ಪ್ರಮುಖ ಸುದ್ದಿವಿನಯ ವಿಶೇಷ

ವಿದ್ಯುತ್ ಜತೆ ಯುದ್ಧ ನಡೆಸಿ ಜಗಕೆ ಬೆಳಕು ತಂದು ಕೊಡುವ ಯೋಧರು.!

ಕತ್ತಲೊಡೆದೋಡಿಸಿ ಬೆಳಕು ಮೂಡಿಸುವ ಯೋಧ

ಕತ್ತಲೊಡೆದೋಡಿಸಿ ಬೆಳಕು ಮೂಡಿಸುವ ಯೋಧ ಲೈನ್ ಮನ್

ಕತ್ತಲಲ್ಲಿ ಬೆಳಕು ಚೆಲ್ಲುವ ವಿದ್ಯುತ್ತಿನ ಯೋಧರು ಈ ಲೈನಮನರು!!..

“ಪ್ರಣತೆಯೂ ಇದೆ ಬತ್ತಿಯೂ ಇದೆ
ಜ್ಯೋತಿಯ ಬೆಳಗುವಡೆ ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೊ
ಗುರುವಿದೆ ಲಿಂಗವಿದೆ
ಶಿಷ್ಯನ ಸುಜ್ಞಾನ ಅಂಕುರಿಸದನ್ನಕ್ಕರ
ಭಕ್ತಿ ಎಲ್ಲಿಯದೊ ಗುಹೇಶ್ವರಾ”

ಅಲ್ಲಮಪ್ರಭುಗಳು ಸಾರಿದಂತೆ ಎಣ್ಣೆಯೂ ಇದೆ ಬತ್ತಿಯೂ ಇದೆ ಇವೆರಡೂ ಜ್ವಾಲೆಯಿಂದ ಬೆಳಕಿನ ಪ್ರಭೆ ಚೆಲ್ಲುತ್ತದೆ ಇವೆರಡೂ ಇಲ್ಲದಿದ್ದರೆ ಬೆಳಕೆ ಇಲ್ಲ ಹಾಗೇ ಇಂದಿನ ಆಧುನಿಕತೆಯ ಯುಗದಲ್ಲಿ ಪವರ ಮ್ಯಾನ ಲೈನಮ್ಯಾನಗಳಿಲ್ಲದಿದ್ದರೆ ಬೆಳಕೆ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ,ತಮ್ಮ ಜೀವದ ಹಂಗು ತೊರೆದು ನಮ್ಮೆಲ್ಲರ ಮನೆಯ ಬೆಳಕಿಗಾಗಿ ಶ್ರಮಿಸುವ ಕರಸೈನಿಕರು ಈ ವಿದ್ಯುತ್ ಯೋಧರು..!

ಈಗಷ್ಟೇ ಮಳೆಗಾಲ ಪ್ರಾರಂಭವಾಗಿದೆ ಎಲ್ಲೆಂದರಲ್ಲಿ ಬೀಳುವ ಕಂಬಗಳು,ಹರಿದ ವಿದ್ಯುತ್ತಿನ ತಂತಿಗಳು,ಕತ್ತಲಿನ ಊರುಗಳು ನೋಡಲು ಕಾಣಸಿಗುತ್ತವೆ ಅದರ ಜೊತೆಗೆ ಅವೆಲ್ಲವನ್ನು ಸರಿಪಡಿಸಲು ಹರಸಾಹಸ ಪಡುತ್ತ,ಭೀಕರ ಮಳೆಯ ಪ್ರಭಾವ,ವಿದ್ಯುತ್ತಿನ ಪ್ರವಾಹ ಎರಡರಲ್ಲೂ ಈಜಾಡುತ್ತ ಸರಿಪಡಿಸುತ್ತ ನಮ್ಮ ಜೀವನಕ್ಕೆ ಬೆಳಕು ನೀಡುವ ಪವರಮ್ಯಾನ, ಲೈನಮನಗಳು ನಮ್ಮ ಬದುಕಿನ ಬೆಳಕಿನ ಸಾಧಕರಾಗಿ ಬಿಂಬಿತರಾಗುತ್ತಾರೆ!

