ಪ್ರಮುಖ ಸುದ್ದಿ

ನೀರು ನಿರ್ವಹಣೆಯಲ್ಲಿ ಸಮರ್ಪಕ ಕಾರ್ಯ ನಿರ್ವಹಿಸಿ-ಶರಣಪ್ಪ ತಳವಾರ

ನೀರು ಬಳಕೆದಾರರ ಸಂಘಗಳಿಗೆ ತಲಾ 1 ಲಕ್ಷ ವಿತರಣೆ

ಶಹಾಪುರಃ ನೀರು ಬಳಕೆದಾರ ಸಂಘಗಳ ಪದಾಧಿಕಾರಿಗಳು ಸದಸ್ಯರು ನೀರು ಬಳಕೆ ಕುರಿತು ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು. ರೈತರ ಸಹಭಾಗಿತ್ವ ಅಗತ್ಯವಿದ್ದು, ರೈತರು ನೀರು ನಿರ್ವಹಣೆ ಕುರಿತು ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ಚರ್ಚಿಸಿ ಸೂಕ್ತ ಮಾಹಿತಿ ಪಡೆದುಕೊಂಡು ಕಾರ್ಯ ನಿರ್ವಹಿಸಬೇಕು ಎಂದು ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ ತಿಳಿಸಿದರು.

ಭೀಮರಾಯನ ಗುಡಿಯ ಕೃಷಿ ಮಹಾವಿದ್ಯಾಲಯ ಸಭಾಂಗಣದಲ್ಲಿ ನಡೆದ ಕೃಷ್ಣಾ ಕಾಡಾ (ಸಹಕಾರ ವಿಭಾಗ) ಭೀಮರಾಯನ ಗುಡಿವತಿಯಿಂದ ನಡೆದ ನೀರು ಬಳಕೆದಾರರ ಸಹಕಾರ ಸಂಘಗಳ ಪದಾಧಿಕಾರಿ ಹಾಗೂ ಸದಸ್ಯರಿಗೆ ನೀರು ನಿರ್ವಹಣೆ ಹಾಗೂ ಪುನಶ್ಚೇತನ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ, ಬಳಕೆದಾರರ ಸಂಘಗಳಿಗೆ ತಲಾ ಒಂದು ಲಕ್ಷ ರೂ.ಚಕ್ ವಿತರಿಸಿ ಮಾತನಾಡಿದರು.

ನೀರಿನ ಬಳಕೆಯ ಸಾಮಥ್ರ್ಯವನ್ನು ಹೆಚ್ಚಿಸುವ ಕಾರ್ಯವಾಗಬೇಕಿದೆ. ನೀರು ಬಳಕೆ ಕುರಿತು ಸಂಬಂಧಿಸಿದ ಅಧಿಕಾರಿ ಇಲಾಕೆಯೊಂದಿಗೆ ಒಡಂಬಡಿಕೆ ಮತ್ತು ನೀರಿನ ಹಂಚಿಕೆಯಲ್ಲಿ ಸಮಾನತೆ ತರುವ ಕಾರ್ಯ ಸೇರಿದಂತೆ ಭೂಮಿ ಮತ್ತು ನೀರಿನ ಉತ್ಪಾದಕಯೆಯನ್ನು ಹೆಚ್ಚಿಸಬೇಕಿದೆ. ಆ ನಿಟ್ಟಿನಲ್ಲಿ ಬಳಕೆದಾರರ ಸಂಘ ಮತ್ತು ರಐತರಿಗೆ ಬೇಕಾದ ಸವಲತ್ತುಗಳನ್ನು ಕಲ್ಪಿಸುವ ಯೋಜನೆಗಳನ್ನು ರೂಪಿಸಲಾಗುವದು.

