ಪ್ರಮುಖ ಸುದ್ದಿ

ದೀನ ದಲಿತರ ಧಣಿ ಬಾಪುಗೌಡ ದರ್ಶನಾಪುರ – ಶ್ಯಾಮರಾವ್ ಪ್ಯಾಟಿ

 ಬಾಪುಗೌಡರು ಮೌಲ್ಯಯುತ ರಾಜಕಾರಣಿ

yadgiri, ಶಹಾಪುರ: ದಿ.ಬಾಪುಗೌಡ ದರ್ಶನಾಪುರ ಅವರು ನಾಡಿನ ಹೆಸರಾಂತ ಮೌಲ್ಯಯುತ ರಾಜಕಾರಣಿಗಳಲ್ಲಿ ಒಬ್ಬರು. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ರಾಜಕಾರಣಿಯಾಗಿದ್ದರು. ಅದರಷ್ಟೆ ಈ ಭಾಗದ ಅಭಿವೃದ್ಧಿಗೆ ಹಗಲಿರಳು ಶ್ರಮಿಸಿದ್ದಾರೆ. ಅವರ ಶ್ರಮವೇ ಇಂದು ಈ ಭಾಗದ ಅಪಾರ ಅಭಿವೃದ್ಧಿಗೆ ಫಲಕಾರಿಯಾಗಿದೆ ಎಂದು ಕಲ್ಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅದ್ಯಕ್ಷ ಶ್ಯಾಮರಾವ್ ಪ್ಯಾಟಿ ತಿಳಿಸಿದರು.

ದಿ.ಬಾಪುಗೌಡ ದರ್ಶನಾಪುರ ಅವರ 33ನೇ ಪುಣ್ಯಸ್ಮರಣೆ ಅಂಗವಾಗಿ ಇಲ್ಲಿನ ಚರಬಸವೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಗರನಾಡಿನ ರೈತಾಪಿ ವರ್ಗದ ಭೂಮಿಗಳಿಗೆ ನೀರುಣಿಸುವ ಮಹತ್ವದ ಕಾರ್ಯಕ್ಕೆ ಬಾಪುಗೌಡರು ಪಟ್ಟ ಶ್ರಮಕ್ಕೆ, ಇಂದು ಈ ಭಾಗದ ಭೂಮಿಗಳು ಹಸಿರಿನಿಂದ ಕಂಗೊಳಿಸುವುದಕ್ಕೆ ಸಾಕ್ಷಿಯಾಗಿದೆ. ಅವರು ದೀನ ದಲಿತರ ಹಿಂದುಳಿದವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು ಎಂದರು.

ಹಿರಿಯರಾದ ಶಂಕ್ರಣ್ಣ ವಣಿಕ್ಯಾಳ ಮಾತನಾಡಿ, ದಿ.ಬಾಪುಗೌಡರು ದೂರ ದೃಷ್ಟಿ ಹೊಂದಿದ್ದ ನಾಯಕ, ಸದಾ ಜನಪರ ಅಭಿವೃದ್ಧಿ ಚಿಂತಕ. ಶಹಾಪುರ ಕ್ಷೇತ್ರದ ಅಬಿವೃದ್ಧಿಗೆ ಸಾಕಷ್ಟು ಶ್ರಮವಹಿಸಿದ್ದರು. ಅಲ್ಲದೆ ಶಿಕ್ಷಣದಿಂದಲೇ ಬದಲಾವಣೆ ಸಾಧ್ಯ ಎಂಬುದನ್ನು ಅರಿತಿದ್ದ ಅವರು ನಗರದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಮೂಲಕ ಅನುಕೂಲ ಕಲ್ಪಿಸಿದರು.
ಮುಂಚಿತವಾಗಿ ಭೀಮರಾಯನ ಗುಡಿ ವೃತ್ತದಲ್ಲಿರುವ ದಿವಂಗತ ಬಾಪುಗೌಡ ಪುತ್ಥಳಿಗೆ ಕಲ್ಬುರ್ಗಿ ಸಂಸದ ಉಮೇಶ ಜಾಧವ ಸೇರಿದಂತೆ ಗಣ್ಯರು ಮಾಲಾರ್ಪಣೆ ಮಾಡಿದರು. ಇದೇ ಸಂದರ್ಭದಲ್ಲಿ ದರ್ಶನಾಪುರ ಅಭಿಮಾನಿಗಳು, ಹಿತೈಷಿಗಳು ಕಾರ್ಯಕರ್ತರು ಗೌರವ ಸಮರ್ಪಣೆ ಸಲ್ಲಿಸಿದರು.
ಈ ವೇಳೆ ಶ್ರೀ ಶರಣಬಸವೇಶ್ವರÀ ಮಠದ ಶರಣಪ್ಪ ಶರಣರು, ಭೀಮರಡ್ಡಿ ಭೈರಡ್ಡಿ, ಶ್ರೀನಿವಾಸರಾವ ಕುಲ್ಕರ್ಣಿ, ಸೋಮಶೇಖರ ಗೋನಾಯಕ, ಸೋಮಶೇಖರ ಮಣ್ಣೂರ ವೇದಿಕೆ ಮೇಲೆ ಇದ್ದರು. ಶಾಸಕ ಶರಣಬಸ್ಸಪ್ಪಗೌಡ ದರ್ಶನಾಪುರ, ಚಂದ್ರಶೇಖರ ಆರಬೋಳ ಸಾಹು, ಸಿದ್ದನಗೌಡ ಪಾಟೀಲ ಕೆಂಭಾವಿ, ಬಸವರಾಜಪ್ಪಗೌಡ ವಡಿಗೇರಾ, ಸಿದ್ದಲಿಂಗಣ್ಣ ಆನೇಗುಂದಿ, ಶಾಂತರೆಡ್ಡಿ ದೇಸಾಯಿ, ಸುರೇಶ ಸಜ್ಜನ, ಶರಣಪ್ಪ ಸಲಾದಪೂರ ಭಾಗವಹಿಸಿದ್ದರು.
ಮುಖಂಡರಾದ ಘೇವರಚಂದ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಲಿಂಗಣ್ಣಗೌಡ ಕಾರ್ಯಕ್ರಮ ನಿರೂಪಿಸಿದರು. ದಿ.ಬಾಪುಗೌಡರ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

Related Articles

Leave a Reply

Your email address will not be published. Required fields are marked *

Back to top button