ಇಂದಿನ ಆಧುನಿಕ ಯುಗದಲಿ ನಾವೆಲ್ಲ ಬೆಳಕಿಗೆ ಎಷ್ಟೊಂದು ಹೊಂದಿಕೊಂಡುಬಿಟ್ಟಿದ್ದೇವೆ ಎಂದು ಯೋಚಿಸಿದರೇ ಅಚ್ಚರಿ ಎನಿಸುತ್ತದೆ. ಬೆಳಕಿಲ್ಲದೆ ಬದುಕೇ ಇಲ್ಲ ಎನ್ನುವಂತಾಗಿದೆ. ಬೆಳಕಿಗೂ ಆಧುನಿಕತೆಗೂ ನೇರಾನೇರ ಸಂಬಂಧ ಕಲ್ಪಿಸಿರುವ ಮನುಷ್ಯ ಕತ್ತಲನ್ನು ಒಂದು ಕಠೋರ ಅನುಭವ ಎಂದು ಭ್ರಮಿಸಿಬಿಟ್ಟಿದ್ದಾನೆ. ಜಗತ್ತಿನ ಪ್ರತಿ ವಸ್ತುವೂ ಜೀವಂತವಾಗಿರಲು, ವಿದ್ಯುತ್‌ ಬೇಕೇ ಬೇಕು. ಮನೆಯ ಟಿವಿ, ಟೇಪ್‌ ರೆಕಾರ್ಡರ್‌, ಮೊಬೈಲ್‌ಗ‌ಳು, ಬಲ್ಬ್ಗಳು, ಆಸ್ಪತ್ರೆಗಳು,ಕಾರ್ಖಾನೆಗಳು,ಸೇರಿದಂತೆ ಸುಗಮಜೀವನ ಸಾಗಿಸಲು ಪ್ರತಿಯೊಂದು ಕೆಲಸಕ್ಕೂ, ಎಲ್ಲದಕ್ಕೂ ವಿದ್ಯುತ್‌ ಬೇಕು. ವಿದ್ಯುತ್‌ನಿಂದ ಇವೆಲ್ಲಾ ಝಗಮಗಿಸಬೇಕು. ಆ ಬೆಳಕಿನ ವೈಭೋಗವನ್ನು ಮನುಷ್ಯ ಕಣ್ತುಂಬಿಕೊಳ್ಳಬೇಕು. ಬೆಳಕು ಇಂದು ಕೇವಲ ಬಳಕೆಯ ಮೌಲ್ಯವಾಗಿಯಷ್ಟೇ ಉಳಿದಿಲ್ಲ. ಅದರ ಕೊಡು ಕೊಳ್ಳುವ ವಿನಿಮಯ ಮೌಲ್ಯವೂ ಭಾರೀ ದುಬಾರಿಯೇ! ಅದರ ಸಂಕೇತ ಮೌಲ್ಯವಂತೂ ಅದರಷ್ಟೇ ವೇಗ, ವ್ಯಾಪಕತೆಯಲ್ಲಿ ಬೆಳೆದಿದೆ,ಆದ್ದರಿಂದ ನಾವೂ ಈ ಯಾಂತ್ರಿಕ ಯುಗದಲ್ಲಿ ನಾವೆಲ್ಲ ಬೆಳಕು ನೀಡುವ ವಿದ್ಯುತ್ತಿನ ಯೋಧರನ್ನು ಅನುಕ್ಷಣವೂ ನೆನೆಯಲೇಬೇಕಾದ ಪ್ರಸಂಗ ಇದಾಗಿದೆ..

ಸ್ವಜೀವನ ಅಂಧಕಾರದಲಿ ದೂಕಿ ಬೆಳಕು ನೀಡುವ ಲೈನಮನಗಳು!

