ಬೆಳ್ಳುಳ್ಳಿ ತಿಂದ್ರೆ ಮಾತ್ರ ಕ್ಯಾನ್ಸರ್ ಬರೋದು ಪಕ್ಕಾ!
(Garlic) ಬೆಳ್ಳುಳ್ಳಿಯನ್ನು ಮಾಂತ್ರಿಕ ಮಸಾಲೆ ಅಂತಲೇ ಕರೆಯುತ್ತಾರೆ. ಆಹಾರದ ಪರಿಮಳ ಹೆಚ್ಚಿಸುತ್ತದೆ. ಅಲ್ಲದೇ ಆಹಾರದಲ್ಲಿ ಇದನ್ನು ಬಳಸುವುದರಿಂದ ಆರೋಗ್ಯಕ್ಕೂ ಒಳ್ಳೆಯದು ಅಂತಾರೆ ವೈದ್ಯರು. ಆದರೆ ಈ ಬೆಳ್ಳುಳ್ಳಿ ತಿಂದ್ರೆ ಮಾತ್ರ ಕ್ಯಾನ್ಸರ್ ಬರೋದು ಮಾತ್ರ ಪಕ್ಕಾ!. ಆರೋಗ್ಯಕ್ಕೆ ಒಳ್ಳೆಯದು ಅಂದ ಮೇಲೆ ಕ್ಯಾನ್ಸರ್ ಹೇಗೆ ಅಂತಿರಾ? ಈ ಸುದ್ದಿಯನ್ನು ಕೊನೆವರೆಗೂ ಓದಿ ಈ ಕ್ಯಾನ್ಸರ್ ಬರುವ ಬೆಳ್ಳುಳ್ಳಿ ಬಗ್ಗೆ ತಿಳಿಯಿರಿ.
ಚೀನಾವು ವಿಶ್ವದ ಅತಿದೊಡ್ಡ ಬೆಳ್ಳುಳ್ಳಿ ಉತ್ಪಾದಕಯನ್ನು ಹೊಂದಿದೆ. ಜಾಗತಿಕ ಪೂರೈಕೆಯ 80% ಅನ್ನು ಉತ್ಪಾದಿಸುತ್ತದೆ. ಚೀನಾದ ಹೆಚ್ಚಿನ ಬೆಳ್ಳುಳ್ಳಿಯನ್ನು ಬೀಜಿಂಗ್ ನ ಆಗ್ನೇಯ ಭಾಗದಲ್ಲಿರುವ ಪೂರ್ವ ಕರಾವಳಿ ಪ್ರಾಂತ್ಯವಾದ ಶಾಂಡೊಂಗ್ ನಲ್ಲಿ ಉತ್ಪಾದಿಸಲಾಗುತ್ತದೆ. ನಿರ್ದಿಷ್ಟವಾಗಿ, ಜಿಂಕ್ಯಾಂಗ್ ಅನ್ನು ವಿಶ್ವದ ಬೆಳ್ಳುಳ್ಳಿ ರಾಜಧಾನಿ ಎಂದು ಕರೆಯಲಾಗುತ್ತದೆ.
2014ರಿಂದಲೇ ಭಾರತದಲ್ಲಿ ಚೀನಾ ಬೆಳ್ಳುಳ್ಳಿಯನ್ನು ನಿಷೇಧಿಸಲಾಗಿದೆ. ಆದರೂ ಚೀನಾ ಬೆಳ್ಳುಳ್ಳಿ ಕಳ್ಳದಾರಿಯಲ್ಲಿ ಭಾರತೀಯ ಮಾರುಕಟ್ಟೆ ಪ್ರವೇಶಿಸುತ್ತಿದೆ. ಇತ್ತೀಚೆಗೆ ಗುಜರಾತ್ ನ ರಾಜ್ ಕೋಟ್ ನಲ್ಲಿ ಗೊಂಡಲ್ ಕೃಷಿ ಉತ್ಪನ್ನ ಮಾರುಕಟ್ಟೆ ಸಹಕಾರಿ (ಎಪಿಎಂಸಿ) ನಲ್ಲಿ ಚೀನಾದ ಬೆಳ್ಳುಳ್ಳಿಯ ಚೀಲಗಳು ಕಂಡುಬಂದ ನಂತರ ವ್ಯಾಪಾರಿಗಳು ಪ್ರತಿಭಟನೆಯನ್ನು ನಡೆಸಿದರು. ಅಕ್ರಮದ ವಿರುದ್ಧ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ನಿಷೇಧದ ಹೊರತಾಗಿಯೂ ಚೀನಾದ ಬೆಳ್ಳುಳ್ಳಿ ಭಾರತಕ್ಕೆ ಹೇಗೆ ಪ್ರವೇಶಿಸುತ್ತಿದೆ ಎಂದು ಗೊಂಡಲ್ ಎಪಿಎಂಸಿಯ ವರ್ತಕರ ಸಂಘ ಕಿಡಿಕಾರಿದೆ.
ಚೀನಾ ಬೆಳ್ಳುಳ್ಳಿಗೆ ಹೋಲಿಸಿದ್ರೆ ಭಾರತದ ಬೆಳ್ಳುಳ್ಳಿ ಬಳಕೆಗೂ ಯೋಗ್ಯ, ಆರೋಗ್ಯಕ್ಕೂ ಸುರಕ್ಷಿತವಾಗಿದೆ. ಚೀನಾ ಬೆಳ್ಳುಳ್ಳಿ ಆಧುನಿಕ ಕೃಷಿ ತಂತ್ರಜ್ಞಾನ, ಅತಿ ಹೆಚ್ಚು ರಾಸಾಯನಿಕಗಳು, ಕೀಟನಾಶಕಗಳ ಬಳಕೆಯೊಂದಿಗೆ ಬೆಳೆಯುತ್ತಾರೆ. ಚೀನಿ ಬೆಳ್ಳುಳ್ಳಿ ದೀರ್ಘಾವಧಿ ಸೇವನೆಯಿಂದ ಕ್ಯಾನ್ಸರ್ ಗೆ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.