ರಾಮದಾಸರಿಗೆ ನಾಯಿಯೇ ಗುರುವಂತೆ ಅದ್ಹೇಗೆ.? ಅದ್ಭುತ ಕಥೆ ಓದಿ
ನಿಜವಾದ ಮಾರ್ಗದರ್ಶಿ
ರಾಮದಾಸರನ್ನು ಯಾರೋ ಕೇಳಿದರು ‘ನಿಮಗೆ ಮಾರ್ಗದರ್ಶಿ ಯಾರು? ಯಾರಿಂದ ನೀವು ಏಳ್ಗೆಯ ದಾರಿ ಕಲಿತಿರಿ? ನಿಮಗೆ ಯಥಾರ್ಥ ಗುರು ಯಾರು? ಎಂದಾಗ ಆಗ ಅವರು ‘ನನಗೆ ಒಂದು ನಾಯಿಯೇ ಗುರು ಎಂದರು.
ಅದು ಹೇಗೆ ? ಎಂದು ಮತ್ತೆ ಕೇಳಿದಾಗ ರಾಮದಾಸರು ಒಂದು ದಿನ ಬಾಯಾರಿಕೆಯಿಂದ ಅದು ನಾಲಿಗೆ ಹೊರಗೆ ಚಾಚಿಕೊಂಡು ಒದ್ದಾಡುತ್ತಿತ್ತು. ಕೊಳವೊಂದರ ದಡದಲ್ಲಿದ್ದರೂ ನೀರು ಕುಡಿಯಲು ಹೆದರುತ್ತಿತ್ತು. ನೀರಿಗೆ ಬಾಯಿ ಹಾಕಬೇಕು ಎಂದಾಗ ಅದರ ಪ್ರತಿಬಿಂಬವನ್ನೇ ಕಂಡು ಹೆದರಿ ಹಿಮ್ಮೆಟ್ಟುತ್ತಿತ್ತು.
ಈ ನಾಟಕ ತುಂಬ ಹೊತ್ತು ನಡೆಯಿತು. ಆದರೆ ನಾಯಿಯ ದಾಹ ಹೆಚ್ಚುತ್ತಿದ್ದಂತೆ ಅದು ದೃಢಸಂಕಲ್ಪ ತೊಟ್ಟು ನೀರಿಗೆ ಇಳಿಯಿತು. ಒಮ್ಮೆ ನೀರಿಗೆ ಇಳಿದದ್ದೇ ಸರಿ, ಅಲ್ಲಿದ್ದ ನಾಯಿ ಮಾಯವೇ ಆಯಿತು ಎಂದು ಹೇಳಿದರು.
ಹಾಗೆಯೇ ‘ನಾವೂ ಅಷ್ಟೇನೇ. ನಮ್ಮ ಏಳ್ಗೆಗೆ ಹಲವು ವೇಳೆ ನಾವೇ ಅಡ್ಡಿಯಾಗಿರುತ್ತೇವೆ. ನಮ್ಮನ್ನು ಎದುರಿಸಲೂ ನಮಗೆ ಅಂಜಿಕೆಯಾಗುತ್ತದೆ. ಒಂದೊಮ್ಮೆ ಧೈರ್ಯಮಾಡಿ ಮುಂದವರಿದದ್ದೇ ಆದರೆ ದಾರಿ ಸುಗಮವಾಗುತ್ತದೆ. ಆದರೆ ಈ ಸರಳ ಸತ್ಯದ ಅರಿವಾದುದ್ದೇ ಒಂದು ನಾಯಿಯಿಂದ ಎಂದರು.
ನೀತಿ :– ಪ್ರತಿಯೊಬ್ಬ ವ್ಯಕ್ತಿಯಲ್ಲಿ ಆತ್ಮಸ್ಥೈರ್ಯ ಶಕ್ತಿ ಇದ್ದೇ ಇರುತ್ತದೆ. ಆದರೆ ಅದು ಜಾಗೃತಗೊಳಿಸಲು ಒಂದು ಪ್ರೇರಣಾಶಕ್ತಿ, ಪ್ರೋತ್ಸಾಹ ಬೇಕಾಗುತ್ತದೆ ಅದು ಇಲ್ಲಿ ನಾಯಿಯ ನೋಡಿ ಕಲಿಯುವುದು ಎಂಬುದು ರಾಮದಾಸರು ತಿಳಿಸಿ ಕೊಟ್ಟರು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.