ರಾಜ್ಯದಲ್ಲಿ ಮುಂದುವರೆದ ಹಿಜಾಬ್ ಕಿರಿಕ್, ಸರ್ವಧರ್ಮದವರು ಸೇರಿ ಕಾನೂನಾತ್ಮಕವಾಗಿ ಇತಿಶ್ರೀ ಹಾಡಲಿ

ರಾಜ್ಯದಲ್ಲಿ ಮುಂದುವರೆದ ಹಿಜಾಬ್ ಕಿರಿಕ್
ವಿದ್ಯಾರ್ಥಿನಿಯರು ಗೈರು, ಶಿಕ್ಷಣಕ್ಕಿಂತ ಧರ್ಮನೇ ಮುಖ್ಯವಾಯಿತಾ.?
ಬೆಂಗಳೂರಃ ರಾಜ್ಯದಾದ್ಯಂತ ಇಂದು ಹಿಜಾಬ್ ಸಮಸ್ಯೆ ಮುಂದುವರೆದಿದ್ದು, ಹೈಕೋರ್ಟ್ ಮಧ್ಯಂತರ ಆದೇಶದಂತೆ ಶಾಲಾ ಸಮವಸ್ತ್ರ ಮಾತ್ರ ಧರಿಸಿ ಶಾಲೆಗೆ ಆಗಮಿಸಬೇಕಿದ್ದ, ವಿದ್ಯಾರ್ಥಿನಿಯರು, ಮತ್ತೆ ಇಂದು ಹಿಜಾಬ್ ಧರಿಸಿಯೇ ಶಾಲೆಗೆ ಆಗಮಿಸಿದ ಘಟನೆಗಳು ನಡೆದಿವೆ.
ನಿನ್ನೆಯೇ ಯಾವುದೇ ಧರ್ಮ ವಸ್ತ್ರ ಧರಿಸಿ ಬರುವಂತಿಲ್ಲ. ಹಿಜಾಬ್ ಹಾಕಿ ಬಂದ್ರೂ ಶಾಲಾ ಆವರಣದಲ್ಲಿ ತೆಗೆದು ತರಗತಿಗಳಿಗೆ ಹಾಜರಾಗಲು ಹಲವಾರು ಶಾಲೆಗಳಲ್ಲಿ ಶಿಕ್ಷಕರು ಮನವಿ ಮಾಡಿದರೂ ಇಂದು ಮತ್ತೆ ಕ್ಯಾರೆ ಎನ್ನದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಹಲವಾರು ಶಾಲೆಗಳಿಗೆ ಆಗಮಿಸಿ ಕಿರಿಕ್ ಆರಂಭಿಸಿದ ಘಟನೆಗಳು ಕಲ್ಬುರ್ಗಿ ಸೇರಿದಂತೆ ಹಲವಡೆ ಜರುಗಿವೆ.
ಕೋರ್ಟ್ ಆದೇಶ ಪಾಲಿಸುವದು ಸರ್ವರ ಕರ್ತವ್ಯವಾಗಿದ್ದು, ಆದಾಗ್ಯು ಕಾನೂನು ಉಲ್ಲಂಘನೆ ಮಾಡಿ ಹಿಕಾಬ್ ಧರಿಸಿ ಶಾಲೆಗೆ ಬರುವದು ಎಷ್ಟರ ಮಟ್ಟಿಗೆ ಸರಿ ಎಂಬುದು ಪ್ರಜ್ಞಾವಂತ ನಾಗರಿಕರು ಪ್ರಶ್ನಿಸುವಂತಾಗಿದೆ.
ನ್ಯಾಯಾಲಯದಲ್ಲಿ ಹಿಜಾಬ್ ವಿಚಾರಣೆ ನಡೆಯುತ್ತಿದ್ದು, ಆದೇಶ ಬರುವರೆಗೂ ಹೈಕೋಯ ಮಧ್ಯಂತರ ಆದೇಶ ಪಾಲಿಸುವದು ಕಾನೂನಿಗೆ ಗೌರವ ಸೂಚಕವಾಗಿರುತ್ತದೆ. ಅದನ್ನು ಉಲ್ಲಂಘಿಸುವದು ಕಾನೂನು ಮೀರಿ ವರ್ತಿಸಿದಂತಾಗಲಿದೆ. ಹೀಗೆ ಮುಂದುವರೆದರೆ ಇದು ಯಾವ ಹಂತ ತಲುಪಲಿದೆ ಎಂಬುದು ಚಿಂತನಾರ್ಹವಾಗಿದೆ.
ಮಕ್ಕಳ ಭವಿಷ್ಯ ಡೋಲಾಯಮಾನವಾಗಿದೆ. ಪಾಲಕರೇ ಮಕ್ಕಳ ಭವಿಷ್ಯಕ್ಕೆ ಕುಂದುಂಟು ಮಾಡುವದು ಧರ್ಮ ಆಧಾರಿತ ವಿಚಾರಗಳನ್ನು ಬಿತ್ತುವ ಮೂಲಕ ಮಕ್ಕಳಲ್ಲಿ ಬೇಧಭಾವ ತುಂಬುವದು ಮುಂದೆ ದೇಶಕ್ಕೆ ಮಾರಕವಾಗಲಿದೆ ಎಂಬುದು ಎಲ್ಲ ಧರ್ಮದವರು, ರಾಜಕಾರಣಿಗಳು ಯೋಚಿಸುವ ಮೂಲಕ ಕೂಡಲೆ ಈ ಸಮಸ್ಯೆಗೆ ಇತಿಶ್ರೀ ಹಾಡಬೇಕಿದೆ.