ಪ್ರಮುಖ ಸುದ್ದಿ
ಖ್ಯಾತ ನಿರೂಪಕಿ ಅನುಶ್ರೀಗೆ ಸಿಸಿಬಿ ನೋಟೀಸ್.! ಅಮಲು ಕೇಸೊಳು ಅನು ನಿರೂಪಕಿ
ಖ್ಯಾತ ನಿರೂಪಕಿ ಅನುಶ್ರೀಗೆ ಸಿಸಿಬಿ ನೋಟೀಸ್.! ಅಮಲು ಕೇಸೊಳು ಅನು ನಿರೂಪಕಿ
ಬೆಂಗಳೂರಃ ಚಂದನವನ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರ ಸಿಸಿಬಿ ಪೊಲೀಸರು ಕರ್ನಾಟಕದ ಖ್ಯಾತ ನಿರೂಪಕಿ, ನಟಿ ಅನುಶ್ರೀ ಅವರಿಗೆ ನೋಟೀಸ್ ನೀಡಿದ್ದಾರೆ.
ನೋಟಿಸ್ ಕುರಿತು ಮಾಧ್ಯಮಕ್ಕೆ ಹೇಳಿಕೆ ನೀಡಿದ ಅನುಶ್ರೀ, ಮಂಗಳವಾರವರೆಗೆ ನನಗೆ ಅವಕಾಶ ನೀಡಿದ್ದಾರೆ. ಆದರೆ ನಾನು ನಾಳೆಯೇ ಮಂಗಳೂರಿಗೆ ಹೊರಡಲಿದ್ದೇನೆ.
ಸಿಸಿಬಿ ಅಧಿಕಾರಿಗಳ ಭೇಟಿ ಮಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಿ, ವಿಚಾರಣೆ ಮುಗಿದ ನಂತರ ನಾನು ಮಾಧ್ಯಮಕ್ಕೆ ಹೇಳಿಕೆ ನೀಡುವೆ ಅಲ್ಲಿವರೆಗೆ ನಾನು ಏನು ಹೇಳುವದಿಲ್ಲ ಎಂಬ ಸಂದೇಶವನ್ನು ಅನುಶ್ರೀ ನೀಡುತ್ತಿದ್ದಾರೆ.