ಹಿಜಾಬ್ ವಿವಾದಃ ಸಾಮರಸ್ಯೆ ಸಾರಿದ ಯಾದಗಿರಿ ವಿದ್ಯಾರ್ಥಿನಿ
ಹಿಜಾಬ್ ವಿವಾದಃ ಸಾಮರಸ್ಯೆ ಸಾರಿದ ಯಾದಗಿರಿ ವಿದ್ಯಾರ್ಥಿನಿ
ನಾನು ಶಾಲೆಯೊಳಗೆ ಹಿಜಾಬ್ ಧರಿಸಲ್ಲ – ನಸ್ರೀನ್
ಯಾದಗಿರಿಃ ನಾನು ಶಾಲಾ ಆವರಣ ಪ್ರವೇಶಿಸಿದ ನಂತರ ಹಿಜಾಬ್ ತೆಗೆದು ಬ್ಯಾಗ್ ಒಳಗಡೆ ಇಟ್ಟುಕೊಳ್ಳುವೆ ನಂತರ ತರಗತಿಗಳಿಗೆ ಹಾಜರಾಗುವೆ. ಶಾಲೆಯಲ್ಲಿ ಎಲ್ಲರೂ ಸಮಾನರು, ನಾವೆಲ್ಲ ಒಂದೇ ಶಿಕ್ಷಕರು ನಮಗೆ ದೇವರ ಸಮಾನ ಅವರೂ ಯಾವುದೇ ಬೆಧಭಾವ ಮಾಡದೆ ನಮಗೆಲ್ಲ ಶಿಕ್ಷಣ ಧಾರೆ ಎರೆಯುತ್ತಾರೆ ಎಂದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ನಸ್ರೀನ್ ಸಾಮರಸ್ಯದ ಕುರಿತು ಮಾತನಾಡಿದ್ದಾರೆ.
ನಗರದ ಕನ್ಯಾ ಪ್ರೌಢ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ನಸ್ರೀನ್ ಶಾಲೆಯೊಳಗಡೆ ಹಿಜಾಬ್ ಧರಿಸುವ ಅಗತ್ಯವಿಲ್ಲ. ನಾನು ಶಾಲಾ ತರಗತಿಯೊಳಗೆ ಪ್ರವೇಶಿಸುವಾಗ ಹಿಜಾಬ್ ಧರಿಸಲ್ಲ. ಶಾಲೆ ಬಿಟ್ಟ ಬಳಿಕ ಮನೆಗೆ ತೆರಳುವಾಗ ಹಿಜಾಬ್ ಧರಿಸುವೆ. ನಾವೆಲ್ಲ ಅಭ್ಯಾಸ ಮಾಡಲು ಬಂದಿದ್ದೇವೆ.
ಶಾಲೆ ದೇವಸ್ಥಾನವಿದ್ದಂತೆ, ಇಲ್ಲಿನ ಶಿಕ್ಷಕರೇ ದೇವರು, ದೇವರು ಎಲ್ಲರಿಗೂ ಒಂದೇ ಸಮನಾಗಿ ನೋಡಿಕೊಳ್ತಾರೆ. ವಿದ್ಯೆ ಕಲಿಯುವಾಗ ನಾವೆಲ್ಲ ಒಂದೇ ಸಮನಾಗಿ ಇರಬೇಕು.
ಯಾವುದೇ ಧರ್ಮ, ಜಾತಿ ಅಡ್ಡ ತರುವದು ಸರಿಯಲ್ಲ. ಎಲ್ಲದಕ್ಕೂ ಮಾನವೀಯತೆ ಬಹಳ ಮುಖ್ಯ. ನಾವೆಲ್ಲ ಇಲ್ಲಿ ಅಭ್ಯಾಸ ಮಾಡಲು ಬಂದಿದ್ದೇವೆ ಎಂದು ನಸ್ರೀನ್ ತನ್ನ ಆಭಿಪ್ರಾಯವನ್ನು ಮಾಧ್ಯಮದ ಮುಂದೆ ಹಂಚಿಕೊಂಡಿದ್ದಾಳೆ.
ನಸ್ರೀನ್ ವಿದ್ಯಾರ್ಥಿನಿಯಾದರೂ ಸಾಮರಸ್ಯ ಸಾರುವ ಮಾತನಾಡಿದ್ದಾಳೆ. ಯಾದಗಿರಿಯಿಂದಲೇ ಇಡಿ ರಾಜ್ಯ, ದೇಶಕ್ಕೆ ಸಾಮರಸ್ಯದ ಸಂದೇಶ ಹರಡಲಿ.
ವಿದ್ಯಾರ್ಥಿಗಳ ಭವಿಷ್ಯ ಹಾಳಾಗದಿರಲಿ. ಹೆಣ್ಣಿರಲಿ, ಗಂಡಿರಲಿ ಯಾವುದೇ ಧರ್ಮ, ಸಮುದಾಯವಾಗಿರಲಿ ಎಲ್ಲರೂ ಭಾರತೀಯರೇ, ಶೈಕ್ಷಣಿಕವಾಗಿ ಎಲ್ಲರೂ ಸಮಾನರು ಎಂಬುದನ್ನು ಅರಿಯಬೇಕಿದೆ. ಇಂತಹ ವಿಷಯಗಳಲ್ಲಿ ರಾಜಕೀಯ ಸಲ್ಲದು ಎಂಬುದು ರಾಜಕಾರಣಿಗಳು ಇನ್ನಾದರೂ ಅರ್ಥೈಸಿಕೊಳ್ಳಲಿ ಎಂಬುದೇ ಎಲ್ಲರ ಆಶಯವಾಗಿದೆ.