ಅದಕ್ಕೆ ಬೇಕಾದ ಸಮರ್ಪಕ ಕೆಲಸವನ್ನು ನಾನು ಸರ್ಕಾರದ ಜೊತೆ ಸಂಬಧಿಸಿದ ಇಲಾಖೆಯ ಮುಖ್ಯಕಾರ್ಯದರ್ಶಿಗಳ ಜೊತೆಗೆ ಮಾತುಕತೆ ನಡೆಸಿ ರೈತರಿಗೆ ಅನುಕೂಲ ಕಲ್ಪಿಸುವ ಕಾರ್ಯ ಯೋಜನೆ ರೂಪಸಲಾಗುವದು ಎಂದರು. ಬಳಕೆದಾರರ ಸಂಘದ ಕಚೇರಿ ಹಾಗೂ ಗೋದಾಮು ನಿರ್ಮಾಣಕ್ಕೆ ಇಲಾಖೆಯಿಂದ 7 ಲಕ್ಷ 30 ಸಾವಿರ ರೂ. ಮಿಗದಿ ಪಡಿಸಲಾಗಿದ್ದು, ಅದರಲ್ಲಿ ಸಂಘವು ಪ್ರತಿಶತ 20 ರಂತೆ 1 ಲಕ್ಷ 46 ಸಾವಿರ ರೂಸಾಲವನ್ನು ಕೊಡಬೇಖಾಗುವದು. ಅಲ್ಲದೆ ಮೂಲ ಸೌಕರ್ಯ ಒದಗಿಸಲು 3 ಲಕ್ಷ ರೂವರೆಗೆ ಅನುದಾನ ಕಲ್ಪಿಸಲಾಗುವದು ಎಂದು ಮಾಹಿತಿ ನೀಡಿದರು.

ಸದ್ಯ ಶಹಾಪುರ, ಸುರಪುರ, ಜೇವರ್ಗಿ, ಸಿಂದಗಿ, ಇಂಡಿ ವ್ಯಾಪ್ತಿಯ 83 ನೀರು ಬಳಕೆದಾರರ ಸಂಘಗಳಿಗೆ ತಲಾ ಒಂದು ಲಕ್ಷ ರೂ. ಚಕ್ ವಿತರಿಸಲಾಗಿದೆ. ಬಳಕೆದಾರರ ಸಂಘಗಳ ಪದಾಧಿಕಾರಿಗಳು ಸದಸ್ಯರು ಜಾಗೃತರಾಗಿ ಸರ್ಮವಾಗಿ ಕಾರ್ಯಯೋಜನೆಯನ್ನು ಬಳಸಿಕೊಂಡು ಕಾರ್ಯ ನಿರ್ವಹಿಸುವ ಮೂಲಕ ಪ್ರಗತಿಗಾಗಿ ಶ್ರಮಿಸಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕೃಷ್ಣಾ ಕಾಡಾ ಆಡಳಿತಾಧಿಕಾರಿ ಶರಣಪ್ಪ ಬೆಣ್ನೂರ, ಕಾಡಾ ಮುಖ್ಯ ಲೆಕ್ಕಾಧಿಕಾರಿ ರಾಜಕುಮಾರ, ಕೃಷ್ಣಾ ಕಾಡಾ ಸಹಕಾರ ಸಂಘಗಳ ಸಹಾಯಕ ನಿಬಂಧಕ ಮಹ್ಮದ್ ತಾಹೇರ ಹುಸೇನ್,ನೀರು ಬಳಕೆದಾರರ ಮಹಾ ಮಂಡಳ ಅಧ್ಯಕ್ಷ ರಂಗಣ್ಣ ಡೆಂಗಿ, ಕಾಡಾ ನಿರ್ದೇಶಕ ಬಾಗೇಶ ಓತಿನಮಡು ಉಪಸ್ಥಿತರಿದ್ದರು. ಕಾರ್ಯಗಾರದಲ್ಲಿ ಬಳಕೆದಾರರ ಸಂಘದ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು. ಸೂಕ್ತ ತರಬೇತಿಯನ್ನು ಅಬ್ದುಲ್‍ಸಾಬ ಕಲಬುರ್ಗಿ ನೀಡಿದರು.

Related Articles

Leave a Reply

Your email address will not be published. Required fields are marked *

Back to top button