‘ಸೈಕಲ್ ಸವಾರಿ’ ಚಿತ್ರ ಬಿಡುಗಡೆಃ ಶುಭಕೋರಿದ ಕಸಾಪ
‘ಸೈಕಲ್ ಸವಾರಿ’ ಚಿತ್ರ ಬಿಡುಗಡೆಃ ಶುಭಕೋರಿದ ಕಸಾಪ
‘ಸೈಕಲ್ ಸವಾರಿ’ ಚಿತ್ರ ಬಿಡುಗಡೆಃ ಶುಭಕೋರಿದ ಕಸಾಪ
yadgiri, ಶಹಾಪುರಃ ಶುಕ್ರವಾರ ನ.3 ರಂದು ಉತ್ತರ ಕರ್ನಾಟಕದ ಕಲಾವಿದರೇ ಸೇರಿಕೊಂಡು ನಿರ್ಮಿಸಿದ ಪ್ರಪ್ರಥಮ ಕನ್ನಡ ಚಲನ ಚಿತ್ರ ‘ಸೈಕಲ್ ಸವಾರಿ’ ಚಿತ್ರ ರಾಜ್ಯಾದ್ಯಂತ ಬಿಡುಗಡೆಗೊಳಿಸಲಾಯಿತು. ಚಿತ್ರ ಬಿಡುಗಡೆ ಹಿನ್ನೆಲೆ ನಗರದ ಜಯಶ್ರೀ ಚಿತ್ರ ಮಂದಿರದಲ್ಲಿ ಬಿಡುಗಡೆಗೂ ಮುನ್ನ ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ವಿಶೇಷ ಪೂಜೆ ಸಲ್ಲಿಸಿ ಚಿತ್ರ ಶತದಿನೋತ್ಸವ ಆಚರಿಸಲಿ ಎಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ಡಾ.ರವೀಂದ್ರನಾಥ ಹೊಸಮನಿ ಮಾತನಾಡಿ, ಉತ್ತರ ಕರ್ನಾಟಕ ಭಾಗದ ಕಲಾವಿದರೇ ಸೇರಿಕೊಂಡು ಹೊಸದಾಗಿ ಕನ್ನಡ ಚಲನ ಚಿತ್ರ ನಿರ್ಮಿಸಿದ್ದು, ನಮ್ಮ ಭಾಗದ ಭಾಷೆ ಸೊಗಡು ಇದರಲ್ಲಿದೆ. ಅಲ್ಲದೆ ಶಹಾಪುರ ತಾಲೂಕಿನ ಸಿಂಗನಹಳ್ಳಿ ಗ್ರಾಮದ ಜಾತ್ರೆಯ ಶೂಟಿಂಗ್ ಸಹ ಇದರಲ್ಲಿದ್ದು, ನಮ್ಮ ಭಾಗದ ಕಲಾವಿದರು ಇದರಲ್ಲಿ ಭಾಗವಹಿಸಿದ್ದು, ಚಿತ್ರವನ್ನು ನೋಡುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.
ಅಲ್ಲದೆ ಈ ಚಿತ್ರ ಶತದಿನೋತ್ಸವ ಆಚರಿಸಲಿ ಎಂದು ಹರಸಿದರು.
ನಿವೃತ್ತ ಉಪನ್ಯಾಸಕ ಭೀಮರಾಯ ಪೂಜಾರಿ ಚಿತ್ರ ಪೋಸ್ಟರ್‍ಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹಣಮಂತಪ್ಪ ಹಳ್ಳದಮನೆ, ಪೋಷಕ ನಟ ಗೌಡಪ್ಪಗೌಡ ಹುಲ್ಕಲ್, ಆನಂದ್ ಗೊಬ್ಬಿ ಸೇರಿದಂತೆ ಕಲಾಭಿಮಾನಿಗಳು ಹಾಜರಿದ್ದರು.
——-