ಪ್ರಮುಖ ಸುದ್ದಿ
ಶಹಾಪುರಃ ಭೀಕರ ಅಪಘಾತ ಪತ್ನಿ ಸಾವು ಗಂಡ ಆಸ್ಪತ್ರೆಗೆ ದಾಖಲು

ಶಹಾಪುರಃ ಭೀಕರ ಅಪಘಾತ ಪತ್ನಿ ಸಾವು ಗಂಡ ಆಸ್ಪತ್ರೆಗೆ ದಾಖಲು
ಶಹಾಪುರಃ ಬೈಕ್ ವೊಂದಕ್ಕೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂಬದಿ ಕುಳಿತ ಮಹಿಳೆ ಭಾಗಮ್ಮ (45) ಟಿಪ್ಪರ್ ಹಿಂಬದಿ ಚಕ್ರದಡಿ ಸಿಲುಕಿ ಮಹಿಳೆಯ ರುಂಡವೇ ನುಜ್ಜುಗುಜ್ಜಾಗಿ ತುಂಡಾದ ಭೀಕರ ಅಪಘಾತ ತಾಲೂಕಿನ ವಿಭೂತಿಹಳ್ಳಿ ಗ್ರಾಮ ಸಮೀಪ ಹೆದ್ದಾರಿ ಮೇಲೆ 6 ಗಂಟೆಗೆ ನಡೆದಿದೆ.
ಬೈಕ್ ಸವಾರ ಮಹಾದೇವಪ್ಪ ಸಣ್ಣಪುಟ್ಟ ಗಾಯಗೊಂಡಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪತ್ನಿಯ ರಕ್ತಸಿಕ್ತ ದೇಹ ನೋಡಿ ಜನ ಮರುಗಿದ ಘಟನೆ ನಡೆದಿದೆ.
ತಾಲೂಕಿನ ಸಗರ ಗ್ರಾಮದವರಾದ ಮಹಾದೇವಪ್ಪ ಅಬ್ಸಿಹಾಳ ಮತ್ತು ಪತ್ನಿ ಭಾಗಮ್ಮ ಬೆಂಗಳೂರಿನಲ್ಲಿ ದುಡಿಯುತ್ತಾರೆ. ಸಂಕ್ರಾಂತಿ ಹಬ್ಬಕ್ಕೆಂದು ಸ್ವಗ್ರಾಮಕ್ಕೆ ಆಗಮಿಸಿದ ಅವರು, ಶಹಾಪುರದಲ್ಲಿ ಹಬ್ಬದ ಸಂತೆ ಮಾಡಿಕೊಂಡು ಸಗರ ಗ್ರಾಮಕ್ಕೆ ತೆರಳುತ್ತಿದ್ದರು. ಮಾರ್ಗ ಮಧ್ಯ ಈ ದುರ್ಘಟನೆ ನಡೆದಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.