ದಿನಕ್ಕೊಂದು ಕಥೆ
ಗುಣಭೇದ
ನೀರಿನಲ್ಲಿ ಒಂದು ಚೇಳು ಒದ್ದಾಡಿ ಮುಳುಗುತ್ತಿರುವುದನ್ನು ಕಂಡ ವೃದ್ಧೆಯೊಬ್ಬಳು ಅದನ್ನು ಮೇಲೆತ್ತಲೆಂದು ಕೈ ಹಾಕಿದಳು. ಚೇಳು ಅವಳ ಕೈಗೆ ಕುಟುಕಿತು. ತಕ್ಷಣ ನೋವಿನಿಂದ ಕೈಯನ್ನು ಹಿಂದಕ್ಕೆಳೆದು ಕೊಂಡಳು.
ಚೇಳು ಮತ್ತೆ ನೀರಿಗೆ ಬಿತ್ತು, ಅಯ್ಯೋ ಮುಳುಗುತ್ತಿದೆಯಲ್ಲಾ ಎಂದು ಇನ್ನೊಮ್ಮೆ ಚೇಳನ್ನೆತಲು ಕೈ ಹಾಕಿದಳು. ಚೇಳು ಮತ್ತೆ ಕುಟುಕಿತು. ಈಕೆ ಕೈ ಎಳೆದುಕೊಂಡಳು. ಅಲ್ಲಿಯೇ ನೋಡುತ್ತಿದ್ದ ಹುಡುಗನೊಬ್ಬ ಬಂದು ಮುದುಕಿಗೆ ಹೇಳಿದ. ಅದೊಂದು ಕೆಟ್ಟ ಜೀವಿ. ರಕ್ಷಿಸಹೋದವರಿಗೂ ತೊಂದರೆ ನೀಡುತ್ತದೆ. ಅದನ್ನಲ್ಲೇ ಬಿಟ್ಟುಬಿಡು ಎಂದ.
ಅದಕ್ಕೆ ಮುದುಕಿಯೆಂದಳು. ಅದು ಚೇಳು, ಕುಟುಕುವುದು ಅದರ ಗುಣ, ಸಹಾಯ ಮಾಡುವುದು ನನ್ನ ಗುಣ, ನಾನು ಸಹಾಯ ಮಾಡಿದರೇನೇ ನನಗೆ ತೃಪ್ತಿ. ಹೀಗೆ ಹೇಳಿದ ಅವಳು, ಎಲೆಯೊಂದರ ಸಹಾಯದಿಂದ ಚೇಳನ್ನು ನೀರಿನಿಂದ ಮೇಲೆತ್ತಿ ನೆಲದ ಮೇಲೆ ಬಿಟ್ಟಳು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.