ಮನುಷ್ಯ ಬೆಳಕಿಲ್ಲದಿದ್ದರೆ ತನ್ನ ಕಣ್ಣೆ ಕಳೆದುಕೊಂಡಂತೆ ಹಪಹಪಿಸುತ್ತಾನೆ,ಎಲ್ಲವನ್ನು ಕಳೆದುಕೊಂಡಂತೆ ನಿಟ್ಟುಸಿರು ಬಿಡುತ್ತಾನೆ,ಮಳೆ,ಬಿಸಿಲು,ಚಳಿ ಹಗಲು ರಾತ್ರಿ ಲೆಕ್ಕಿಸದೇ ಅದೆಷ್ಟೋ ಬಾರಿ ಆಕಸ್ಮಿಕವಾಗಿ ಆಗುವ ಪ್ರಮಾದಗಳಿಂದಾಗಿ,ವಿದ್ಯುತ್ತಿನ ಒತ್ತಡದಿಂದಾಗಿ ನಮ್ಮೆಲ್ಲರಿಗೂ ಬೆಳಕಾಗಲು ಹೋಗಿ ಅವಘಡಗಳಿಗೆ ತುತ್ತಾಗಿ ತಮ್ಮ ಕುಟುಂಬಗಳಿಗೆ ಶವವಾಗಿ ತಮ್ಮ ಕುಟುಂಬಸ್ಥರೆಲ್ಲರನ್ನು ಅನಾಥಪ್ರಜ್ನೆ ಕಾಣುವಂತಹ ಸ್ಥಿತಿಗೆ ಹಾಗೂ ತಮ್ಮ ಕೈ,ಕಾಲು ಕಳೆದುಕೊಂಡು ಅಂಗವೈಕಲ್ಯದಂತಹ ಸ್ಥಿತಿಗೆ ತಮ್ಮನ್ನೇ ತಾವೂ ದೂಡಿಕೊಂಡು ಬೆಳಕು ನೀಡುವ ಇವರು ನಿಜವಾದ ಸಾಧಕರು,ನಮ್ಮ ಹೆಮ್ಮೆಯ ವಿದ್ಯುತ್ ಯೋಧರು! ಇವರನ್ನು ನಾವೆಲ್ಲ ಲೈನಮನರು,ತೀರಾ ಇತ್ತಿಚೆಗೆ ಇವರನ್ನು ಪವರಮ್ಯಾನಗಳೆಂದು ಸಂಭೋದಿಸಲಾಗುತ್ತಿದೆ,ರಾಜ್ಯದ ಕತ್ತಲೆಯನ್ನು ಸಶಕ್ತವಾಗಿ ಒಡಿಸಲು ಸದಾ ಕಾರ್ಯಮಗ್ನರಾಗಿರುವ ಕರಸೈನಿಕರು ಇವರಾಗಿದ್ದಾರೆ..
ಮಾನವ ನಿಜಕ್ಕೂ ಆದಿಮಾನವ ಕಾಲದಿಂದಲೂ ಕಲ್ಲಿನಿಂದ ಉಜ್ಜಿ ಪಡೆದ ಬೆಳಕಿನಿಂದ ಆಧುನಿಕತೆಯ ವಿದ್ಯುಚ್ಚಕ್ತಿಯ ಬೆಳಕು ಪಡೆಯುವವರೆಗೂ ಮಾನವ ಸಂಕೀರ್ಣನಾಗಿದ್ದಾನೆ,
