಾರ್ಮಿಕರಿಲ್ಲದೆ ಪರದಾಡುವಂತಾಗಿದೆ.
ಸ್ಟೋರೇಜ್‍ನಲ್ಲಿ ಕೆಲಸ ಮಾಡುವ ಕಾರ್ಮಿಕರು ದಿನಾಚರಣೆ ಮತ್ತು ಕೊರೊನಾ ಕಫ್ರ್ಯೂ ಹಿನ್ನೆಲೆ ಕೆಲಸಕ್ಕೆ ಬಾರದ ಕಾರಣ ಮೆಣಸಿನಕಾಯಿ ಚೀಲಗಳನ್ನು ಸ್ಟೋರೇಜ್ ನಲ್ಲಿ ಹೊತ್ತೊಯ್ಯಲು ಯಾರೊಬ್ಬರು ಇಲ್ಲದೆ ಹೊರಗಡೆಯೇ ಸಾಲುಗಟ್ಟಿ ಲೋಡಗಟ್ಟಲೇ ಮೆಣಸಿನಕಾಯಿ ನಿಂತಿವೆ.
ಕಳೆದ ಎರಡು ದಿನದಿಂದ ಗಾಳಿ, ಗುಡುಗು ಸಹಿತ ಅಲ್ಪಸ್ವಲ್ಪ ಮಳೆಯಾಗುತ್ತಿದ್ದು, ಮೆಣಸಿನಕಾಯಿ ನೀರಲ್ಲಿ ತೊಯ್ದು ಕೆಟ್ಟು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಸ್ಟೋರೇಜ್ ನಲ್ಲಿ ವರ್ಷಕ್ಕೆ ಒಂದು ಮೆಣಸಿನಕಾಯಿ ಚೀಲಕ್ಕೆ 180 ರೂ.ಬಾಡಿಗೆ ಇದೆ. ಒಂದು ವರ್ಷವಾದರೂ ಸರಿ ಸಮರ್ಪಕ ಬೆಲೆ ಬರುವವರೆಗೆ ಸ್ಟೋರೇಜ್ ನಲ್ಲಿ ಇಡಬೇಕೆಂಬ ಹಂಬಲದಿಂದ ರೈತರು ಮೆಣಸಿನಕಾಯಿಗಳನ್ನು ಲೋಡ್‍ಗಟ್ಟಲೆ ತಂದಿದ್ದಾರೆ. ಆದರೆ ಸ್ಟೋರೇಜ್‍ನಲ್ಲಿ ಕಾರ್ಮಿಕರಿಲ್ಲದೆ ಅನಿವಾರ್ಯವಾಗಿ ಹೊರಗಡೆ ನಿಲ್ಲುವ ಪರಿಸ್ಥಿತಿ ಎದುರಾಗಿದೆ ಎಂದು ರೈತರು ಕೈಕೈಹಿಸುಕುವಂತಾಗಿದೆ.
ಸ್ಟೋರೇಜ್ ಮಾಲೀಕರು ಎರಡು ದಿನ ಕಾರ್ಮಿಕರು ಬರಲಿದ್ದಾರೆ. ಕೂಡಲೇ ಸ್ಟೋರೇಜ್ ಮಾಡುವ ವ್ಯವಸ್ಥೆ ಮಾಡಲಾಗುವದು ಎಂದು ಹೇಳುತ್ತಿದ್ದಾರೆ. ರಾಯಚೂರು, ಸಿಂಧನೂರ, ಸುರಪುರ ಸೇರಿದಂತೆ ಶಹಾಪುರ ತಾಲೂಕಿನ ರೈತರು ಮೆಣಸಿನಕಾಯಿ ಚೀಲಗಳನ್ನು ಕೋಲ್ಡ್ ಸ್ಟೋರೇಜ್ ನಲ್ಲಿಡಲು ತಂದಿದ್ದು, ಸ್ಟೋರೇಜ್ ನಿಂದ ಮೇನ್ ಹೆದ್ದಾರಿವರೆಗೂ ಮೆಣಸಿನಕಾಯಿ ಹೊತ್ತು ತಂದ ವಾಹನಗಳು ಸಾಲುಗಟ್ಟಿ ನಿಂತಿವೆ.
ಕೊರೊನಾ ಕಫ್ರ್ಯೂ ಬೇರೆ ಇರುದರಿಂದ ಮೆಣಸಿನಕಾಯಿ ತಂದ ವಾಹನ ಚಾಲಕರು, ರೈತರಿಗೆ ತಿಂಡಿ ಊಟ ದೊರೆಯದೆ ಮೆಣಸಿನಕಾಯಿ ಸ್ಟೋರೇಜ್ನೊಳಗೂ ಹೋಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ವ್ಯವಸ್ಥೆ ಮಾಡಿಸಬೇಕೆಂದು ರೈತರು ಮನವಿ ಮಾಡಿದ್ದಾರೆ.
ರಾಯಚೂರ ಜಿಲ್ಲೆಯಿಂದ ಮೆಣಸಿನಕಾಯಿ ತಂದಿದ್ದೇನೆ. ಕೋಲ್ಡ್ ಸ್ಟೋರೇಜ್ ನಲ್ಲಿಡಬೇಕೆಂದು. ಎರಡು ದಿನವಾಯಿತು ಯಾರೊಬ್ಬರು ಕಾರ್ಮಿಕರಿರದ ಕಾರಣ ಮೆಣಸಿನ ಚೀಳ ಸ್ಟೋರೇಜ್ ಒಳಗಡೆ ತೆಗೆದುಕೊಳ್ಳುತ್ತಿಲ್ಲ. ಮಳೆ ಗಾಳಿ ಬೀಸುತ್ತಿದೆ. ಮಳೆ ಬಂದರೆ ಮೆಣಸಿನ ಕಾಯಿ ತೊಯ್ದು ಕೊಳೆಯುವು ಸಾಧ್ಯತೆ ಇದೆ. ಸ್ಟೋರೇಜ್‍ನವರು ಕೂಡಲೇ ಕಾರ್ಮಿಕರನ್ನು ಕರೆ ತಂದು ನಮ್ಮ ಮೆಣಸಿನಕಾಯಿ ಚೀಲ ಸ್ಟೋರೇಜ್ ಮಾಡಿಕೊಳ್ಳಬೇಕು.
-ಬಸಣ್ಣ ರಾಯಚೂರ. ರೈತ.