ದಿಗ್ಗಿ ಸಂಗಮೇಶ್ವರರ ಸಂಭ್ರಮದ ರಥೋತ್ಸವ
yadgiri,ಶಹಾಪುರಃ ಸಗರನಾಡಿನ ಆರಾಧ್ಯದೇವ ತಾಲೂಕಿನ ಸುಕ್ಷೇತ್ರ ದಿಗ್ಗಿ ಸಂಗಮೇಶ್ವರರ ಮಹಾ ರಥೋತ್ಸವ ಮಂಗಳವಾರ ಸಂಜೆ 6-45 ಕ್ಕೆ ಜರುಗಿತು.
ರಥೋತ್ಸವದಲ್ಲಿ ತಾಲೂಕು ಸೇರಿದಂತೆ ಮಹಾರಾಷ್ಟ್ರ, ಸಿಂದಗಿ, ವಿಜಯಪುರ, ಕಲ್ಬುರ್ಗಿ ಸೇರಿದಂತೆ ಹಲವಡೆಯಿಂದ ಭಕ್ತಾಧಿಗಳು ಆಗಮಿಸಿದ್ದರು. ರಥೋತ್ಸವ ವೇಳೆ ಉತ್ತುತ್ತಿ, ಬಾಳೆಹಣ್ಣು ಎಸೆದು ಕೃತಾರ್ಥರಾದರು.
ಶ್ರಾವಣ ಮಾಸ ಪೂರ್ತಿ ಭಕ್ತಾಧಿಗಳು ಶ್ರೀದೇವರಿಗೆ ಪಾದಯಾತ್ರೆ ಸಾಗಿ ನಿತ್ಯ ದರ್ಶನ ಪಡೆದು ಪುನೀತರಾದರು. ಶ್ರಾವಣ ಮಾಸದ ಕೊನೆಯ ಸೋಮವಾರದ ಮರುದಿನವೇ ಪ್ರತಿ ವರ್ಷ ರಥೋತ್ಸವ ಜರುಗುತ್ತದೆ.
ಜಾತ್ರಾ ಮಹೋತ್ಸವ ಹಿನ್ನಲೆ ಮಂಗಳವಾರ ಬೆಳಗ್ಗೆಯಿಂದಲೇ ಕತೃ ಗದ್ದುಗೆಗೆ ಅಭಿಷೇ, ಪುಷ್ಪಲಂಕಾರ, ಪೂಜೆ ಜರುಗಿತು. ಭಕ್ತಾಧಿಗಳು ಬೆಳಗ್ಗೆಯಿಂದಲೇ ಕಾಯಿ, ಕರ್ಪೂರ, ನೈವೇದ್ಯ ಸಮರ್ಪಿಸಿ ಧನ್ಯಭಾವ ಮೆರೆದರು. ಸಗರನಾಡಿನ ಜನತೆ ಶ್ರೀದೇವರ ಜಾತ್ರೆಯಲ್ಲಿ ಭಾಗವಹಿಸಿ ಸಂಭ್ರಮದ ರಥೋತ್ಸವವನ್ನು ಕಣ್ತುಂಬಿಕೊಂಡರು. ಅರ್ಚಕ ದೇವಯ್ಯ ಸ್ವಾಮಿ ಸೇರಿದಂತೆ ಭಕ್ತ ಸಮೂಹ ಸಮರ್ಪಕ ವ್ಯವಸ್ಥೆ ಮಾಡಿತ್ತು.