ಗಗನ ಸಖಿಯ ಗುದನಾಳದಲ್ಲಿ960 ಗ್ರಾಂ ತೂಕದ ಅಕ್ರಮ ಚಿನ್ನ ಪತ್ತೆ…!!
ನವದೆಹಲಿ: ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯಾದ ಬಳಿಕ ವಿದೇಶದಿಂದ ಕಳ್ಳಸಾಗಣೆ ಮೂಲಕ ದೇಶಕ್ಕೆ ಚಿನ್ನ ತರುತ್ತಿರುವ ಪ್ರಕರಣಗಳು ಹೆಚ್ಚತೊಡಗಿದೆ. ಈ ಹಿಂದೆ ಪ್ರಯಾಣಿಕರು ವಿದೇಶದಿಂದ ಅಕ್ರಮವಾಗಿ ಚಿನ್ನ ತರುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿತ್ತು ಆದರೆ ಇದೀಗ ವಿಮಾನದ ಮಹಿಳಾ ಸಿಬಂದಿಯೇ ಈ ಕೃತ್ಯದಲ್ಲಿ ಭಾಗಿಯಾಗಿರುವುದು ತಲೆತಗ್ಗಿಸುವ ವಿಚಾರವಾಗಿದೆ.
ಅದರಂತೆ ಮಸ್ಕತ್ ನಿಂದ ಕೇರಳ ರಾಜ್ಯದ ಕಣ್ಣೂರಿಗೆ ತೆರಳುತ್ತಿದ್ದ ವಿಮಾನದಲ್ಲಿ ಕೆಲಸ ಮಾಡುತ್ತಿದ್ದ ಗಗನಸಖಿಯೊಬ್ಬರು ಚಿನ್ನ ಕಳ್ಳಸಾಗಣೆ ಮಾಡುತ್ತಿರುವ ಬಗ್ಗೆ ಕೊಚ್ಚಿ ಫ್ಲೈಟ್ ಇಂಟೆಲಿಜೆನ್ಸ್ ವಿಭಾಗದ ಅಧಿಕಾರಿಗಳಿಗೆ ಮಾಹಿತಿ ಲಭಿಸಿದೆ.
ಈ ಕುರಿತು ಅಲರ್ಟ್ ಆಗಿದ್ದ ಕಸ್ಟಮ್ಸ್ ಅಧಿಕಾರಿಗಳು ಗಗನಸಖಿಯನ್ನು ತಪಾಸಣೆ ನಡೆಸಿದ್ದಾರೆ ಅದರಂತೆ ಆಕೆಯ ಗುದನಾಳದಲ್ಲಿ ಸುಮಾರು 960 ಗ್ರಾಂ ತೂಕದ ಚಿನ್ನ ಪತ್ತೆಯಾಗಿದೆ. ಕೂಡಲೇ ಅಧಿಕಾರಿಗಳು ಗಗನಸಖಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಬಂಧಿತ ಗಗನಸಖಿಯನ್ನು ಸುರಭಿ ಖಾತುನ್ ಎಂದು ಗುರುತಿಸಲಾಗಿದ್ದು, ಆಕೆಯ ಗುದನಾಳದಲ್ಲಿ ಸುಮಾರು 960 ಗ್ರಾಂ ಚಿನ್ನವನ್ನು ಬಚ್ಚಿಟ್ಟುಕೊಂಡಿರುವುದು ಪತ್ತೆಯಾಗಿದೆ. ಸುರಭಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಕೆಲಸ ಮಾಡುತ್ತಿದ್ದು, ಮೇ 28 ರಂದು ಮಸ್ಕತ್‌ನಿಂದ ಕಣ್ಣೂರಿಗೆ ಬಂದಿಳಿದಿದ್ದಾರೆ ಈ ವೇಳೆ ಅವರನ್ನು ತಪಾಸಣೆಗೆ ಒಳಪಡಿಸಿದಾಗ ಅಕ್ರಮವಾಗಿ ಚಿನ್ನ ಸಾಗಾಟ ಮಾಡುವ ವಿಚಾರ ಬೆಳಕಿಗೆ ಬಂದಿದೆ.
ಕಣ್ಣೂರು ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳು ಚಿನ್ನವನ್ನು ವಶಪಡಿಸಿಕೊಂಡಿದ್ದು. ನಂತರ ಸುರಭಿ ಖತುನ್ ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು ಈ ವೇಳೆ ಅವರನ್ನು 14 ದಿನಗಳ ಕಸ್ಟಡಿಗೆ ನೀಡಲಾಗಿದೆ.