ಹತ್ತು ನಿಮಿಷ್ಯ ಕರೆಂಟ್ ಬರದಿದ್ದರೆ ಸಿಕ್ಕ ಸಿಕ್ಕ ಪದಗಳಲ್ಲಿ ಬೈಯುವ ನಾವುಗಳು ಲೈನಮನಗಳ ಆ ಕಷ್ಟ ಅರಿಯುವುದು ಕಷ್ಟಸಾಧ್ಯವಾಗಿದೆ ನಮ್ಮನೆಯ ಮಕ್ಕಳೋ,ಅಣ್ಣತಮ್ಮಂದಿರೋ ಆ ಸ್ಥಳದಲ್ಲಿದ್ದಾಗಿನ ಅನುಭವ ಅವರು ತಮ್ಮ ಕಷ್ಟಗಳನ್ನು ತೋಡಿಕೊಂಡಾಗ ನಿಜಕ್ಕೂ ಕಣ್ಣೀರು ಜೀನುಗುತ್ತದೆ,ಕರೆಂಟಿನೊಂದಿಗೆ ವ್ಯವಹರಿಸಬಹುದು ಆದರೆ ಜೀವನ ಕಷ್ಟ! ಹಾಗೆಯೇ ಪ್ರತಿ ಕ್ಷಣವೂ ವಿದ್ಯುತ್ತಿನೊಂದಿಗಿನ ಆಟ ನಿಜಕ್ಕೂ ಘೋರಬದುಕು ಅವರದಾಗಿರುತ್ತದೆ,ಸ್ವಲ್ಪ ಎಚ್ಚರ ತಪ್ಪಿದರೂ ಕ್ಷಣಾರ್ಧದಲ್ಲಿ ವಿದ್ಯುತ ಮೈಪ್ರವಹಿಸಿಬಿಡುತ್ತದೆ ಕ್ಷಣಾರ್ಧದಲ್ಲಿ ಎಲ್ಲವೂ ಮಾಯ! ಇದು ಲೈನಮನಗಳ ವಿಸ್ಮಯದ ಬದುಕಿನ ಕಥೆ!..
ಹೇಳಲು ಎಲ್ಲವೂ ಸುಲಭ ಅದೆತ್ತರದ ಪಟಪಟನೆ ಕಂಬಗಳೇರಿ,ಕಬ್ಬಿಣ ಸಲಾಖೆ,ಅತಿಭಾರದ ಟ್ರಾನ್ಸ್ಪಾರ್ಮರ್,ಅತಿ ಉದ್ದದ ಸದಾ ಕೆಸರು ಮೆತ್ತಿದ ಕೈಗಳು,ಕಟ್ಟಿಂಗ ಪ್ಲೇಯರಗಳು,ಎತ್ತರದ ಟವರಗಳು,ನೋಡ ನೋಡುತ್ತಲೆ ಕತ್ತಲಿದ್ದ ಊರುಗಳನೆಲ್ಲ ಜಗ್ಗಾಡಿ ಕಾದಾಡಿ ಕರೆಂಟಿನ ಸಮಸ್ಯೆಗಳು ಬಗೆಹರಿಸಿದಾಗ ಮೂಡುವ ಮಂದಹಾಸ ಅವರ ಜೀವನ ದಿನನಿತ್ಯದ ದಿನಚರಿಗಳ ವಸ್ತುಗಳಾಗಿವೆ!..

