ಮುಸ್ಲಿಂ ಸಹಕಾರಿ ಸಂಘದ ಕಾರ್ಯಕ್ರಮ
ಶೇರುದಾರರ ನಂಬಿಕೆಯೇ ಸಂಘದ ಉಸಿರು
ಯಾದಗಿರಿ, ಶಹಾಪುರ: ಪರಸ್ಪರ ಸಹಕಾರ ಮನೋಭಾವದಿಂದ ಸಹಕಾರಿ ಸಂಘ ಜನ್ಮ ತಾಳಿದ್ದು, ಶೇರುದಾರರ ವಿಶ್ವಾಸವೇ ಸಂಘದ ಉಸಿರಾಗಿದ್ದು, ಮುಸ್ಲಿಂ ಸೌಹಾರ್ಧ ಸಹಕಾರ ಸಂಘ ಸ್ವಂತ ೨ ಕೋಟಿ ಬೆಲೆ ಬಾಳುವ ಕಟ್ಟಡ ಹೊಂದಿರುವದು ಉತ್ತಮ ಬೆಳೆವಣಿಗೆಯಾಗಿದೆ ಎಂದು ಬೆಂಗಳೂರಿನ ಸಂಯುಕ್ತ ಸೌಹಾರ್ಧ ಸಹಕಾರಿ ಸಂಘಗಳ ನಿರ್ದೇಶಕಿ ಶೈಲಜಾ ತಪಲಿ ತಿಳಿಸಿದರು.
ನಗರದ ಮುಸ್ಲಿಂ ಸೌಹರ್ಧ ಸಹಕಾರ ಸಂಘದ ನೂತನ ಕಟ್ಟಡ ಹಾಗೂ ಸಂಘದ ಕಾರ್ಯಾಲಯವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ಸಂಘದಲ್ಲಿ ಅಂದಮೇಲೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬರುವುದು ಸಹಜ. ಅವೆಲ್ಲವನ್ನು ಸರಿದೂಗಿಸಿಕೊಂಡು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆರ್ಥಿಕ ನೆರವಿನ ಅಭಯ ನೀಡುವುದು ಮುಖ್ಯ. ಸಾಲ ಪಡೆದವರು ಸಹ ನಿಗದಿತ ಅವಧಿಯಲ್ಲಿ ಮರು ಪಾವತಿ ಮಾಡಬೇಕು. ೨೭ ವರ್ಷದ ಹಿಂದೆ ಸಂಘ ಸ್ಥಾಪನೆಯಾಗಿದೆ. ೧.೪೬ ಕೋಟಿ ಸಾಲ ವಿತರಿಸಿದೆ. ೫೬ ಲಕ್ಷ ಠೇವಣಿ ಇದೆ. ಅಲ್ಲದೆ ೨ ಕೋಟಿಗೂ ಅಧಿಕ ಮೌಲ್ಯದ ಕಟ್ಟಡ ಹೊಂದಿರುವುದು ಸಹಕಾರಿ ಸಂಘದ ಗರಿಯಾಗಿದೆ ಎಂದರು.
ಬೆಂಗಳೂರಿನ ಸಂಯುಕ್ತ ಸೌಹರ್ಧ ಸಹಕಾರಿ ಸಂಘದ ನಿರ್ದೇಶಕ ವ್ಯವಸ್ಥಾಪ ಶರಣಗೌಡ ಪಾಟೀಲ್ ಮಾತನಾಡಿ, ಸಹಕಾರ ಸಂಘಗಳು ಹೊಸ ಬದಲಾವಣೆಗೆ ಮುಂದಡಿ ಇಡಬೇಕು. ಆಡಳಿತ ಮಂಡಳಿಯು ಪಾರದರ್ಶಕವಾಗಿ ಆಡಳಿತ ನೀಡಬೇಕು. ಇ-ಸ್ಟ್ಯಾಂಪಿಗ್, ಡಿ.ಡಿ. ಹೀಗೆ ಹಲವಾರು ಸೇವೆಗಳನ್ನು ಗ್ರಾಹಕರಿಗೆ ಒದಗಿಸಬೇಕು ಎಂದರು.
ಸಂಯುಕ್ತ ಸೌಹಾರ್ಧ ಸಹಕಾರಿ ಸಂಘಗಳ ವಿಭಾಗೀಯ ಅಧಿಕಾರಿ ರಾಜಶೇಖರ ಎಚ್. ಮುಸ್ಲಿಂ ಸೌಹರ್ಧ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಯೂಸೂಫ್ ಅತಾವುರ್ ರಹಿಮಾನ ಸಿದ್ದಕಿ, ಬ್ಯಾಂಕಿನ ವ್ಯವಸ್ಥಾಪಕ ಮಹಮ್ಮದ ಶಕೀಲ ಮುಲ್ಲಾ, ಕಾನೂನು ಸಲಹೆಗಾರ ಸಯ್ಯದ ಇಬ್ರಾಹಿಂಸಾಬ್ ಜಮದಾರ, ಹಾಗೂ ಮುಖಂಡರಾದ ಸಯ್ಯದ ಮುಸ್ತಫಾ, ನಯೀಮ್ ಪಟೇಲ್, ಮುಸ್ತಫಾ ಮೆಕ್ಕಾ, ನಸುರುದ್ದೀನ ಲಲ್ಲೋಟಿ, ಇಸ್ಲಾಯಿಲ್ ಸಾಬ್ ಚಾಂದ, ಸಯ್ಯದ ಖಾದ್ರಿ, ಸಯ್ಯದ ನೂರುದ್ದಿನ ಖಾದ್ರಿ, ಲಾಲ್ ಅಹ್ಮದ ಖುರೇಶಿ, ಹಾಜಿಬಾಬ್, ಸಯ್ಯದ ಇಸಾಕ ಹುಸೇನಿ, ನಬಿಸಾಬ್ ಶಿರವಾಳ, ಆವುದ್ ಚಾವುಸ್, ನಗರ ಆಶ್ರಯ ಸಮಿತಿ ಅಧ್ಯಕ್ಷ ವಸಂತ ಸುರಪುರಕರ್, ಹಣಮಂತರಾಯಗೌಡ, ಚಂದ್ರಶೇಖರ ಲಿಂಗದಳ್ಳಿ, ವಿಶ್ವನಾಥರಡ್ಡಿ ಪಾಟೀಲ್, ಮಲ್ಕಪ್ಪ ಪಾಟೀಲ್, ನಬಿಸಾಬ್ ಹತ್ತಿಗೂಡೂರ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ಇದ್ದರು.
——————-