
ದೋರನಹಳ್ಳಿ ದುರಂತಃ ಸಾವಿನ ಸಂಖ್ಯೆ 11 ಕ್ಕೆ ಏರಿಕೆ
ಸಿಲಿಂಡರ್ ಸ್ಪೋಟಃ ಇಂದು 11 ನೇ ಸಾವು
ಶಹಾಪುರಃ ತಾಲೂಕಿನ ದೋರನಹಳ್ಳಿ ಗ್ರಾಮದ ಯುಕೆಪಿ ಕ್ಯಾಂಪಿನಲ್ಲಿ ಫೆ.25 ರಂದು ಸೀಮಂತ ಕಾರ್ಯಕ್ರಮವೊಂದರಲ್ಲಿ ನಡೆದ ಸಿಲಿಂಡರ್ ಸ್ಪೋಟ ದುರಂತದಲ್ಲಿ 24-25 ಜನ ಗಾಯಗೊಂಡಿದ್ದರು, ಅದರಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಷ್ಟ್ರದ ಸೋಲಾಪುರ ಗಂಗಾಮಯಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಗಣ್ಣಗೌಡ ಗುರುಲಿಂಗಪ್ಪಗೌಡ ಲಕಶೆಟ್ಟಿ (55) ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಹೀಗಾಗಿ ಒಟ್ಟು ಮೃತರ ಸಂಖ್ಯೆ 11 ಕ್ಕೆ ಏರಿಕೆಯಾಗಿದೆ.
ಸಿಲಿಂಡರ್ ದುರಂತ ಜಿಲ್ಲೆಯಲ್ಲಿಯೇ ಅತಿದೊಡ್ಡ ದುರ್ಘಟನೆ ಇದಾಗಿದೆ. ಇಡಿ ಗ್ರಾಮದ ತುಂಬಾ ಸೂತಕದ ಛಾಯೆ ಆವರಿಸಿದೆ. ಶಿವರಾತ್ರಿ ಹಬ್ಬ ಕರಾಳ ಆಚರಣೆಯಾಗಿ ಕಾಡುತ್ತಿದೆ. ನಿತ್ಯ ನರಕಯಾತನೆ ಅನುಭವಿಸುತ್ತಿರುವ ಗ್ರಾಮಸ್ಥರು ನಿತ್ಯ ಸಾವಿನ ಸುದ್ದಿ ಬರುತ್ತಲಿರುತ್ತದೆ.
ಇವತ್ಯಾರದೋ ಎಂಬ ಚಿಂತೆಯಲ್ಲಿ ಸಂಸ್ಕಾರ ತಯಾರಿ ನಡೆಸುವ ಸ್ಥಿತಿ ಬಂದಿರುವದು ನಮ್ಮೆಲ್ಲರ ದೌರ್ಭಾಗ್ಯವೆಂದು ಗ್ರಾಮದ ಯುವ ಮುಖಂಡ ತಮ್ಮಣ್ಣಗೌಡ ಜೋಳದ ದುಃಖವನ್ನು ತೋಡಿಕೊಂಡಿದ್ದಾರೆ.