ಪ್ರಮುಖ ಸುದ್ದಿ
ಕಲಬುರಗಿ: ವಿದ್ಯುತ್ ಸ್ಪರ್ಶಿಸಿ ದಂಪತಿ ಸಾವು!
ಸಾವಿನಲ್ಲೂ ಒಂದಾದ ಒಲವಿನ ಜೋಡಿಜೀವ…
ಕಲಬುರಗಿ: ಚಿಂಚೋಳಿ ತಾಲೂಕಿನ ಕುಡ್ಡಳ್ಳಿ ಗ್ರಾಮದ ತುಳಜಪ್ಪ ಎಂಬುವರ ಮನೆಯಲ್ಲಿ ಟಿವಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಪರಿಣಾಮ ಟಿವಿ ಪ್ಲಗ್ ಸಮಸ್ಯೆ ಇರುವುದನ್ನು ಗುರುತಿಸಿದ ತುಳಜಪ್ಪ ರಿಪೇರಿಗೆ ಮುಂದಾಗಿದ್ದಾರೆ. ರಿಪೇರಿ ಸಂದರ್ಭದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ತುಳಜಪ್ಪ (70) ಅಸ್ವಸ್ಥರಾಗಿದ್ದಾರೆ. ಪತಿ ವಿದ್ಯುತ್ ಸ್ಪರ್ಶಕ್ಕೊಳಗಾಗಿದ್ದು ಕಂಡ ಪತ್ನಿ ಶರಣಮ್ಮ (60) ಪತಿಯನ್ನು ರಕ್ಷಿಸಲು ಮುಂದಾಗಿದ್ದಾರೆ. ಹೀಗಾಗಿ, ವಿದ್ಯುತ್ ಸ್ಪರ್ಶಕ್ಕೆ ಈಡಾಗಿದ್ದ ಪತಿ ತುಳಜಪ್ಪ ಅವರನ್ನು ಸ್ಪರ್ಶಿಸಿದ ಶರಣಮ್ಮ ಅವರಿಗೂ ವಿದ್ಯುತ್ ಹರಿದಿದೆ.
ಪರಿಣಾಮ ದಂಪತಿಗಳಿಬ್ಬರೂ ವಿದ್ಯುತ್ ಸ್ಪರ್ಶಿಸಿ ದುರ್ಮರಣಕ್ಕೀಡಾದ ಘಟನೆ ನಡೆದಿದದೆ. ಸುಲೇಪೇಟ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಸಾವಿನಲ್ಲೂ ಒಂದಾದ ಒಲವಿನ ಜೋಡಿ ಜೀವಗಳನ್ನು ನೆನೆದು ಇಡೀ ಗ್ರಾಮ ಕಂಬನಿ ಮಿಡಿದಿದೆ.