ಪ್ರಮುಖ ಸುದ್ದಿ

2(ಎ) ಮೀಸಲಾತಿ ಕೊಟ್ರೆ ಸನ್ಮಾನ ಇಲ್ದಿದ್ರೆ ಸತ್ಯಾಗ್ರಹ- ಕೂಡಲಸಂಗಮ ಸ್ವಾಮೀಜಿ ಎಚ್ಚರಿಕೆ

2(ಎ) ಮೀಸಲಾತಿ ಕೊಟ್ರೆ ಸನ್ಮಾನ ಇಲ್ದಿದ್ರೆ ಸತ್ಯಾಗ್ರಹ- ಕೂಡಲಸಂಗಮ ಸ್ವಾಮೀಜಿ ಎಚ್ಚರಿಕೆ

ಚಿಕ್ಕೋಡಿ: ಹಿಂದಿನ ಸಿಎಂ ಮಾತುಕೊಟ್ಟಂತೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸ್ಥಾನಮಾನ ಕುರಿತು ಪ್ರಸ್ತುತ ಸಿಎಂ ಬೊಮ್ಮಾಯಿ ಅವರು ಅಧಿವೇಶನದಲ್ಲಿ ಚರ್ಚೆ ನಡೆಸಬೇಕು ಎಂದು ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.

ಗುರುವಾರ ನಗರದಲ್ಲಿ ಸುದ್ಧಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅ.1ರ ಒಳಗಾಗಿ ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ ಸರ್ಕಾರ 2(ಎ) ಸ್ಥಾನಮಾನ ನೀಡುವ ಕುರಿತು ಘೋಷಣೆ ಮಾಡಿದಲ್ಲಿ ಸಿಎಂ ಅವರಿಗೆ ಸನ್ಮಾನ ಇಲ್ಲದೇ ಹೋದರೇ ಸತ್ಯಾಗ್ರಹ ಮುಂದುವರೆಸಲಾಗುತ್ತದೆ ಎಂದು ಶ್ರೀಗಳು ಎಚ್ಚರಿಕೆ ನೀಡಿದರು.

ಸರಕಾರ ಕೊಟ್ಟ ಮಾತನ್ನು ಕಳಕೊಂಡಿದೆ. ಈ ಹಿನ್ನೆಲೆಯಲ್ಲಿ ಬರುವ ಒಂದನೇ ತಾರೀಖಿನ ವರೆಗೆ ಕಾದು ನೋಡುತ್ತೇವೆ. ನಮ್ಮ ಬೇಡಿಕೆ ಈಡೇರಿದಿದ್ದರೆ ಮತ್ತೆ ಬೆಂಗಳೂರಿನಲ್ಲಿ ಸತ್ಯಾಗ್ರಹವನ್ನು ಪ್ರಾರಂಭಿಸುವದಾಗಿ ಎಚ್ಚರಿಕೆ ನೀಡಿದರು.

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ನಿಟ್ಟಿನಲ್ಲಿ ಸರಕಾರಕ್ಕೆ ಎಚ್ಚರಿಸುವ ಕಾರ್ಯದ ಅಂಗವಾಗಿ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ ಅಭಿಯಾನವನ್ನು ಚಾಮರಾಜ ನಗರ ಜಿಲ್ಲೆಯಲ್ಲಿ ಅಭಿಯಾನ ಪ್ರಾರಂಭಿಸಲಾಗಿದೆ.

ಅದು ಅಲ್ಲಿಂದ ಹೊರಟು ಬೆಳಗಾವಿ ನಗರಕ್ಕೆ ಬಂದಿದೆ. ನಾಳೆ ದಿ. 24 ರಂದು ಬೆಳಗಾವಿಯ ಗಾಂಧಿ ಭವನದಲ್ಲಿ ಈ ಪಂಚಾಯತ ನಡೆಯಲಿದೆ.

ಸರಕಾರ ಕೊಟ್ಟ ಮಾತಂತೆ ನೆನಪಿಸುವದಕ್ಕೆ ಸರಕಾರವನ್ನು ಮೀಸಲಾತಿ ನೀಡುವ ಮಾತನ್ನು ಸರಕಾರ ಮರೆತಿದೆ. ರಾಜ್ಯದ ಪಂಚಮ ಸಾಲಿ ಲಿಂಗಾಯತ ನಾಯಕರು ಸರಕಾರದ ಮಟ್ಡದಲ್ಲಿಮೀಸಲಾತಿ ನೀಡುವ ಬಗ್ಗೆ ಹಕ್ಕೋತ್ತಾಯ ಮಂಡಿಸಿದ್ದಾರೆ.

ಈ ಸರಕಾರದಿಂದ ಮೀಸಲಾತಿ ಸಿಗಬಹುದು ಎನ್ನುವ ವಿಶ್ವಾಸ ಇದೆ ಎಂದರು.

ಪಂಚಮಸಾಲಿ ಮೀಸಲಾತಿ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದ್ದಾರೆ. ಒಂದನೆ ತಾರೀಖ ವರೆಗೆ ನಮ್ಮ ಬೇಡಿಕೆ ಈಡೇರಿಕೆಗೆ ಆಗದಿದ್ದರೆ ಮತ್ತೆ ಸತ್ಯಾಗ್ರಹ ಪ್ರಾರಂಭವಾಗಲಿದೆ.

ಜೆ.ಎಚ್.ಪಟೇಲರ ಜಯಂತಿ ಮೂಲಕ ಸತ್ಯಾಗ್ರಹ ಪ್ರಾರಂಭಿಸುತ್ತೆವೆ. ಪ್ರಿಡಂಪಾರ್ಕ್ ದಲ್ಲಿ ಸತ್ಯಾಗ್ರಹ ನಡೆಯಲಿದೆ. ಬಸವಾಭಿಮಾನಿಗಳು ಮುಖ್ಯಮಂತ್ರಿ ಯಾಗಿದ್ದಾರೆ ಅವರು ಸಮುದಾಯಕ್ಕೆ ಮೀಸಲಾತಿ ನೀಡಬಹುದು ಎನ್ನುವ ವಿಶ್ವಾಸ ಇದೆ ಎಂದರು.

ಈ ಸಂದರ್ಭದಲ್ಲಿ ದಾನಪ್ಪ ಕೊಟಬಾಗಿ, ಅಶೋಕ ಹರಗಾಪೂರೆ, ರಾಜು ಹಿರೇಕೊಡಿ, ಸಿದ್ದಗೌಡ ಪಾಟೀಲ, ವೃಶಭಗೌಡ ಪಾಟೀಲ, ಕಾಶಿನಾಥ ಕುರಣಿ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button