ಬಾಳೆಹಣ್ಣಿನ ಸಂದೇಶ ಅದ್ಭುತ ಸಂದೇಶ ಓದಿ
ಬಾಳೆಹಣ್ಣಿನ ಸಂದೇಶ
ವಿದೇಶಿ ಮಹಿಳೆಯೊಬ್ಬಳು ಶಾಂತಿ, ಸಮಾಧಾನವನ್ನು ಹುಡುಕುತ್ತಲೇ ನೇಪಾಳಕ್ಕೆ ಹೋದಳು. ಒಬ್ಬ ಸನ್ಯಾಸಿಯ ಭೇಟಿಯಾಯಿತು.
ಬಾಳೆ ಹಣ್ಣಿನ ರಾಶಿಯನ್ನು ಆತ ಚೀಲದೊಳಗೆ ಇರಿಸಿಕೊಂಡಿದ್ದ, ಬದುಕಿನ ಪಾಠವನ್ನು ಹೇಳುತ್ತಲೇ ಆತ ಚೀಲದಿಂದ ಕೊಳೆತುಹೋದ ಹಣ್ಣನ್ನು ದೂರಕ್ಕೆಸೆದು ”ಇದು ಕಳೆದು ಹೋದ ಬದುಕು. ಇದರಿಂದ ಏನೇನೂ ಪ್ರಯೋಜನವಿಲ್ಲ” ಎಂದನು.
ಮತ್ತೆ ಚೀಲದೊಳಗೆ ಕೈಹಾಕಿ ಹಸಿರಾದ, ಇನ್ನೂ ಮಾಗದ ಎಳೆಯ ಬಾಳೆ ಕಾಯಿಯನ್ನು ತೆಗೆದು ತೋರಿಸುತ್ತ ಚೀಲದೊಳಗೇನೇ ಹಾಕಿ ”ಇದು, ಮುಂದೆ ನಾನು ಬದುಕಬೇಕಾದ ಬದುಕು. ಈಗಲೇ ಇದರ ಬಗ್ಗೆ ಯೋಚಿಸಿ ತಲೆಕೆಡಿಸಿಕೊಳ್ಳುವುದು ನಿಜಕ್ಕೂ ವ್ಯರ್ಥವೆ” ಎಂದು ಮುಗುಳ್ನಕ್ಕ.
ಮತ್ತೊಮ್ಮೆ ಚೀಲದಿಂದ ಕೊಳೆತ, ಬಂಗಾರದ ಬಣ್ಣದ ಮಾಗಿದ ಬಾಳೆಹಣ್ಣನ್ನು ತೆಗೆದು ಆಕೆಗೆ ಅರ್ಧಕೊಟ್ಟು, ತಾನು ಅರ್ಧ ತಿಂದು ಹೇಳಿದ: ‘ಈ ಹಣ್ಣು ವರ್ತಮಾನ ಕಾಲವನ್ನು ಪ್ರತಿನಿಧಿಸುತ್ತದೆ. ಇದು ದುಡಿಯಲು, ತಿನ್ನಲು ಪಕ್ವವಾದ ಕಾಲ, ನಿರ್ಭಯವಾಗಿ, ನಿಶ್ಚಿಂತೆಯಿಂದಲೇ ತಿನ್ನಬಹುದು’.
ಆ ಮಹಿಳೆಗೆ ಈಗ ಜ್ಞಾನೋದಯವಾಯಿತು.
ನೀತಿ :– ಜೀವನದಲ್ಲಿ ನಲಿವು ಅಕ್ಷಯವಾಗಲು ಹಾಗೂ ಬದುಕು ಭವ್ಯವಾಗಲು ಇದೊಂದು ಸಂದೇಶ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.