ಕಥೆ
ಪರಸ್ಪರ ಸಹಾಯ ಸಹಕಾರದ ಶಕ್ತಿ ಅದ್ಭುತ ಕಥೆ ಓದಿ
ಸಹಕಾರ
ಗುರು ತನ್ನ ಶಿಷ್ಯರಿಗೆ ಚೀಟಿಯೋಂದರಲ್ಲಿ ಅವರವರ ಹೆಸರನ್ನು ಬರೆದುಕೊಡಲು ಹೇಳುತ್ತಾರೆ. ಎಲ್ಲ ಶಿಷ್ಯರು ತಮ್ಮ ಹೆಸರು ಬರೆದ ಚೀಟಿಯನ್ನು ಗುರುವಿನ ಕೈಗೆ ಒಪ್ಪಿಸುತ್ತಾರೆ. ಎಲ್ಲ ಚೀಟಿಗಳನ್ನು ಒಟ್ಟು ಸೇರಿಸಿ ಮಿಶ್ರಣ ಮಾಡಿ ಕೊಠಡಿಯಲ್ಲಿ ಹರವುತ್ತಾರೆ.
ಐದು ನಿಮಿಷ ಕಾಲಾವಕಾಶ ಕೊಟ್ಟು ತಮ್ಮ ತಮ್ಮ ಹೆಸರಿನ ಚೀಟಿಯನ್ನು ಸಂಗ್ರಹಸಬೇಕೆಂದು ಶಿಷ್ಯರಿಗೆ ಹೇಳುತ್ತಾರೆ. ಯಾರಿಗೂ ಅವರವರ ಹೆಸರಿನ ಚೀಟಿ ಸಿಗುವುದೇ ಇಲ್ಲ.
ಗುರುಗಳು ಮತ್ತೊಮ್ಮೆ ಅವಕಾಶ ಕೊಡುತ್ತಾ ನಿಮಗೆ ಸಿಕ್ಕ ಚೀಟಿಯನ್ನು ಯಾರ ಹೆಸರು ಬರೆದಿದೆಯೋ ಅವರಿಗೆ ಕೊಡಬಹುದು. ಐದು ನಿಮಿಷ ಕಾಲಾವಕಾಶ ಎನ್ನುತ್ತಾರೆ.
ಒಂದೇ ನಿಮಿಷದಲ್ಲಿ ಪ್ರತಿ ಶಿಷ್ಯನ ಕೈಯಲ್ಲೂ ಅವರ ಹೆಸರಿರುವ ಚೀಟಿ ಇರುತ್ತದೆ. ಒಬ್ಬರಿಗೊಬ್ಬರು ಸಹಾಯ ಮಾಡುವುದನ್ನು ಕಲಿತರೆ, ಸಾಧ್ಯವಾಗದ ಕೆಲಸವನ್ನು ಕನಿಷ್ಠ ಅವಧಿಯಲ್ಲಿ ಮಾಡಿಮುಗಿಸಬಹುದು ಎಂದು ತಿಳಿ ಹೇಳುತ್ತಾನೆ.
ನೀತಿ :– ಒಬ್ಬರಿಗೊಬ್ಬರು ಸಹಾಯ ಮಾಡುವುದರಿಂದ ಆಗುವ ಉಪಯೋಗಕ್ಕೆ ಇದೊಂದು ಉದಾಹರಣೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.