Homeಪ್ರಮುಖ ಸುದ್ದಿವಿನಯ ವಿಶೇಷ
ರಾಜ್ಯದ ದೇವಾಲಯಗಳಲ್ಲಿ “ಡಿಜಿಟಲ್ ಕಿಯೋಸ್ಕ್’ ಗಳ ಅಳವಡಿಕೆ
ಭಕ್ತಾದಿಗಳು ದೇವರ ಸೇವೆ, ಪ್ರಸಾದ ಮುಂತಾದ ಧಾರ್ಮಿಕ ಆಚರಣೆಗಳ ರಸೀದಿ ಪಡೆಯುವ ಸಲುವಾಗಿ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸುವ ಉದ್ದೇಶದಿಂದ ಮುಜರಾಯಿ ಇಲಾಖೆಗೊಳಪಟ್ಟ ದೇವಾಲಯಗಳಲ್ಲಿ ಡಿಜಿಟಲ್ ಕಿಯೋಸ್ಕ್”ಗಳ ಅಳವಡಿಕೆಗೆ ಸರ್ಕಾರ ಚಿಂತನೆ ನಡೆಸಿದೆ.
ಈ ಸೇವೆಯಡಿ ಯಾತ್ರಾರ್ಥಿಗಳು ತಮಗೆ ಬೇಕಾದ ಸೇವಾಚೀಟಿ, ಪ್ರಸಾದ ಮುಂತಾದವುಗಳನ್ನು ತಾವೇ ನಮೂದಿಸಿ, ಯುಪಿಐ ಸೌಲಭ್ಯ ದಡಿ ಹಣ ಸಂದಾಯ ಮಾಡಿ ಕ್ಷಣಮಾತ್ರದಲ್ಲಿ ರಸೀದಿ ಪಡೆಯಬಹುದು. ಪ್ರಾಯೋಗಿಕವಾಗಿ ಇದನ್ನು ಬನಶಂಕರಿ ದೇವಾಲಯದಲ್ಲಿ ಅಳವಡಿಸಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.