Homeಪ್ರಮುಖ ಸುದ್ದಿಮಹಿಳಾ ವಾಣಿವಿನಯ ವಿಶೇಷ

Kotak Life Insurance: SSLC & PUC ಮುಗಿಸಿದವರಿಗೆ 30,000 ಸ್ಕಾಲರ್ಶಿಪ್

ಕೋಟಕ್ ಲೈಫ್ ಇನ್ಶೂರೆನ್ಸ್ ಸ್ಕಾಲರ್‌ಶಿಪ್ ಪ್ರೋಗ್ರಾಂ 2024-25 ನಲ್ಲಿ ನೀವು SSLC ಹಾಗೂ PUCಯಲ್ಲಿ ಶೇಕಡ 65 ಅಂಕ ಗಳಿಸಿದ್ದವರಿಗೆ ಇದರ ಸೌಲಭ್ಯಗಳು ಸಿಗಲಿವೆ. ಅರ್ಜಿ ಸಲ್ಲಿಸುವುದು ಹೇಗೆ.. ಏನೆಲ್ಲಾ ಅರ್ಹತೆಗಳು ಬೇಕು ಎನ್ನುವುದನ್ನು ತಿಳಿಯೋಣ.

ಯಾವುದು ಈ ಸ್ಕಾಲರ್ಶಿಪ್? ಯಾರು Apply ಮಾಡಬಹುದು?

ವಿದ್ಯಾರ್ಥಿಗಳಿಗೆ ವಾಣಿಜ್ಯ ವಿಭಾಗದಲ್ಲಿ ತಮ್ಮ ಸ್ನಾತಕಪೂರ್ವ ವಿದ್ಯಾಭ್ಯಾಸವನ್ನು ಮುಂದುವರೆಸಲು ಆರ್ಥಿಕ ಸಹಕಾರವನ್ನು ನೀಡಲು ಕೋಟಕ್ ಲೈಫ್ ಇನ್ಶೂರೆನ್ಸ್ ಕಂಪನಿ ಲಿ.ನ ಉಪಕ್ರಮವಾಗಿದೆ.

ಅರ್ಹತೆಗಳು

* ತಮಿಳುನಾಡು ಮತ್ತು ಮಹಾರಾಷ್ಟ್ರದ ನಿವಾಸಿಗಳಾದ ವಿದ್ಯಾರ್ಥಿಗಳಿಗೆ
ಲಭ್ಯವಿದೆ. (ಕರ್ನಾಟಕದ ವಿದ್ಯಾರ್ಥಿಗಳು ಅಲ್ಲಿ ಕಲಿಯುತ್ತಿದ್ದರೂ ಸಹ)
* ವಿದ್ಯಾರ್ಥಿಗಳು ತಮಿಳುನಾಡು ಮತ್ತು ಮಹಾರಾಷ್ಟ್ರದ ಎಂಟು ನಿರ್ದಿಷ್ಟ
ಕಾಲೇಜುಗಳಲ್ಲಿ ಯಾವುದಾದರೂ ಒಂದರಲ್ಲಿ ಬಿ.ಕಾಂ. ಮೊದಲ ವರ್ಷದ
ಕಾರ್ಯಕ್ರಮಕ್ಕೆ ದಾಖಲಾಗಿರಬೇಕು.

ಕಾಲೇಜುಗಳ ಪಟ್ಟಿ:
* ಎ. ವೀರಯ್ಯ ಮೆಮೊರಿಯಲ್ ಶ್ರೀ ಪುಷ್ಪಂ ಕಾಲೇಜ್
(ತಾಂಜಾವೂರ್, ತಮಿಳುನಾಡು)
* ನಾಡರ್ ಮಹಾಜನ ಸಂಗಮ್ ಎಸ್. ವೆಲ್ಲೈಚಾಮಿ ನಾಡರ್
ಕಾಲೇಜ್ (ಮಧುರೈ, ತಮಿಳುನಾಡು)
* ಎಡಾಯತಂಗುಡಿ ಜಿ. ಎಸ್. ಪಿಳ್ಳೈ ಆರ್ಟ್ಸ್ ಅಂಡ್ ಸೈನ್ಸ್
ಕಾಲೇಜ್ (ನಾಗಪಟ್ಟಣಂ, ತಮಿಳುನಾಡು)
* ಜೈ ಹಿಂದ್ ಸಿಂಧು ಎಜುಕೇಶನ್ ಟ್ರಸ್ಟ್ಸ್ ಮಂಘನ್ಮಾಲ್
ಉಧರಂ ಕಾಲೇಜ್ ಆಫ್ ಕಾಮರ್ಸ್ (ಪುಣೆ, ಮಹಾರಾಷ್ಟ್ರ)
* ಗೋಖಲೆ ಎಜುಕೇಶನ್ ಸೊಸೈಟೀಸ್ ಬಿ. ವೈ. ಕೆ. (ಸಿನ್ನಾರ್)
ಕಾಲೇಜ್ ಆಫ್ ಕಾಮರ್ಸ್ (ನಾಶಿಕ್, ಮಹಾರಾಷ್ಟ್ರ)
* ಎಲ್‌ಆರ್‌ಡಿ ಅಂಡ್ ಎಸ್‌ಆರ್‌ಪಿ ಕಾಲೇಜ್ ಫಾರ್ ವಿಮೆನ್
(ನಾಗ್ಪುರ್, ಮಹಾರಾಹ್ಟ್ರ)
* ವ್ಯಾಸ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜ್ (ಸೇಲಂ,
ತಮಿಳುನಾಡು)
* ಧರ್ಮಪುರಂ ಅಧೀನಂ ಆರ್ಟ್ಸ್ ಕಾಲೇಕ್ (ಮೈಲಾಡುತುರೈ,
ತಮಿಳುನಾಡು)

* ಅರ್ಜಿದಾರರು 10 ಮತ್ತು 12ನೇ ತರಗತಿಗಳಲ್ಲಿ 65% ಅಥವಾ ಹೆಚ್ಚಿನ
ಅಂಕಗಳನ್ನು ಪಡೆದಿರಬೇಕು.
* ಅರ್ಜಿದಾರರು 12ನೇ ತರಗತಿಯನ್ನು 2023-24ರ ವರ್ಷದಲ್ಲಿ
ಉತ್ತೀರ್ಣರಾಗಿರಬೇಕು
* ಅರ್ಜಿದಾರರ ವಾರ್ಷಿಕ ಕುಟುಂಬ ಆದಾಯವು ರೂ. 3,60,000 ಅಥವಾ
ಕಡಿಮೆ ಇರಬೇಕು.

ಎಷ್ಟು ಸ್ಕಾಲರ್ಶಿಪ್ ಸಿಗಲಿವೆ:
ವಾರ್ಷಿಕ ರೂ. 30,000ದ ವರೆಗೆ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Last Date to Apply) 31-07-2024

ಆನ್‌ಲೈನಲ್ಲಿ ಅರ್ಜಿ ಹಾಕಿ: (Application mode)
Short Url: http://www.b4s.in/nwmd/KLISP2

Related Articles

Leave a Reply

Your email address will not be published. Required fields are marked *

Back to top button