ದಿನಕ್ಕೊಂದು ಕಥೆ
ರಾಮನ ಜಾಣತನ
ರಾಮ ಶಾಮ ಎಂಬ ಇಬ್ಬರು ಸ್ನೇಹಿತರಿದ್ದರು. ಅವರಿಬ್ಬರೂ ಒಂದು ದಿನ ಸಂತೆಗೆ ಹೋಗಿದ್ದರು. ಸಂತೆಯಲ್ಲಿ ಒಬ್ಬ ಕಳ್ಳ ಅಜ್ಜಿಯೊಬ್ಬಳ ದುಡ್ಡು ಕದಿಯಲು ಹೊಂಚು ಹಾಕುತ್ತಿದ್ದ. ಇದು ರಾಮನ ಕಣ್ಣಿಗೆ ಬಿತ್ತು, ಅವನ್ನಾತ ಅಜ್ಜಿಯ ಬಳಿ ಹೇಳಲು ಹೋದ. ಅದನ್ನು ನೋಡಿದ ಕಳ್ಳ ರಾಮನ ಕಿವಿಯ ಬಳಿ ಬಂದು ಹೇಳಿದ. ನಿನಗೆ ಅರ್ಧ ಹಣ ಕೊಡುತ್ತೇನೆ, ಹೇಳಬೇಡ ಈ ಮಾತನ್ನು ಕೇಳಿಸಿಕೊಂಡ ಶಾಮನೂ ಕಳ್ಳನ ಮಾತಿಗೆ ದನಿಗೂಡಿಸಿದ.
ಆದರೆ ಪ್ರಾಮಾಣಿಕ ರಾಮನಿಗೆ ಇದು ಸರಿಕಾಣಲಿಲ್ಲ. ರಾಮ ಒಂದು ಉಪಾಯ ಮಾಡಿದ. ಅಲ್ಲಿ ಬಿದ್ದ ಹರುಳನ್ನು ತೆಗೆದುಕೊಂಡು ಅಜ್ಜಿಯ ಕಡೆಗೆ ಎಸೆದ. ಅದನ್ನು ನೋಡಿದ ಅಜ್ಜಿ ರಾಮನನ್ನು ಬೈಯಬೇಕು ಎನ್ನುವಷ್ಟರದಲ್ಲಿ ಕಳ್ಳತನ ಮಾಡುತ್ತಿದ್ದವನು ಸಿಕ್ಕಿ ಬಿದ್ದ. ಅಜ್ಜಿ ಅಲ್ಲೇ ಬಿದ್ದ ಕಟ್ಟಿಗೆ ತೆಗೆದುಕೊಂಡು ಕಳ್ಳನಿಗೆ ಹಿಗ್ಗಾಮುಗ್ಗ ಹೊಡೆದಳು.
ಸಂತೆಯಲ್ಲಿದ್ದ ಜನ ಓಡಿ ಬಂದು ಕಳ್ಳನಿಗೆ ಇನ್ನಷ್ಟು ಹೊಡೆದು ಕಳುಹಿಸಿದರು. ಆಗ ಅಜ್ಜಿ ಮಕ್ಕಳು, ನಿಮ್ಮ ಹೆಸರು ಏನಪಾ ? ಎಂದು ಇಬ್ಬರಿಗೂ ಹಣ್ಣು-ಹಂಪಲುಗಳನ್ನು ಕೊಟ್ಟಳು. ರಾಮ ಬೇಡ ಎಂದಾಗ ಅಜ್ಜಿ ಮಕ್ಕಳೇ, ನೀವು ಕಳ್ಳನನ್ನು ಹಿಡಿದು ಕೊಡದಿದ್ದರೆ ನನ್ನ ಎಲ್ಲ ದುಡ್ಡು ಕಳೆದುಕೊಳ್ಳುತ್ತಿದ್ದೆ. ಮನೆಯಲ್ಲಿ ಮೊಮ್ಮಕ್ಕಳು ಉಪವಾಸ ಮಲಗಬೇಕಿತ್ತು. ತಗೋಳ್ಳಿ, ಮಕ್ಕಳೇ ಹಣ್ಣು ಎಂದು ಇಬ್ಬರಿಗೂ ಹಣ್ಣು ಕೊಟ್ಟಳು.
ಶಾಮನಿಗೆ ತನ್ನ ತಪ್ಪಿನ ಅರಿವಾಗಿ ನಾಚಿಕೆಯಿಂದ ತಲೆ ತಗ್ಗಿಸುವಂತಾಯಿತು. ಅಂದಿನಿಂದ ರಾಮ-ಶಾಮ ಇಬ್ಬರೂ ಪರೋಪಕಾರಿಗಳಾಗಿ ಬದುಕಿದರು.
ನೀತಿ – ಕೆಟ್ಟವರಾಗಲು ಒಂದು ನಿಮಿಷ ಸಾಕು. ಒಳ್ಳೆಯವರಾಗಲು ಹಲವು ವರ್ಷಗಳು ಬೇಕು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.