ಪ್ರಮುಖ ಸುದ್ದಿ
ಜಿಟಿಡಿ ಪಕ್ಷ ಬಿಟ್ಟರೂ ಅಸಮಾಧಾನ ವಿಲ್ಲ – ಕುಮಾರಸ್ವಾಮಿ
ಬೆಂಗಳೂರಃ ಜಿಟಿಡಿ ನಮ್ಮ ಪಕ್ಷ ಮತ್ತು ನಾಯಕರ ಜೊತೆ ಅಂತರ ಕಾಯ್ದುಕೊಂಡು ಬರುತ್ತಿದ್ದಾರೆ. ಅವರು ನಮ್ಮ ಪಕ್ಷ ತೊರೆದರೂ ಯಾವುದೇ ಅಸಮಾಧಾವಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಟಿಡಿ ಜೆಡಿಎಸ್ ತೊರೆದರೆ ನಮ್ಮ ಪಕ್ಷದ ಯಾವ ಶಾಸಕರಿಗೂ ಅಸಮಾಧಾನವಿಲ್ಲ 34 ಜೆಡಿಎಸ್ ಶಾಸಕರಲ್ಲಿ ಜಿಟಿಡಿ ಅವರನ್ನು ಬಿಟ್ಟು ಉಳಿದೆಲ್ಲ ಶಾಸಕರು ಒಗ್ಗಟ್ಟಾಗಿ ಇದ್ದೇವೆ ಎಂದು ಅವರು ಸ್ಪಷ್ಟ ಪಡಿಸಿದರು.