ಐದು ಲಕ್ಷ ಪರಿಹಾರ ಚಕ್ ವಿತರಿಸಿದ ಶಾಸಕ ಕಂದಕೂರ
ಸಿಡಿಲು ಮತ್ತು ವಿದ್ಯುತ್ ಸ್ಪಶದಿಂದ ಮೃತಪಟ್ಟ ಕುಟುಂಬಕ್ಕೆ ಚಕ್ ವಿತರಣೆ
ಯಾದಗಿರಿಃ ಜಿಲ್ಲೆಯ ಗುರುಮಿಠಕಲ್ ಮತಕ್ಷೇತ್ರ ವ್ಯಾಪ್ತಿ ಸಿಡಿಲಿಗೆ ಬಲಿಯಾದವರ ಕುಟುಂಬಕ್ಕೆ ಮತ್ತು ವಿದ್ಯುತ್ ಅವಘಡದಿಂದ ಮೃತಪಟ್ಟ ತಲಾ ಕುಟುಂಬಕ್ಕೆ 5 ಲಕ್ಷ ರೂ.ಚಕ್ ನ್ನು ಕ್ಷೇತ್ರದ ಶಾಸಕ ನಾಗನಗೌಡ ಕಂದಕೂರ ವಿತರಿಸಿದರು.
ಗುರುಮಿಠಕಲ್ ಮತಕ್ಷೇತ್ರದ ಕಾಳಬೆಳಗುಂದಿ ಗ್ರಾಮದ ಕೃಷ್ಣ ಕುಮಾರ ಮತ್ತು ಕಣೇಕಲ್ ಗ್ರಾಮದ ಶಿವಶರಡ್ಡಿ ಸಿಡಿಲಿನಿಂದ ಮೃತಪಟ್ಟಿದ್ದು ಅದೇರಿತಿ ಮೋಟ್ನಳ್ಳಿ ಗ್ರಾಮದ ಮೊಗಲಪ್ಪ ವಿದ್ಯುತ್ ಶಾಕ್ ನಿಂದ ಮೃತಪಟ್ಟಿರುವ ಹಿನ್ನೆಲೆ ಆಯಾ ಕುಟುಂಬಕ್ಕೆ ತಲಾ ಐದು ಲಕ್ಷ ರೂ. ಸಕಾರಿ ಪರಿಹಾರದ ಚಕ್ ನ್ನು ನೀಡಿದರು.
ಈ ಸಂದರ್ಭದಲ್ಲಿ ಗುರಮಿಠಕಲ್ ತಹಸೀಲ್ದಾರ ಚನ್ನಮಲ್ಲಪ್ಪ ಘಂಟಿ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ವರ್ಗದವರು ಮತ್ತು ಜೆಸ್ಕಾಂ ಎಇಇ ಅಂಬರೀಶ ರಾಠೋಡ ಸೇರಿದಂತೆ ಮುಖಂಡರಾದ ಬಸವರಾಜ, ಬನ್ನಪ್ಪ, ಕಾಳಬೆಳಗುಂದಿ ಗ್ರಾಮದ ಮುಖಂಡರಾದ ಪರ್ವತರೆಡ್ಡಿಗೌಡ, ಚೌಡಯ್ಯ ಮತ್ತು ಮೋಟ್ನಳ್ಳಿ ಗ್ರಾಮದ ಮುಖಂಡರಾದ ಶರಣಪ್ಪ ಗಾಡಿ, ತಿಪ್ಪಾರೆಡ್ಡಿ ಇನ್ನಿತರರಿದ್ದರು.