ಪಣಜಿ ಟಿಕೆಟ್ ಹಾಲಿ ಬಿಜೆಪಿ ಶಾಸಕನಿಗೆ ಫಿಕ್ಸ್ .? ಮನೋಹರ ಪರಿಕರ್ ಪುತ್ರನಿಗೆ ನಿರಾಶೆ

ಗೋವಾ ಮಾಜಿ ಸಿಎಂ ದಿ.ಪರಿಕರ್ ಪುತ್ರನಿಗಿಲ್ಲ ಬಿಜೆಪಿ ಟಿಕೆಟ್.? ಚುನಾವಣೆ ಬಿಜೆಪಿಯಲ್ಲಿ ಅಸಮಾಧಾನ
ಗೋವಾಃ ಗೋವಾದಲ್ಲಿ ವಿಧಾನ ಸಭೆ ಚುನಾವಣೆ ಕಾವು ಜೋರಾಗುತ್ತಿದ್ದು, ಮಾಜಿ ಸಿಎಂ ದಿವಂಗತ ಮನೋಹರ ಪರಿಕರ್ ಅವರ ಪುತ್ರ ಉತ್ಪಾಲ್ ಪರಿಕರ್ ಅವರು ರಾಜಧಾನಿ ಪಣಜಿಯಿಂದ ಸ್ಪರ್ಧಿಸಲು ಸಿದ್ಧತೆಯಲ್ಲಿದ್ದರು.
ಆದರೆ ಪ್ರಸ್ತುತ ಬಿಜೆಪಿ ಸಿಎಂ ಪ್ರಮೋದ್ ಸಾವಂತ್ ಅವರು ಪಣಜಿ ಕ್ಷೇತ್ರದಿಂದ ಹಾಲಿ ಶಾಸಕ ಬಾಬೂಶ್ ಮೊನ್ಸೆರಾತ್ ಸ್ಪರ್ಧಿಸುವ ಸುಳಿವು ನೀಡಿದ್ದಾರೆ ಎನ್ನಲಾಗಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸಿಎಂ ಪ್ರಮೋದ್ ಸಾವಂತ್ ಅವರು ಈ ಕುರಿತು ಬಾಬೂಶ್ ಅವರಿಗೆ ಸ್ಪರ್ಧಿಸಲು ಅನುವು ಮಾಡಿರುವ ಕುರಿತು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಹೀಗಾಗಿ ಉತ್ಪಲ್ ಪರಿಕಾರ್ ಅವರು ಪಣಜಿ ಕ್ಷೇತ್ರದಿಂದ ಸ್ಪರ್ಧಿಸುವ ಭರವಸೆ ತೀರ ಕಡಿಮೆ ಇದೆ. ಪೂರ್ವ ತಯ್ಯಾರಿ ನಡೆಸಿದ್ದ ಉತ್ಪಲ್ ಅವರಿಗೆ ಸಿಎಂ ಅವರ ಹೇಳಿಕೆ ಕುರಿತು ನಿರಾಶೆ ಮೂಡಿದೆ ಎನ್ನಲಾಗಿದೆ.
ಹೀಗಾಗಿ ಹಲವರಲ್ಲ ಅಸಮಾಧಾನದ ಹೊಗೆ ಆಡುತ್ತಿದ್ದು, ಚುನಾವಣೆಯಲ್ಲಿ ಯಾವ ಪರಿಣಾಮ ಬೀರಲಿದೆ ಅಥವಾ ಅಸಮಾಧಾನ ಕುರಿತು ಕೇಂದ್ರದ ನಾಯಕರು ಬಗೆಹರಿಸುವರಾ.? ಕಾದು ನೋಡಬೇಕು.