ಸುರಕ್ಷತೆಗಾಗಿ ಎಲ್ಲವೂ ಇರುವಾಗ ನಿರ್ಲಕ್ಷತನ ಕಾಡಿತಂತೆ!

ಸರ್ಕಾರಗಳು ಪ್ರತಿ ಲೈನಮನಗಳ ಅವಘಡಗಳಾದಗಲೂ ಎಚ್ಚರಿಸುವುದುಂಟು ಸುರಕ್ಷಾ ಸಾಧನಗಳನ್ನು ನೀಡಿದ್ದರೂ ಲೈನಮನಗಳ ಅತಿಯಾದ ಹುಂಬತನ,ಅತಿಯಾದ ಭರವಸೆ ತಮ್ಮ ತಮ್ಮ ಜೀವಗಳನ್ನು ಬಲಿಕೊಟ್ಟ ಅದೆಷ್ಟೋ ಉದಾಹರಣೆಗಳಿವೆ,ಹೆಲ್ಮೆಟ್,ಕೈಗ್ಲೌಸ್,ಕಾಲಿಗೆ ಶೂಸ್ ಸೇರಿದಂತೆ ವಿದ್ಯುತ್ ರೋಧದ ಅನೇಕ ಎಲೆಕ್ಟ್ರಾನಿಕ್ ಸಾಮಾನುಗಳನ್ನು ಪ್ರತಿವರ್ಷವೂ ಪ್ರತಿಯೊಬ್ಬ ಲೈನಮಗಳಿಗೂ ನೀಡಲಾಗುತ್ತಿದೆಯಾದರು,ಅದರೂ ಗ್ರಾಮೀಣ ಪ್ರದೇಶಗಳಲ್ಲಿ,ಸಣ್ಣ ಸಣ್ಣ ನಗರಪ್ರದೇಶಗಳಲ್ಲಿ ಸರಿಯಾದ ರೀತಿಯಲ್ಲಿ ಸದ್ಬಳಕೆಯಾಗದಿರುವುದು ನಿಜಕ್ಕೂ ಕಳವಳಕಾರಿ ಸಂಗತಿ,ಅಷ್ಟೇ ಅಲ್ಲ ಪ್ರತಿಯೊಬ್ಬ ಲೈನಮನಗಳಿಗೂ ಯಾಂತ್ರಿಕೃತ ಮೊಬೈಲಗಳ ಮೂಲಕ ಎಲ್.ಸಿ ಗಳನ್ನು ನೀಡಿದ್ದರು ಅದೆಷ್ಟೋ ಪ್ರಕರಣಗಳಲ್ಲಿ ಮುಂಜಾಗ್ರತೆಯಿಲ್ಲದೆ ಅವಸರದಿಂದ ಆಪರೇಟರಗಳ ತಪ್ಪಿನಿಂದ ಅದೆಷ್ಟೋ ಸಾವೂ ಕೂಡ ಆಗಿದ್ದುಂಟು,ಕರ್ನಾಟಕದಲ್ಲಿ ೬ ವಿಭಾಗಗಳಿದ್ದು ಚೆಸ್ಕಾಂ,ಹೆಸ್ಕಾಂ,ಬೆಸ್ಕಾಂ,ಜೆಸ್ಕಾಂ ,ಮೆಸ್ಕಾಂ,ಕೆಪಿಟಿಸಿಎಲ್ ಸೇರಿವೆ,ಎಲ್ಲವೂ ಮಳೆಆಶ್ರಿತ ,ಒಣಬೇಸಾಯ,ಬಿರುಬಿಸಿಲು,ಗುಡ್ಡಗಾಡು ಪ್ರದೇಶಾಗಿಗಳನ್ನು ಒಳಗೊಂಡಿದೆ ಆದ್ದರಿಂದ ಆಯಾ ಪ್ರದೇಶಕ್ಕನುಗುಣವಾಗಿ ಹವಾಗುಣ,ವಾತಾವರಣ ಇರುವುದರಿಂದ ಅಲ್ಲಿನ ವಾತಾವರಣಕ್ಕನುಗುಣವಾಗಿ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಲೇಬೇಕಾದದ್ದು ಪ್ರತಿಯೊಬ್ಬ ಪವರಸೆಂಟರಿನ ಪವರಮ್ಯಾನನ,ಲೈನಮನ್ನನ ಕರ್ತವ್ಯವಾಗಿದೆ..

ಪವರಮ್ಯಾನಗಳ ರಕ್ಷಣೆಗೂ ಆದ್ಯತೆ ನೀಡುವಂತಾಗಲಿ!

