ಕಲ್ಬುರ್ಗಿಃ ಅಗ್ನಿ ಅವಘಡ ಲಕ್ಷಾಂತರ ಮೌಲ್ಯದ ಸಾಮಾಗ್ರಿ ನಷ್ಟ
ಸೈಕಲ್ ಡೀಲರ್ ಶಾಪ್ ಗೆ ಬೆಂಕಿ ಲಕ್ಷಾಂತರ ರೂ.ನಷ್ಟ
ಕಲ್ಬುರ್ಗಿಃ ಅಗ್ನಿ ಅವಘಡ ಲಕ್ಷಾಂತರ ಮೌಲ್ಯದ ಸಾಮಾಗ್ರಿ ನಷ್ಟ
ಕಲ್ಬುರ್ಗಿಃ ನಗರದ ಸೂಪರ್ ಮಾರ್ಕೆಟ್ ನಲ್ಲಿ ಬರುವ ಎಸ್.ಬಸವರಾಜ ಸೈಕಲ್ ಡೀಲರ್ ಶಾಪ್ ಗೆ ಆಕಸ್ಮಿಕ ಬೆಂಕಿ ತಗುಲಿ ಮಧ್ಯ ರಾತ್ರಿ ಹೊತ್ತಿ ಉರಿದ ಪರಿಣಾಮ ಲಕ್ಷಾಂತರ ರೂಪಾಯಿ ಸೈಕಲ್ ಇತರೆ ಸಾಮಾಗ್ರಿಗಳು ಸುಟ್ಟು ಕರಕಲಾದ ಘಟನೆ ನಿನ್ನೆ ನಡೆದಿದೆ.
ಸುದ್ದಿ ತಿಳಿದು ರಾತ್ರಿ ಐದು ಅಗ್ನಿ ಶಾಮಕ ದಳದ ವಾಹನಗಳು ಆಗಮಿಸಿ ಹಲವಾರು ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು.
ಅಂಗಡಿಯಲ್ಲಿದ್ದ ಬೆಂಕಿ ಮುನ್ನೆಲೆಗೆ ಬಂದಿದ್ದಿ, ಅಕ್ಕಪಕ್ಕದ ಅಂಗಡಿಗಳಿಗೆ ಬೆಂಕಿ ವ್ಯಾಪಿಸುವ ಆತಂಕ ಎದುರಾಗಿತ್ತು.
ಆದರೆ ಅಗ್ನಿಶಾಮಕ ದಳದ ಸಿಬ್ಬಂದಿಯ ಸಮರ್ಪಕ ಕರ್ತವ್ಯದಿಂದಾಗಿ ಪಕ್ಕದ ಅಂಗಡಿಗಳು ಉಳಿಯುಬಲ್ಲಿ ಅಗ್ನಿಶಾಮಕ ದಳದ ಶ್ರಮ ಯಶಸ್ವಿಯಾಯಿತು.
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಬ್ಬಂದಿ ಜನದಟ್ಟಣೆ ನಿಯಂತ್ರಿಸಿ ಅಗ್ನಿಶಾಮಕ ದಳದ ಸಿಬ್ಬಂದಿಗೆ ಬೆಂಕಿ ನಂದಿಸಲು ಅನುವು ಮಾಡಿಕೊಟ್ಟರು.
ಈ ಕುರಿತು ಪ್ರಕರಣ ದಾಖಲಾಗಿದ್ದು, ಸಮರ್ಪಕ ತನಿಖೆಕೈಗೊಳ್ಳಲಾಗಿದೆ ಎಂದುಪೊಲೀಸರು ತಿಳಿಸಿದ್ದಾರೆ.
– ವರದಿ ಸತೀಶ ಮೂಲಿಮನಿ