ಪ್ರಮುಖ ಸುದ್ದಿ
ಕಲ್ಬುರ್ಗಿಃ ಹಲವು ಬಡಾವಣೆಯಲ್ಲಿ ಕೊರೊನಾ ಸ್ಪೋಟ, ಹೆಚ್ಚಿದ ಆತಂಕ
ಕಲ್ಬುರ್ಗಿಃ ಹಲವು ಬಡಾವಣೆಯಲ್ಲಿ ಕೊರೊನಾ ಸ್ಪೋಟ, ಹೆಚ್ಚಿದ ಆತಂಕ
ಕಲ್ಬುರ್ಗಿಃ ನಗರದ ಸುಮಾರು 7 ಬಡಾವಣೆಗಳಲ್ಲಿ ಹಲವರಿಗೆ ಕೊರೊನಾ ದೃಢಪಟ್ಟಿದ್ದು, ವಾರದಲ್ಲಿ 250 ಗಡಿ ದಾಟಿದೆ.
ದಿನೇ ದಿನೇ ಕೊರೊನಾ ಸೊಂಕು ಹೆಚ್ಚುತ್ತಿದ್ದು, ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ.
ತಾರಫೈಲ್, ಎಂ.ಬಿ.ನಗರ, ಗಾಜಿಪುರ, ಬ್ಯಾಂಕ್ ಕಾಲೊನಿ, ಹನುಮಾನ ನಗರ, ಮಕ್ಕಾ ಕಾಲೊನಿ ಸೇರಿದಂತೆ ಹಲವಡೆ ಕೊರೊನಾ ಸೋಂಕು ಹರಡಿದ್ದು, ಜಿಲ್ಲಾಡಳಿತ ಎಚ್ಚರಿಕೆವಹಿಸಿದ್ದು, ಕೊರೊನಾ ತಪಾಸಣೆಗೆ ಮುಂದಾಗಿದೆ.
ಬಡಾವಣೆ ಜನ ಅಲ್ಲಿನ ನಿವಾಸಿಗರು ಕೊರೊನಾ ಟೆಸ್ಟಿಂಗ್ ಗೆ ಮುಂದಾಗಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ನಗರ ಪ್ರದೇಶದಲ್ಲಿ ಕೊರೊನಾ ಮತ್ತೆ ಆರ್ಭಟ ಶುರು ಮಾಡಿದ್ದು ಸಾರ್ವಜನಿಕರು ಕಡ್ಡಾಯವಾಗಿ ಕೊರೊನಾ ನಿಯಮಗಳನ್ನು ಪಾಲನೆ ಮಾಡಬೇಕೆಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದ್ದಾರೆ.