ವಿದ್ಯುತ್ತಿನ ಯೋಧರು ವಿದ್ಯುತ್ತಿನ ಅವಘಡಗಳಿಂದಷ್ಟೇ ಅಲ್ಲ,ಕರೆಂಟಿನ ಸಮಸ್ಯೆಗಳಾದಾಗ ಜನರು ವೀವೆಚನೆ ಇಲ್ಲದೆ ಲೈನಮನಗಳ ಮೇಲೆ ಅದೆಷ್ಟೋ ಬಾರಿ ಹಲ್ಲೆ ಮಾಡಿದ ಪ್ರಸಂಗಗಳು ಇವೆ,ಕೃಷಿ ಚಟುವಟಿಕೆಗಳಿಗೆ ನೀರು ಹಾಯಿಸುವ ಸಂದರ್ಭದಲ್ಲಿ ತೊಂದರೆಗಳಾದ ಅದೆಷ್ಟೋ ಬಾರಿ ಹಲ್ಲೆ ಮಾಡಿದ್ದುಂಟು,ಅದಲ್ಲದೆ ಲೋಡಶೆಡ್ಡಿಂಗ ಸಮಯದಲ್ಲಿ ಸರ್ಕಾರವನ್ನು ದೂರಬೇಕಾದ ನಾವುಗಳು ಲೈನಮನಗಳನ್ನು ದೂರಿದರೆ ಏನು ಮಾಡುವುದು ತೀರಾ ಇತ್ತಿಚಿನ ಪ್ರಸಂಗದ ಸಣ್ಣ ಉದಾಹರಣೆ ಸರ್ಕಾರದ ಯುನಿಟ ಪ್ರೀ ಯೋಜನೆ ಪ್ರಚುರಪಡಿಸಿದಾಗ ಮೊದ, ಮೊದಲು ಕರೆಂಟಿನ ಬಿಲ್ಲುಗಳನ್ನ ಕೇಳಲು ಹೋದಾಗ ಲೈನಮನಗಳಿಗೆ ಹೊಡೆದ ಪ್ರಕರಣಗಳು ಕೊಪ್ಪಳ ಹಾಗೂ ಕಲಬುರ್ಗಿಯಲ್ಲಿ ಬೆಳಕಿಗೆ ಬಂದ ಕೆಲವಿಷ್ಟು ಉದಾಹರಣೆಗಳಿವೆ,ಹೀಗೆ ನಾನಾಬಾರಿ ಇಲ್ಲಸಲ್ಲದ ಗುರಿಗಳಿಗೆ ಗುರಿಯಾಗಿ ಲೈನಮನಗಳು ಹರಸಾಹಸ ಪಡುವುದುಂಟು,ಅದಕ್ಕೆ ಸೂಕ್ತ ಕಾನೂನು ಜರೂರಾಗಿದೆ ಹಾಗೂ ಅತಿ ಅವಶ್ಯಕವೂ ಆಗಿದೆ ಯಾಕೆಂದರೆ ತಮ್ಮ ಅತ್ಯಮೂಲ್ಯ ಜೀವವನ್ನು ಒತ್ತೇ ಇಟ್ಟು ಬೆಳಕು ನೀಡುವ ಸಾಧಕರು ಇವರಾಗಿದ್ದಾರೆ ಎನ್ನುವ ಪರಿಕಲ್ಪನೆ ಮೂಡಬೇಕಿದೆ,ಅವಘಡಗಳಿಗೆ ಈಡಾದಾಗ ಸರ್ಕಾರದ ಜೀವವಿಮೆಯ ಜೊತೆಗೆ ಇನ್ನಷ್ಟು ಯೋಜನೆಗಳ ಜಾರಿಯೂ ಅತಿವಶ್ಯಕವಾಗಿದೆ,ಅನುಕಂಪದ ನೇಮಕಾತಿಯಂತೂ ಅವರ ಕುಟುಂಬದ ಬಲಕ್ಕಿರಲಿದ್ದು ಸಾಧ್ಯವಾದಷ್ಟು ಸರ್ಕಾರಗಳು ಪವರಮ್ಯಾನಗಳ ಪವರ್ ಹೆಚ್ವಿಸಲು ಇನ್ನಷ್ಟು ಯೋಜನೆಗಳ ಜಾರಿಗೆ ಮನಸ್ಸು ಮಾಡಬೇಕಿದೆ.‌

ದೇಶದ ಯೋಧರಂತೆ ಬೆಳಕು ನೀಡುವ ಲೈನಮನಗಳು ವಿದ್ಯುತ್ ಯೋಧರು!

