‘ಕುಮಾರಸ್ವಾಮಿ ಸಾಹಿತ್ಯ ಭೂಷಣ ಪ್ರಶಸ್ತಿಗೆ ಹೊನ್ಕಲ್ ಭಾಜನ
ಮಹಾಶೈವ ಧರ್ಮಪೀಠದಿಂದ ಲೇಖಕ ಹೊನ್ಕಲ್ ಗೆ ಮಹಾ ತಪಸ್ವಿ “ಕುಮಾರಸ್ವಾಮಿ ಸಾಹಿತ್ಯ ಭೂಷಣ” ಪ್ರಶಸ್ತಿ
ರಾಯಚೂರುಃ ಮಹಾಶೈವ ಧರ್ಮಪೀಠ ಸುಕ್ಷೇತ್ರ ಕೈಲಾಸ ಗೊಬ್ಬರು ಜಿಲ್ಲಾ ರಾಯಚೂರು ಇವರ ಧರ್ಮಪೀಠದ ವತಿಯಿಂದ ಮಹಾ ತಪಸ್ವಿ ಪರಮಪೂಜ್ಯ ಕುಮಾರಸ್ವಾಮಿ ಧಾರವಾಡ ಅವರ ೧೧೨ ಜನ್ಮದಿನದ ಸ್ಮರಣೆಗಾಗಿ ಲೇಖಕ ಸಿದ್ಧರಾಮ ಹೊನ್ಕಲ್ ಅವರಿಗೆ *ಮಹಾ ತಪಸ್ವಿ ಪರಮಪೂಜ್ಯ ಕುಮಾರಸ್ವಾಮಿ ಸಾಹಿತ್ಯ ಭೂಷಣ” ಪ್ರಶಸ್ತಿ* ನೀಡಲಾಗುತ್ತಿದೆ.
ಸಿದ್ಧರಾಮ ಹೊನ್ಕಲ್ ಅವರ ಸಾಹಿತ್ಯ ಸೇವೆಯನ್ನು ಗೌರವಿಸಿ ಈ ಪುರಸ್ಕಾರವು ಹನ್ನೊಂದು ಸಾವಿರ ಗೌರವ ಧನ, ಸ್ಮರಣಿಕೆ, ಪುರಸ್ಕಾರ ಪತ್ರದೊಂದಿಗೆ ನೀಡಲಾಗುತ್ತಿದೆ ಎಂದು ಸಂಸ್ಥಾನದ ಪೀಠಾಧಿಪತಿ ಶ್ರೀ ಮುಕ್ಕಣ್ಣ ಕರಿಗಾರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮವು ದಿನಾಂಕ ೨೨-೮-೨೦೨೧ ರಂದು ಬೆಳಿಗ್ಗೆ ಹನ್ನೊಂದು ಗಂಟೆಗೆ ಶ್ರೀಕ್ಷೇತ್ರ ಗೊಬ್ಬರು. ಜಿ.ರಾಯಚೂರಿನಲ್ಲಿ ನಡೆಯಲಿದೆ.ಅನೇಕ ಗಣ್ಯರು ಹಾಗೂ ಕವಿ ಸಾಹಿತಿಗಳು ಭಾಗವಹಿಸಲಿದ್ದಾರೆ.
ಈ ಪ್ರಶಸ್ತಿ ಲಭಿಸಿದ್ದಕ್ಕೆ ಶಹಾಪುರ ಕಸಾಪ ಅಧ್ಯಕ್ಷ ಸಿದ್ಧಲಿಂಗಣ್ಣ ಆನೇಗುಂದಿ ಗೌರವ ಕಾರ್ಯದರ್ಶಿ ಬಸವರಾಜ ಶಿಣ್ಣೂರು ಹಾಗೂ ಯಾದಗಿರಿ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ ಹಾಗೂ ಅವರ ಬಳಗ ಹರ್ಷ ವ್ಯಕ್ತಪಡಿಸಿದ್ದಾರೆ.