ಸಚಿವರೇನು ದೇವಲೋಕದಿಂದ ಇಳಿದು ಬಂದಿದ್ದಾರೆಯೇ.?
ಸಚಿವ ಸುಧಾಕರ ಫೋನ್ ಸಹ ರಿಸೀವ್ ಮಾಡಲ್ಲ- ರೇಣುಕಾರ್ಯ ಆಕ್ರೋಶ
ಬೆಂಗಳೂರಃ ಆರೋಗ್ಯ ಸಚಿವರನ್ನು ಹತ್ತಾರು ಬಾರಿ ಭೇಟಿ ಮಾಡಿ ಮನವಿ ಮಾಡಿದರೂ ಕೆಲಸ ಕಾರ್ಯಗಳಾಗುತ್ತಿಲ್ಲ ಅಲ್ಲದೆ 15 ದಿವಸದಿಂದ ಕಾಲ್ ಮಾಡಿದರೂ ಫೋನ್ ರಿಸೀವ್ ಮಾಡ್ತಿಲ್ಲ. ಅವರ ಆಪ್ತ ಸಹಾಯಕರು ಕಾಲ್ ರಿಸೀವ್ ಮಾಡಲ್ಲ ಎಂದು ಅವರದೇ ಪಕ್ಷದ ಶಾಸಕ ಹಾಗೂ ಸಿಎಂ ಕಾರ್ಯದರ್ಶಿ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ಆರೋಗ್ಯ ಸಚಿವ ಸುಧಾಕರ ಅವರ ವರ್ತನೆ ಸರಿಯಲ್ಲ. ಸಚಿವರೆಂದರೇನು ದೇವಲೋಕದಿಂದ ಇಳಿದು ಬಂದಿದ್ದಾರೆಯೇ.? ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಚಿವರು ತಮ್ಮ ವರ್ತನೆ ಬದಲಾಯಿಸಿಕೊಳ್ಳಬೇಕೆಂದು ಅವರು ಅವರದ್ದೆ ಪಕ್ಷದ ಸಚಿವರ ವಿರುದ್ಧ ವಾಕ್ಸಮರ ನಡೆಸಿದರು.
ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದಿರುವ ಕಾರಣ ನಮ್ಮ ಪಕ್ಷ ಅವರೊಬ್ಬರಿಂದಲೇ ಅಧಿಕಾರಕ್ಕೆ ಬಂದಿಲ್ಲ. ಸಚಿವರ ವರ್ತನೆ ಸರಿಯಿಲ್ಲ. ನಮ್ಮಂಥವರ ಸ್ಥಿತಿ ಹೀಗಾದರೆ ಜನಸಾಮಾನ್ಯರ ಕೈಗೆ ಯಾವಾಗ ಸಿಗುತ್ತಾರೆ ಇವರು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಸಚಿವ ಜವಬ್ದಾರಿ ಅರಿತು ತಾಳ್ಮೆಯಿಂದ ಕೆಲಸ ಮಾಡಬೇಕು ಎಂದು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.