ಮಗಳ ಓದಿಗಾಗಿ…Mother Strength
ಈ ಮಹಾ ತಾಯಿಯ ಶ್ರಮ ವ್ಯರ್ಥವಾಗದಿರಲಿ..!
ಮಗಳ ಓದಿಗಾಗಿ ಈ ತಾಯಿ ಮಾಡುತ್ತಿರುವ ಕೆಲಸ ತಿಳಿದರೆ, ಖಂಡಿತ ಹೆಮ್ಮೆ ಪಡ್ತೀರ…
ಭಾರತದಲ್ಲಿ ನಗರಗಳು ಬೆಳಿಯುತ್ತಿವೆ, ಜನ ಕೂಡ ಕಾಲಕ್ಕೆ ತಕ್ಕಂತೆ ತಮ್ಮ ವಿದ್ಯಾಭ್ಯಾಸ ಮತ್ತು ಜೀವನ ಶೈಲಿಯನ್ನು ಬದಲಿಸಿಕೊಂಡಿದ್ದಾರೆ. ಆದರೆ ನಮ್ಮ ದೇಶದ ಬಹಳಷ್ಟು ಕಡೆ ಇನ್ನು ಹೆಣ್ಣು ಮಕ್ಕಳ ಶಿಕ್ಷಣ ಕುಂಠಿತವಾಗಿ ಸಾಗುತ್ತಿದೆ, ಪ್ರಧಾನಿ ಮೋದಿಯವರು ಈ ಕುರಿತು ಜಾಗೃತಿಗಾಗಿ “ಭೇಟಿ ಬಚಾವ್ ಭೇಟಿ ಪಡಾವ್” ಎಂಬ ಯೋಜನೆಯನ್ನು ಮಾಡಿದ್ದಾರೆ. ಆದರೆ ಇಲ್ಲೊಬ್ಬ ತಾಯಿ ತನ್ನ ಮಗಳ ಶಿಕ್ಷಣಕ್ಕಾಗಿ ಏನು ಕೆಲಸ ಮಾಡುತ್ತಿದ್ದಾಳೆ ಕೇಳಿದರೆ ಒಂದು ಕ್ಷಣ ಅಚ್ಚರಿಯಾಗೋದಂತು ಖಚಿತ.
ಅಹ್ಮದಾಬಾದ್-ನ ನಿವಾಸಿಯಾಗಿರುವ ಸೋನಾಲ್‌ಬೇನ್ ಜೋಧಾ ಆಟೋ ರಿಕ್ಷ ಚಲಾಯಿಸಿ ಅದರಿಂದ ಬಂದ ಹಣವನ್ನು ಮಗಳ ವಿದ್ಯಾಭ್ಯಾಸಕ್ಕೆ ಖರ್ಚು ಮಾಡುತ್ತಿದ್ದಾರೆ. ಇವರ ವಯಸ್ಸು 45 ಆದರೂ ದುಡಿಯುವ ಛಲ ಮಾತ್ರ ಬಿಟ್ಟಿಲ್ಲ, ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತ ಎಂಬ ಸಮಾಜಕ್ಕೆ ತಿರುಗೇಟು ನೀಡುವಂತಿದೆ ಇವರ ಸಾಧನೆ.
ಸಖಿ ಗ್ರೂಪ್ ಎಂಬ ಎನ್‌ಜಿಒನೊಂದಿಗೆ ಕಾರ್ಯನಿರ್ವಹಿಸುತ್ತಿರುವ ಜೋಧಾ ಕಳೆದ ಕೆಲವು ವರ್ಷಗಳಿಂದ ಹಪ್ಪಳ ತಯಾರು ಮಾಡುತ್ತಿದ್ದಾರೆ. ಇತ್ತೀಚೆಗೆ ಅಹ್ಮದಾಬಾದ್ ಅನ್ನು ಹಸಿರು ನಗರ ಮಾಡುವ ಉದ್ದೇಶದಿಂದ ಕಡಿಮೆ ಬಡ್ಡಿ ದರದಲ್ಲಿ ಇ-ರಿಕ್ಷಾ ಪಡೆಯಲು ಸಾಲ ಸಿಗುತ್ತದೆ ಎಂಬುದನ್ನು ಅರಿತ ಜೋಧಾ, ಆಟೋ ಖರೀದಿಸಿ, ಆಟೋ ಓಡಿಸಲು ತರಬೇತಿ ಪಡೆದು ಚಾಲನಾ ಪರವಾನಗಿಯನ್ನು ಪಡೆದಿದ್ದಾರೆ.
ಪತಿ ಮತ್ತು ಮಗ ದುಡಿದರು ಸಹ ಇಂದಿಂದ ಕಾಲದಲ್ಲಿ ಜೀವನ ಸಾಗಿಸಲು ಕಷ್ಟವಾಗುತ್ತಿದೆಯಂತೆ ಇನ್ನು ನರ್ಸಿಂಗ್ ಓದುತ್ತಿರುವ ಮಗಳ ಉಜ್ವಲ ಭವಿಷ್ಯಕ್ಕಾಗಿ ಇವರು ರಿಕ್ಷಾ ಓದಿಸುತ್ತಿದ್ದಾರೆ. ಕೆಲವೊಮ್ಮೆ ರಾತ್ರಿ ಪಾಳಿ ಕೂಡ ಕೆಲಸ ಮಾಡುತ್ತಾರಂತೆ ಜೋಧಾ. ಸದಾ ಮುಗುಳು ನಗೆಯ ಮೂಲಕ ಪ್ರಯಾಣಿಕರನ್ನು ಸ್ವಾಗತಿಸುತ್ತಾರಂತೆ ಇವರು.
ಇವರು ದಿನಾಲೂ ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಅಸರ್ವಾದಿಂದ ಶಾಹೀಬಾಗ್‌ವರೆಗೆ ರಿಕ್ಷಾ ಓಡಿಸುವ ಜೋಧಾ ದಿನಕ್ಕೆ 1200 ದುಡಿಯುತ್ತಾರಂತೆ. ಅಲ್ಲದೆ ತಮ್ಮ ಹಿಂದಿನ ಹಪ್ಪಳ ಮಾಡುವ ವೃತ್ತಿಯನ್ನು ರಾತ್ರಿ ವೇಳೆ ನಿಭಾಯಿಸುತ್ತಿದ್ದಾರಂತೆ. ಜೋಧಾ ಅವರ ಈ ಅದ್ಭುತ ಮತ್ತು ಅನನ್ಯ ತ್ಯಾಗಕ್ಕೆ ಮನೆಯವರೆಲ್ಲರು ಉತ್ತಮವಾಗಿ ಸಾತ್ ನೀಡುತ್ತಿದ್ದಾರಂತೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882