ದೇಶ ಕಾಯಲು ಹಗಲು ರಾತ್ರಿ ಕುಟುಂಬ ತೊರೆದು ದೇಶಕ್ಕಾಗಿ ದೇಶದ ರಕ್ಷಣೆಗಾಗಿ ಕಾಯುವ ಸೈನಿಕರು ಒಂದೆಡೆಯಾದರೆ ಹಗಲಿರುಳು ದೇಶದ,ರಾಜ್ಯದ ಸಮಗ್ರ ಅಭಿವೃದ್ಧಿಯಲ್ಲಿ ಕರೆಂಟಿನ ಪ್ರಾಮುಖ್ಯತೆಯ ಜೊತೆ ತಮ್ಮ ಜೀವದ ಹಂಗುತೊರೆದು ಬೆಳಕು ನೀಡುವ ಲೈನಮನಗಳು ಕೂಡಾ ಯೋಧರೇ,ಎಲ್ಲಾ ರಂಗಗಳಲ್ಲಿಯೂ ವಿದ್ಯತ್ತಿನ ಅತಿಯಾದ ಅವಲಂಬನೆ ಅತಿಅವಶ್ಯವಾಗಿರುವದರಿಂದ ಲೈನಮನಗಳು ಸಹಕಾರ ಅಭಿವೃದ್ದಿ ನಿಟ್ಟಿನಲ್ಲಿ ಅತಿಅವಶ್ಯವಾಗಿದೆ,ಕಾರ್ಮಿಕರು ದೇಶದ ಆಸ್ತಿ,’ಆಳಾಗಿ ದುಡಿ ಅರಸನಾಗಿ ಉಣ್ಣು’ ನಾಣ್ಣುಡಿಯಂತೆ ಇಂದು ಜಗತ್ತು ನಡಿಯುತ್ತಿರುವದೇ ಕರೆಂಟಿನಿಂದ ಎನ್ನುವ ದಿನಮಾನಗಳು ಈಗೀವೆ ಆದ್ದರಿಂದ ಸಂಬಳ ಯಾರು ಬೇಕಾದರೂ ನೀಡಬಹುದು ಆದರೆ ಜೀವದ ಜೊತೆ ಯಾರೂ ಆಟ ಆಡರು, ಅದಕ್ಕೆ ಆಳಿನಂತೆ ಸದಾ ಶ್ರಮಿಸುವ ಪವರಮ್ಯಾನಗಳಿಗೆ ,ಲೈನಮನಗಳಿಗೆ ನಮ್ಮೆಲ್ಲರ ಶುಭಹಾರೈಕೆ ಇರಲಿ ಪ್ರತಿಯೊಬ್ಬ ಲೈನಮನಗಳು ಸುರಕ್ಷತೆಯಿಂದ ಕಾರ್ಯನಿರ್ವಹಿಸುವಂತಾಗಲಿ,ಬೆಳಕು ನೀಡುವ ವಿದ್ಯುತ್ ಯೋಧರಿಗೂ ಬಾಳಿನಲ್ಲೂ ಸದಾ ಹೊಂಬೆಳಕಿರಲಿ,ಎಂದು ಆಶಿಸೋಣಾ,ಇಂತಹ ಸಾಧಕರನ್ನ ನಾವು ಸದಾ ನಮ್ಮ ಮನದಲ್ಲಿ ನೆನೆಯೋಣ,ಶುಭವಾಗಲಿ‌…

Oplus_131072

ಸಂಗಮೇಶ ಬಳಗಾರ
ಸಾ.ತಾಳಿಕೋಟಿ

Related Articles

Leave a Reply

Your email address will not be published. Required fields are marked *

Back to top button