BREAKING ಸರ್ಕಾರ ಅಸ್ಥಿರಗೊಳಿಸಲು ಯತ್ನ – ಸಿಎಂ ಸಿದ್ರಾಮಯ್ಯ
ನಮ್ಮ ಪಕ್ಷದ ಯಾರೊಬ್ಬರು ಆಮಿಷಕ್ಕೆ ಒಳಗಾಗಲ್ಲ - ಸಿದ್ದು
BREAKING ಸರ್ಕಾರ ಅಸ್ಥಿರಗೊಳಿಸಲು ಯತ್ನ – ಸಿಎಂ ಸಿದ್ರಾಮಯ್ಯ
ನಮ್ಮ ಪಕ್ಷದ ಯಾರೊಬ್ಬರು ಆಮಿಷಕ್ಕೆ ಒಳಗಾಗಲ್ಲ – ಸಿದ್ದು
ವಿವಿ ಡೆಸ್ಕ್ಃ ನಮ್ಮ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನ ನಡೆಸಿದೆ. ಆದರೆ ನಮ್ಮ ಪಕ್ಷದ ಯಾವೊಬ್ಬರು ಆಮಿಷಕ್ಕೆ ಒಳಗಾಗಲ್ಲವೆಂದು ಸಿಎಂ ಸಿದ್ರಾಮಯ್ಯ ಹೇಳಿಕೆ ನೀಡಿದ್ದಾರೆ.
ಉಡುಪಿಯಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಸರ್ಕಾರ ಅಸ್ಥಿರಕ್ಕೆ ಪ್ರಯತ್ನ ನಡೆದಿರುವದು ನಿಜ. ಬಿಜೆಪಿ ಕೆಲಸವೇ ಅದೇ ಯಾಗಿದೆ.
ಬಿಜೆಪಿ ಅವರು ಶಾಸಕರಿಗೆ ಆಮಿಷವೊಡ್ಡಿ ಸರ್ಕಾರ ಬೀಳಿಸಿ ಈ ಮೊದಲಿನಂತೆ ಅಧಿಕಾರಕ್ಕೆ ಬರುವ ಲೆಕ್ಕ ಹಾಕುತ್ತಿದೆ. ಅದು ಅಸಾಧ್ಯ ಎಂದಿದ್ದಾರೆ.
ಒಟ್ಟಾರೆ ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ ಎಂಬುದು ಮೇಲ್ನೋಟಕ್ಕೆ ಬರುತ್ತಿದೆ. ಆದರೆ ಬಿಜೆಪಿ ಹೇಳಿಕೆ ಪ್ರಕಾರ ಸಿಎಂ ಖುರ್ಚಿಗಾಗಿ ಸರ್ಕಾರವೇ ಬೀಳಲಿದೆ. ಅವರ ಪಕ್ಷದ ಶಾಸಕರಿಂದಲೇ ಸರ್ಕಾರ ಅಸ್ಥಿರವಾಗಲಿದೆ. ನಮ್ಮಪಕ್ಷಕ್ಕೆ ಅವಕಾಶ ಸಿಕ್ಕರೆ ನಾವು ಆಡಳಿತ ಚುಕ್ಕಾಣಿ ಹಿಡಿಯಲು ಸಹಜ ಲೆಕ್ಕಾಚಾರ ಹಾಕಬಹುದು ಅದರಲ್ಲೇನಿದೆ ಎಂಬುದು ಬಿಜೆಪಿಯ ಹಲವರ. ಅಭಿಪ್ರಾಯವಾಗಿದೆ.
ರಾಜ್ಯದ ರಾಜಕೀಯ ಏನಾದರೂ ಆಗಬಹುದು ಯಾವುದಕ್ಕೂ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟದು ಯಾವ ಪಕ್ಷದ ಲೆಕ್ಕಾಚಾರ ಗೆಲ್ಲಲಿದೆ ಕಾದು ನೋಡಬೇಕಷ್ಟೆ.